ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!

Zaheer Abbas names player whose batting gives him satisfaction

ಇಸ್ಲಮಾಬಾದ್, ಜನವರಿ 14: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಲ್‌ ರೌಂಡರ್ ಜಹೀರ್ ಅಬ್ಬಾಸ್, ಭಾರತದ ನಾಯಕ ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಎಂದಿದ್ದಾರೆ. ಆದರೆ ಕೊಹ್ಲಿಗಿಂತ ಭಾರತದ ಇನ್ನೊಬ್ಬ ಆಟಗಾರನ ಆಟ ನೋಡೋಕೆ ಹೆಚ್ಚು ತೃಪ್ತಿ ನೀಡುತ್ತೆ ಎಂದೂ ಜಹೀರ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಭಾರತಭಾರತ vs ಆಸ್ಟ್ರೇಲಿಯಾ: ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಭಾರತ

'ಕೊಹ್ಲಿ ಒಬ್ಬ ಶ್ರೇಷ್ಠ ಆಟಗಾರ, ಆದರೆ ರೋಹಿತ್ ಶರ್ಮಾ ಅವರ ಸೊಗಸಾದ ಹೊಡೆತಗಳು ನೋಡೋಕೆ ಹೆಚ್ಚು ತೃಪ್ತಿ ನೀಡುತ್ತೆ. ಅವರು ಹೊಡೆತವನ್ನು ರಚಿಸುವ ವಿಧಾನ ಅವರ ಕಲೆ. ಕೊಹ್ಲಿ ಹೊಂದಿರದ ವಿಚಾರವಿದ್ದರೆ ಅದು ಈ ಕಲೆಯೇ' ಎಂದು ಅಬ್ಬಾಸ್, ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರೋಹಿತ್‌ದು ಅಪರೂಪದ ಶೈಲಿ

ರೋಹಿತ್‌ದು ಅಪರೂಪದ ಶೈಲಿ

ರೋಹಿತ್ ಅವರದ್ದು ಅಪರೂಪದ ಬ್ಯಾಟಿಂಗ್ ಶೈಲಿಯಾದ್ದರಿಂದ ಅವರ ಬ್ಯಾಟಿಂಗ್‌ ನೋಡುವುದಕ್ಕೆ ನಾನು ಆದ್ಯತೆ ನೀಡುತ್ತೇನೆ ಎಂದು ಜಹೀರ್ ಹೇಳಿದರು. 'ರೋಹಿತ್ ಬ್ಯಾಟಿಂಗ್ ಮಾಡುತ್ತಿದ್ದರೆ ನಾನ್ಯಾವತ್ತಿಗೂ ಟಿವಿ ಸ್ವಿಚ್‌ ಆಫ್‌ ಮಾಡಲಾರೆ,' ಎಂದು ಅಬ್ಬಾಸ್ ಹೇಳಿದರು.

ಟೀಮ್ ಇಂಡಿಯಾದ ಬಗ್ಗೆ ಮೆಚ್ಚುಗೆ

ಟೀಮ್ ಇಂಡಿಯಾದ ಬಗ್ಗೆ ಮೆಚ್ಚುಗೆ

ಕೊಹ್ಲಿ ಭಾರತದ ಬೆನ್ನೆಲುಬು ನಿಜ. ಆದರೆ ರೋಹಿತ್ ಬ್ಯಾಟಿಂಗ್ ನೋಡಲು ಚಂದ. ಭಾರತದವರು ನಮ್ಮಂತಲ್ಲ. ಅವರು ರಾಜಕೀಯ ಅಸೂಯೆಗಳಿಂದ ದೂರ ಉಳಿದರು. ಅಲ್ಲಿ ಜೂನಿಯರ್-ಸೀನಿಯರ್ ನಡುವೆ ಕಚ್ಚಾಟವಿಲ್ಲ. ಹೀಗಾಗಿಯೇ ಅಲ್ಲಿ ಶ್ರೇಷ್ಠ ಆಟಗಾರರು ಹುಟ್ಟಿಕೊಂಡಿದ್ದಾರೆ,' ಎಂದು ಅಬ್ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಬೆನ್ನೆಲುಬು

ಭಾರತದ ಬೆನ್ನೆಲುಬು

ವಿಶ್ವಮಟ್ಟದಲ್ಲಿ ಭಾರತ ಬಲಿಷ್ಠ ತಂಡವಾಗಿ ಬೆಳೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಬ್ಬಾಸ್, 'ಭಾರತದವರು ಸರಿಯಾದ ಕ್ಷೇತ್ರಗಳಲ್ಲಿ ಶ್ರಮ ವಹಿಸಿದ್ದಾರೆ. ಅವರಲ್ಲಿ ಸಾಕಷ್ಟು ಹಣವೂ ಇದೆ. ಅಲ್ಲದೆ ದೇಸೀಯ ವ್ಯವಸ್ಥೆಯಲ್ಲೂ ಅವರು ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹೀಗಾಗಿಯೇ ಭಾರತ ವಿಶ್ವಕ್ರಿಕೆಟ್‌ನಲ್ಲಿ ಪಾರಮ್ಯ ಮೆರೆಯುತ್ತಿದೆ,' ಎಂದರು.

ಟೆಸ್ಟ್‌ನಲ್ಲಿ 5062 ರನ್

ಟೆಸ್ಟ್‌ನಲ್ಲಿ 5062 ರನ್

ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್‌ ತಂಡದ ಪರ ಅಬ್ಬಾಸ್ 78 ಪಂದ್ಯಗಳಲ್ಲಿ 5062 ರನ್, 62 ಏಕದಿನ ಪಂದ್ಯಗಳಲ್ಲಿ 2572 ರನ್ ಗಳಿಸಿದ್ದಾರೆ. ಇನ್ನು 14 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 3 ವಿಕೆಟ್‌ಗಳು, 12 ಏಕದಿನ ಇನ್ನಿಂಗ್ಸ್‌ಗಳಲ್ಲಿ 7 ವಿಕೆಟ್‌ ಪಡೆದ ದಾಖಲೆ ಹೊಂದಿದ್ದಾರೆ.

Story first published: Tuesday, January 14, 2020, 16:49 [IST]
Other articles published on Jan 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X