ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ನಡೆಯೋ ವಿಶ್ವಕಪ್ ಕ್ವಾಲಿಫೈಯರ್ಸ್‌ಗೆ ಜಿಂಬಾಬ್ವೆ ಆತಿಥ್ಯ

Zimbabwe to host qualifiers of 2023 ODI World Cup to be held in India

ನವದೆಹಲಿ: ಭಾರತದಲ್ಲಿ ನಡೆಯಲಿರುವ 2023ರ ಏಕದಿನ ವಿಶ್ವಕಪ್ ಟೂರ್ನಿಯ ಅರ್ಹತಾ ಪಂದ್ಯಗಳಿಗೆ ಜಿಂಬಾಬ್ವೆ ಆತಿಥ್ಯ ವಹಿಸಲಿದೆ. ಕ್ವಾಲಿಫೈಯರ್ ಪಂದ್ಯಗಳು 2023ರ ಜೂನ್ 18ರಿಂದ ಜುಲೈ 9ರ ವರೆಗೆ ನಡೆಯಲಿದೆ. ಕೊರೊನಾ ವೈರಸ್ ಕಾರಣ ಸಿದ್ಧವಾಗಿರುವ ಇಂಟರ್‌ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹೊಸ ವೇಳಾಪಟ್ಟಿಯ ಪ್ರಕಾರ ಒಡಿಐ ವಿಶ್ವಕಪ್‌ ಅರ್ಹತಾ ಪಂದ್ಯಗಳು ಜಿಂಜಾಬ್ವೆಯಲ್ಲಿ ನಡೆಯಲಿವೆ.

ವಿರಾಟ್ ಇಲ್ಲದ್ದರಿಂದ ರೋಹಿತ್ ಫಿಟ್ನೆಸ್ ತುಂಬಾ ಪ್ರಾಮುಖ್ಯ: ಮೋರೆವಿರಾಟ್ ಇಲ್ಲದ್ದರಿಂದ ರೋಹಿತ್ ಫಿಟ್ನೆಸ್ ತುಂಬಾ ಪ್ರಾಮುಖ್ಯ: ಮೋರೆ

2023ರ ಒಡಿಐ ವಿಶ್ವಕಪ್‌ಗೆ ಆತಿಥ್ಯ ಭಾರತ ವಹಿಸಿಕೊಳ್ಳಲಿದೆ. ಭಾರತವೂ ಸೇರಿ ಇನ್ನಿತರ 7 ಟಾಪ್ ಸೂಪರ್‌ ಲೀಗ್‌ ತಂಡಗಳು ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ವಿಶ್ವಕಪ್‌ ಟೂರ್ನಿಯಲ್ಲಿ ಸೆಣಸಾಡಲಿವೆ.

ಟಾಪ್ ಏಳು ತಂಡಗಳಲ್ಲದೆ ಇನ್ನುಳಿದ 5 ತಂಡಗಳು 2023ರ ವಿಶ್ವಕಪ್ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸಲಿವೆ. ಇದರಲ್ಲಿ ಲೀಗ್‌ 2ರಲ್ಲಿ ಬೆಸ್ಟ್ ಟೀಮ್‌ಗಳಾಗಿ ಗುರುತಿಸಿಕೊಳ್ಳುವ 3 ತಂಡಗಳು ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ.

ಭಾರತ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಆಡುವ ನಿರೀಕ್ಷೆಭಾರತ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ಸ್ಟೀವ್ ಸ್ಮಿತ್ ಆಡುವ ನಿರೀಕ್ಷೆ

'ನಾವು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅನ್ನು ಅಕ್ಟೋಬರ್ ಮತ್ತು ನವೆಂಬರ್ 2023ಕ್ಕೆ ಮರುಹೊಂದಿಸಿದಾಗ ಅದು ಅರ್ಹತಾ ಪಂದ್ಯಗಳು ನಡೆಯುವ ಅವಕಾಶವನ್ನು ವಿಸ್ತರಿಸಲು ನಮಗೆ ಅನುವು ಮಾಡಿಕೊಟ್ಟಿತು. ಆ ಮೂಲಕ ಆಟದ ಮೈದಾನದಲ್ಲಿ ಅರ್ಹತೆಯನ್ನು ನಿರ್ಧರಿಸುವ ಅವಕಾಶವನ್ನು ನಾವು ತಂಡಗಳಿಗೆ ನೀಡುತ್ತಿದ್ದೇವೆ,' ಎಂದು ಐಸಿಸಿ ಹೇಳಿದೆ.

Story first published: Thursday, December 17, 2020, 10:06 [IST]
Other articles published on Dec 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X