ಅಸಾಧಾರಣ ಆಟಗಾರರಿಂದಾಗಿ ಭಾರತದ ವಿರುದ್ಧ ಇಂಗ್ಲೆಂಡ್ ಗೆಲ್ಲಲಿದೆ: ಆ್ಯಂಡಿ ಫ್ಲವರ್

ಕ್ರಿಕೆಟ್ ಲೋಕದ ಎರಡು ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಹಣಾಹಣಿಯನ್ನು ನಡೆಸಲು ಇನ್ನು ಬೆರಳೆಣಿಕೆಯಷ್ಟು ದಿನಗಳು ಮಾತ್ರವೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್‌ ಪ್ರೇಮಿಗಳ ಹಾಗೂ ಪಂಡಿತರ ಚಿತ್ತ ಈ ಬಹುನಿರೀಕ್ಷಿತ ಸರಣಿಯತ್ತ ಕೇಂದ್ರೀಕೃತವಾಗಿದೆ. ಜಿಂಬಾಬ್ವೆ ತಂಡದ ಮಾಜಿ ನಾಯಕ ಆ್ಯಂಡಿ ಫ್ಲವರ್ ಈ ಸರಣಿಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ತಂಡ ಅಸಾಧಾರಣವಾದ ಆಟಗಾರರ ಸಂಯೋಜನೆಯನ್ನು ಹೊಂದಿದೆ. ಆಟಗಾರರಲ್ಲಿರುವ ಈ ಸಾಮರ್ಥ್ಯದ ಕಾರಣದಿಂದಾಗಿ ಅವರು ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ತಾವು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ ಎಂದು ಆ್ಯಂಡಿ ಫ್ಲವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2021: ಮಿನಿ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯಲಿದ್ದಾರೆ ಈ 5 ಆಟಗಾರರು

ಇನ್ನು ಇದೇ ಸಂದರ್ಭದಲ್ಲಿ ಆ್ಯಂಡಿ ಫ್ಲವರ್ ಟೀಮ್ ಇಂಡಿಯಾ ಆಸ್ಟ್ರೇಲಿಯಾದಲ್ಲಿ ಸಾಧಿಸಿದ ಗೆಲುವನ್ನು ಉಲ್ಲೇಖಿಸಿದರು. ಆದರೆ ಇದೇ ಸಂದರ್ಭದಲ್ಲಿ ಈಗ ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‌ನಲ್ಲಿ ಅಂಡರ್‌ಡಾಗ್ಸ್‌ಆಗಿ ಉಳಿದುಕೊಂಡಿಲ್ಲ ಎಂಬುದನ್ನು ಕೂಡ ಹೇಳಿದ್ದಾರೆ.

"ಭಾರತವು ಆಸ್ಟ್ರೇಲಿಯಾದ ನೆಲದಲ್ಲಿ ಟಿ 20 ಸರಣಿ, ಮೆಲ್ಬೋರ್ನ್ ಮತ್ತು ಬ್ರಿಸ್ಬೇನ್ ಟೆಸ್ಟ್ ಗೆಲುವು ಸಾಧಿಸಿತು. ಒಂದೆರಡು ವರ್ಷದ ಹಿಂದೆಯೂ ಆಸಿಸ್ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದಿಕೊಂಡಿತ್ತು. ಇದು ಆಸ್ಟ್ರೇಲಿಯಾಗೆ ಪ್ರವಾಸ ಮಾಡುವ ತಂಡಗಳಿಗೆ ಗೆಲ್ಲಲು ಸಾಕಷ್ಟು ಅವಕಾಶಗಳಿವೆ ಎಂದು ತೋರಿಸುತ್ತದೆ" ಎಂದು ಆ್ಯಂಡಿ ಫ್ಲವರ್ ಹೇಳಿದ್ದಾರೆ.

ಸ್ಟೇಡಿಯಂ ಒಳಗೆ ಅಭಿಮಾನಿಗಳಿಗೆ ಪ್ರವೇಶ ನೀಡಲು ಬಿಸಿಸಿಐ ಸಿದ್ಧತೆ

ಆಟದಲ್ಲಿ ಸಾಕಷ್ಟು ಸಂಗತಿಗಳು ಆಟದ ದಿನದ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಅವಕಾಶಗಳನ್ನು ತಂಡಕ್ಕೆ ಪೂರಕವಾಗಿ ಪರಿವರ್ತಿಸುವ ಆಟಗಾರರ ಪ್ರದರ್ಶನ ಸಾಮರ್ಥ್ಯ ಫಲಿತಾಂಶವನ್ನು ನಿರ್ಧರಿಸುತ್ತದೆ. ಇಂಗ್ಲೆಂಡ್ ತಂಡ ಅದ್ಭುತವಾದ ಆಟಗಾರರನ್ನು ಒಳಗೊಂಡಿದ್ದು ಎಲ್ಲಾ ಮಾದರಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಆ್ಯಂಡಿ ಫ್ಲವರ್ ಇಂಗ್ಲೆಂಡ್ ತಂಡದ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, January 28, 2021, 21:20 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X