ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಸರಣಿ: ಜಿಂಬಾಬ್ವೆ ವಿರುದ್ಧ 17 ರನ್‌ಗಳ ಸೋಲು ಅನುಭವಿಸಿದ ಬಾಂಗ್ಲಾದೇಶ

Zim vs Ban t20 series: Bangladesh lost 1st t20 match by 17 runs against Zimbabwe

ಜಿಂಬಾಬ್ವೆ ಪ್ರವಾಸ ಕೈಗೊಂಡು ವೈಟ್‌ಬಾಲ್ ಸರಣಿಯಲ್ಲಿ ಪಾಲ್ಗೊಂಡಿರುವ ಬಾಂಗ್ಲಾದೇಶ ತಂಡ ಮೊದಲ ಪಂದ್ಯದಲ್ಲಿಯೇ ಆಘಾತ ಅನುಭವಿಸಿದೆ. ಮೂರು ಪಂದ್ಯಗಳ ಟು20 ಸರಣಿಯಲ್ಲಿ ಮೊದಲ ಪಂದ್ಯ ಇಂದು ಹರಾರೆಯಲ್ಲಿ ನಡೆದಿದ್ದು ಪ್ರವಾಸಿ ಬಾಂಗ್ಲಾದೇಶ ತಂಡವನ್ನು ಆತಿಥೆಯ ಜಿಂಬಾಬ್ವೆ 17 ರನ್‌ಗಳ ಅಂತರದಿಂದ ಮಣಿಸಿದೆ. ಈ ಮೂಲಕ ಸರಣಿಯಲ್ಲಿ ಮೇಲುಗೈ ಸಾಧಿಸಿದೆ.

ಕ್ರೇಗ್ ಇರ್ವಿನ್ ನಾಯಕತ್ವದಲ್ಲಿ ಜಿಂಬಾಬ್ವೆ ಅದ್ಭುತವಾದ ಪ್ರದರ್ಶನ ನೀಡಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅಮೋಘ ಆಟವಾಡಿದ ಜಿಂಬಾಬ್ವೆ ಬಳಿಕ ಬೌಲಿಂಗ್‌ನಲ್ಲಿಯೂ ಬಾಂಗ್ಲಾದೇಶದ ವಿರುದ್ಧ ಮೇಲುಗೈ ಸಾಧಿಸಿದೆ. ಹೀಗಾಗಿ ಪ್ರವಾಸಿ ಬಾಂಗ್ಲಾದೇಶ ತಂಡ ಆಘಾತವನ್ನು ಅನುಭವಿಸಿತು. ಈ ಗೆಲುವಿನಿಂದಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಜಿಂಬಾಬ್ವೆ ತಂಡ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

IND vs WI: ತನ್ನ ಅಂತಿಮ ಗುರಿ ಏನೆಂದು ಬಹಿರಂಗಪಡಿಸಿದ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್IND vs WI: ತನ್ನ ಅಂತಿಮ ಗುರಿ ಏನೆಂದು ಬಹಿರಂಗಪಡಿಸಿದ ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಜಿಂಬಾಬ್ವೆ

ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಜಿಂಬಾಬ್ವೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ವೇಸ್ಲಿ ಮಾಧೆವೆರೆ ಹಾಗೂ ಸಿಕಂದರ್ ರಾಜಾ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಿತು. ಈ ಇಬ್ಬರು ಆಟಗಾರರು ಕೂಡ ಅರ್ಧ ಶತಕವನ್ನು ಸಿಡಿಸಿ ತಂಡಕ್ಕೆ ನೆರವಾದರು. ಅದರಲ್ಲೂ ಸಿಕಂದರ್ ರಾಜಾ ಕೇವಲ 2 ಎಸೆತಗಳಲ್ಲಿ ರನ್‌ ಸಿಡಿಸಿ ಬಾಂಗ್ಆದೇಶದ ಬೌಲರ್‌ಗಳ ಮೇಲೆ ಪ್ರಹಾರವನ್ನೇ ನಡೆಸಿದ್ದಾರೆ. ಹೀಗಾಗಿ ಕೇವಲ 3 ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್‌ಗಳಲ್ಲಿ ಜಿಂಬಾಬ್ವೆ 205 ರನ್‌ಗಳಿಸಿತು.

188 ರನ್‌ಗೆ ಬಾಂಗ್ಲಾ ಹೋರಾಟ ಅಂತ್ಯ

188 ರನ್‌ಗೆ ಬಾಂಗ್ಲಾ ಹೋರಾಟ ಅಂತ್ಯ

ಇನ್ನು 206 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಿಂದಲೇ ಹಿನ್ನಡೆ ಅನುಭವಿಸಿತು. ಒಂದಿ ಹಂತಕ್ಕೆ ಬಾಂಗ್ಲಾದೇಶದ ಬ್ಯಾಟರ್‌ಗಳು ಹೋರಾಟ ನಡೆಸಿದರಾದರೂ ಅದರಲ್ಲೂ ದೊಡ್ಡ ಮಟ್ಟದ ಯಶಸ್ಸು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ನೂರುಲ್ ಹಸನ್ ಸ್ಪೋಟಕ ಬ್ಯಾಟಿಂಗ್ ನಡೆಸಿ ಮಿಂಚಿದರು. ಆದರೆ ಇದು ಬಾಂಗ್ಲಾದೇಶಕ್ಕೆ ಹೆಚ್ಚಿನ ಉಪಯೋಜವಾಗಲಿಲ್ಲ. ಅಂತಿಮವಾಗಿ ಬಾಂಗ್ಲಾದೇಶ ತಂಡ 188 ರನ್‌ಗಳಿಗೆ ತನ್ನ ಎಲ್ಲಾ ಹೋರಾಟವನ್ನು ಅಂತ್ಯಗೊಳಿಸಿದೆ. ಈ ಮೂಲಕ 17 ರನ್‌ಗಳ ಅಂತರದಿಂದ ಬಾಂಗ್ಲಾದೇಶ ತಂಡ ಜಿಂಬಾಬ್ವೆಗೆ ಶರಣಾಯಿತು. ಇನ್ನು ಈ ಸರಣಿಯಲ್ಲಿ ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡಗಳು ಊರು ಪಂದ್ಯಗಳ ಟಿ20 ಸರಣಿಯ ಬಳಿಕ ಏಕದಿನ ಸರಣಿಯಲ್ಲಿಯೂ ಮುಖಾಮುಖಿಯಾಗಲಿದೆ.

ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ಜಿಂಬಾಬ್ವೆ ಪ್ಲೇಯಿಂಗ್ XI: ರೆಗಿಸ್ ಚಕಬ್ವಾ (ವಿಕೆಟ್ ಕೀಪರ್), ಕ್ರೇಗ್ ಎರ್ವಿನ್ (ನಾಯಕ), ವೆಸ್ಲಿ ಮಾಧೆವೆರೆ, ಸೀನ್ ವಿಲಿಯಮ್ಸ್, ಸಿಕಂದರ್ ರಜಾ, ಮಿಲ್ಟನ್ ಶುಂಬಾ, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ವೆಲ್ಲಿಂಗ್ಟನ್ ಮಸಕಡ್ಜಾ, ರಿಚರ್ಡ್ ನಾಗರವಾ, ತನಕಾ ಚಿವಾಂಗಾ
ಬೆಂಚ್: ಟೋನಿ ಮುನ್ಯೊಂಗಾ, ವಿಕ್ಟರ್ ನ್ಯುಚಿ, ತಡಿವಾನಾಶೆ ಮರುಮನಿ, ರಾಯ್ ಕೈಯಾ

ಬಾಂಗ್ಲಾದೇಶ ಪ್ಲೇಯಿಂಗ್ XI: ಲಿಟ್ಟನ್ ದಾಸ್, ಅನಾಮುಲ್ ಹಕ್, ನಜ್ಮುಲ್ ಹೊಸೈನ್ ಶಾಂಟೊ, ಮುನಿಮ್ ಶಹರಿಯಾರ್, ಮೊಸದ್ದೆಕ್ ಹೊಸೈನ್, ಅಫೀಫ್ ಹೊಸೈನ್, ನೂರುಲ್ ಹಸನ್ (c & wk), ನಸುಮ್ ಅಹ್ಮದ್ , ತಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಶೋರಿಫುಲ್ ಇಸ್ಲಾಂ
ಬೆಂಚ್: ಪರ್ವೇಜ್ ಹೊಸೈನ್ ಎಮನ್, ಮಹೇದಿ ಹಸನ್, ಮೆಹಿದಿ ಹಸನ್, ಹಸನ್ ಮಹಮೂದ್

Story first published: Saturday, July 30, 2022, 22:10 [IST]
Other articles published on Jul 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X