ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ಜಿ' ಗ್ರೂಪಿನಲ್ಲಿ ಕುತೂಹಲ ಮೂಡಿಸಿದೆ ಬೆಲ್ಜಿಯಂ-ಇಂಗ್ಲೆಂಡ್ ಕಾದಾಟ

2018 World Cup, Group G, Profile: England, Belgium Overwhelming Favourites

ನವದೆಹಲಿ, ಜೂ. 13: ರಷ್ಯಾದಲ್ಲಿ ನಾಳೆ (ಜೂ. 14) ಆರಂಭಗೊಳ್ಳಲಿರುವ 2018ರ ಫೀಫಾ ವಿಶ್ವಕಪ್ ಪಂದ್ಯಾಟವನ್ನು ಕಣ್ತುಂಬಿಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ಕಾತರರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಗ್ರೂಪ್ ಎಯಲ್ಲಿರುವ ಅತಿಥೇಯ ರಷ್ಯಾ ತಂಡ ಏಷ್ಯಾನ್ ದೈತ್ಯ ಸೌದಿ ಅರೇಬಿಯಾವನ್ನು ಎದುರುಗೊಳ್ಳಲಿದೆ.

2026ರಲ್ಲಿ ಯುಎಸ್ಎ, ಮೆಕ್ಸಿಕೋದಲ್ಲಿ ಫೀಫಾ ವಿಶ್ವಕಪ್ ಸಂಭ್ರಮ2026ರಲ್ಲಿ ಯುಎಸ್ಎ, ಮೆಕ್ಸಿಕೋದಲ್ಲಿ ಫೀಫಾ ವಿಶ್ವಕಪ್ ಸಂಭ್ರಮ

ಮಾಸ್ಕೋದ ಲುಝ್ನಿಕಿ ಕ್ರೀಡಾಂಗಣದಲ್ಲಿ ಆರಂಭಿಕ ಮತ್ತು ಅಂತಿಮ ಪಂದ್ಯಗಳು ನಡೆಯಲಿದ್ದು, ಯಶಸ್ವಿ ಆರಂಭೋತ್ಸವಕ್ಕಾಗಿ ರಷ್ಯಾ ಸಜ್ಜಾಗಿದೆ. ಆರಂಭೋತ್ಸವದಲ್ಲಿ ಹಲವಾರು ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮ ಅದ್ದೂರಿಯೆನಿಸಲಿದೆ.

ಪಂದ್ಯಾಟದಲ್ಲಿ ಗೆಲುವಿಗಾಗಿ ಮುನ್ನೋಡುತ್ತಿರುವ ಎಲ್ಲ 32 ತಂಡಗಳಲ್ಲಿ ಬೆಲ್ಜಿಯಂ ಮತ್ತು ಇಂಗ್ಲೆಂಡ್ ಕೂಡ ಇವೆ. ಫೀಫಾ ಪಂದ್ಯಾಟಕ್ಕಾಗಿ ಗ್ರೂಪ್ 'ಜಿ'ಯಲ್ಲಿ ಸೇರಿಕೊಂಡಿರುವ ಈ ಎರಡೂ ತಂಡಗಳ ನಡುವಿನ ಪಂದ್ಯ ಕೊಂಚ ಕುತೂಹಲಕಾರಿಯಾದುದು.

ಫೀಫಾ ರ್ಯಾಂಕಿಂಗ್ ನಲ್ಲಿ ಬೆಲ್ಜಿಯಂ 3ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ 12ನೇ ಸ್ಥಾನದಲ್ಲಿದೆ. ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವುದಕ್ಕೇ ಈ ಎರಡೂ ತಂಡಗಳ ಕಾದಾಟ ಕುತೂಹಲ ಮೂಡಿಸಿದೆ. ಇತ್ತಂಡಗಳು ಜೂನ್ 28ರಂದು ಕಲಿನಿನ್ಗ್ರಾಡ್ ನಲ್ಲಿ ಮುಖಾಮುಖಿಯಾಗಲಿವೆ.

ಜಿ ಗುಂಪಿನಲ್ಲಿ ಬೆಲ್ಜಿಯಂ, ಪನಾಮಾ, ಇಂಗ್ಲೆಂಡ್, ಟ್ಯೂನೀಷಿಯಾ ತಂಡಗಳಿದ್ದು, ಜೂನ್ 18ರಂದು ಬೆಲ್ಜಿಯಂ-ಪನಾಮಾ, ಟ್ಯೂನೀಷಿಯಾ-ಇಂಗ್ಲೆಂಡ್, ಜೂನ್ 23ರಂದು ಬೆಲ್ಜಿಯಂ-ಟ್ಯೂನೀಷಿಯಾ, ಜೂನ್ 24ರಂದು ಇಂಗ್ಲೆಂಡ್-ಪನಾಮಾ, ಜೂನ್ 28ರಂದು ಪನಾಮಾ-ಟ್ಯೂನಿಷಿಯಾ, ಇಂಗ್ಲೆಂಡ್-ಬೆಲ್ಜಿಯಂ ತಂಡಗಳು ಕಾದಾಡಲಿವೆ.

Story first published: Thursday, June 14, 2018, 2:05 [IST]
Other articles published on Jun 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X