ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಂಬಾಂಬ್ವೆ vs ಶ್ರೀಲಂಕಾ: ಅತ್ಯಧಿಕ ವಿಕೆಟ್‌ ಪಡೆದ ಸಿಕಂದರ್ ರಾಝ

Zimbabwe vs Sri Lanka: Sikandar Raza takes career-best seven wickets

ಹರಾರೆ, ಜನವರಿ 30: ಜಿಂಬಾಬ್ವೆ ಆಲ್ ರೌಂಡರ್ ಸಿಕಂದರ್ ರಾಝ ವೃತ್ತಿ ಜೀವನದಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆ ತೋರಿದ್ದಾರೆ. ಟೆಸ್ಟ್ ಇನ್ನಿಂಗ್ಸ್‌ ಒಂದರಲ್ಲಿ 7 ವಿಕೆಟ್‌ ಮುರಿದ ಹೆಗ್ಗಳಿಕೆಗೆ ಸಿಕಂದರ್ ಪಾತ್ರರಾಗಿದ್ದಾರೆ. ಹರಾರೆ ಮೈದಾನದಲ್ಲಿ ನಡೆಯುತ್ತಿರುವ ಜಿಂಬಾಬ್ವೆ-ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಿಕಂದರ್ ಸಾಧನೆ ಮಾಡಿದ್ದಾರೆ.

ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!

ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ 43 ಓವರ್‌ ಎಸೆದಿರುವ ರಾಝ, 113 ರನ್‌ ನೀಡಿ 7 ಪ್ರಮುಖ ವಿಕೆಟ್‌ ಪಡೆದರು. ಲಂಕಾ ನಾಯಕ ದಿಮುತ್ ಕರುಣರತ್ನೆ, ಕುಸಾಲ್ ಮೆಂಡಿಸ್, ದಿನೇಶ್ ಚಾಂಡಿಮಾಲ್, ಧನಂಜಯ ಡಿ ಸಿಲ್ವಾ, ನಿರೋಷನ್ ಡಿಕ್ವೆಲ್ಲಾ, ಸುರಂಗ ಲಕ್ಮಲ್, ಲಸಿತ್ ಎಂಬುಲ್ಡೆನಿಯಾ ವಿಕೆಟ್‌ ರಾಝಗೆ ಲಭಿಸಿತು.

1
47821

ಸಿಕಂದರ್ ರಾಝ ಬೌಲಿಂಗ್ ಸಾಧನೆಯೊಂದಿಗೆ ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ನಾಯಕ ಸೀನ್ ವಿಲಿಯಮ್ಸ್‌ ಶತಕ (107) ರನ್‌ನೊಂದಿಗೆ 406 ರನ್ ಮಾಡಿತು.

ಸೂಪರ್ ಓವರ್‌ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ನ್ಯೂಜಿಲ್ಯಾಂಡ್!ಸೂಪರ್ ಓವರ್‌ ಇತಿಹಾಸದಲ್ಲಿ ಅದೃಷ್ಟವೇ ಇಲ್ಲದ ನ್ಯೂಜಿಲ್ಯಾಂಡ್!

ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ, ಏಂಜಲೋ ಮ್ಯಾಥ್ಯೂಸ್ ಅರ್ಧ ಶತಕದೊಂದಿಗೆ (64 ರನ್) 293 ರನ್ ಪೇರಿಸಿರುವುದರಿಂದ ಜಿಂಬಾಬ್ವೆ ಮುನ್ನಡೆಯಲ್ಲಿದೆ. ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾದ ಲಸಿತ್ ಎಂಬುಲ್ಡೆನಿಯಾ 4 ವಿಕೆಟ್‌ನೊಂದಿಗೆ ಗಮನ ಸೆಳೆದರು. ದ್ವಿತೀಯ ಇನ್ನಿಂಗ್ಸ್‌ ಆಡುತ್ತಿರುವ ಜಿಂಬಾಬ್ವೆ ಗೆಲ್ಲುವ ನಿರೀಕ್ಷೆಯಿದೆ.

Story first published: Thursday, January 30, 2020, 11:00 [IST]
Other articles published on Jan 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X