ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕತಾರ್‌ ವಿಶ್ವಕಪ್‌ನಲ್ಲಿ 48 ರಾಷ್ಟ್ರಗಳು ಆಡುವುದಿಲ್ಲ ಎಂದ ಫಿಫಾ

2022 World Cup to keep 32-team format: FIFA

ಪ್ಯಾರಿಸ್‌, ಮೇ 23: ಕತಾರ್‌ನಲ್ಲಿ ನಡೆಯಲಿರುವ 2022ರ ಸಾಲಿನ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ 48 ರಾಷ್ಟ್ರಗಳು ಪಾಲ್ಗೊಳ್ಳಲಿವೆ ಎಂಬ ಊಹಾಪೋಹಗಳಿಗೆ ತೆರೆ ಬಿದಿದ್ದು, ಎಂದಿನಂತೆ 32 ರಾಷ್ಟ್ರಗಳ ಮಾದರಿಯೇ ಮುಂದುವರಿಯಲಿದೆ ಎಂದು ಫಿಫಾ ಸ್ಪಷ್ಟಪಡಿಸಿದೆ. ಈ ಮೊದಲು 32 ತಂಡಗಳ ಬದಲಾಗಿ 48 ತಂಡಗಳನ್ನು ಆಡಿಸುವ ಕುರಿತಾದ ಪ್ರಸ್ತಾವನೆ ಇತ್ತು.

ವಿಶ್ವಕಪ್‌: ಆಸ್ಟ್ರೇಲಿಯಾ ತಂಡದ ದೌರ್ಬಲ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್‌!ವಿಶ್ವಕಪ್‌: ಆಸ್ಟ್ರೇಲಿಯಾ ತಂಡದ ದೌರ್ಬಲ್ಯ ಬಿಚ್ಚಿಟ್ಟ ರಿಕಿ ಪಾಂಟಿಂಗ್‌!

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಜಂಟಿ ಆಶ್ರಯದಲ್ಲಿ ನಡೆಯಲಿರುವ 2026ರ ವಿಶ್ವಕಪ್‌ ಟೂರ್ನಿಯಲ್ಲಿ 48 ರಾಷ್ಟ್ರಗಳನ್ನು ಆಡಿಸುವುದರ ಪರವಾಗಿ ಫಿಫಾ ಕೌನ್ಸಿಲ್‌ ಬೆಂಬಲ ಸೂಚಿಸಿತ್ತು.

"2022ರ ಕತಾರ್‌ ವಿಶ್ವಕಪ್‌ನಲ್ಲಿ 32ರ ಬದಲಾಗಿ 48 ತಂಡಗಳ ಪಾಲ್ಗೊಳ್ಳುವಂತೆ ಮಾಡುವ ಕುರಿತು ಫಿಫಾ ಕೌನ್ಸಿಲ್‌ ಚರ್ಚೆ ನಡೆಸಿದೆ. ಆದರೆ, ಹಲವು ಸ್ಟೇಕ್‌ಹೋಲ್ಡರ್‌ಗಳು ಇದಕ್ಕೆ ಸಮ್ಮತಿಸದ ಕಾರಣ ನಿರ್ಧಾರವನ್ನು ಕೈಬಿಡಲಾಗಿದೆ. ಏಕೆಂದರೆ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಬಹಳ ಸಮಯ ಬೇಕಾಗುತ್ತದೆ. ಅಲ್ಪಾವಧಿಯಲ್ಲಿ ಇದನ್ನು ಮಾಡುವುದು ಸಾಧ್ಯವಿಲ್ಲ'' ಎಂದು ಫಿಫಾ ತಿಳಿಸಿದೆ.

ವಿಶ್ವಕಪ್‌ ಎದುರಾಳಿಗೆಳಿಗೆ ಎಚ್ಚರಿಕೆ ರವಾನಿಸಿದ ಸ್ಟೀವ್‌ ಸ್ಮಿತ್‌!ವಿಶ್ವಕಪ್‌ ಎದುರಾಳಿಗೆಳಿಗೆ ಎಚ್ಚರಿಕೆ ರವಾನಿಸಿದ ಸ್ಟೀವ್‌ ಸ್ಮಿತ್‌!

ಈ ಹಿನ್ನೆಲೆಯಲ್ಲಿ ಮೊದಲೇ ನಿಗದಿ ಪಡಿಸಿರುವಂತೆ 2022ರ ಕತಾರ್ ವಿಶ್ವಕಪ್‌ ಟೂರ್ನಿಯಲ್ಲಿ ಎಂದಿನಂತೆ 32 ರಾಷ್ಟ್ರಗಳು ಮಾತ್ರವೇ ಪಾಲ್ಗೊಳ್ಳುವುದು ಖಚಿತವಾಗಿದೆ. ಜೂನ್‌ 7ರಿಂದ ಜುಲೈ 7ರವರೆಗೆ ಫಿಫಾ ಮಹಿಳಾ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಇದಕ್ಕೂ ಮುನ್ನ ಫಿಫಾ ಕಾಂಗ್ರೆಸ್‌ ಸಭೆ ಸೇರಲಿದ್ದು, ಪುರುಷರ ವಿಶ್ವಕಪ್‌ ಯೋಜನೆ ಕುರಿತಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ.

ರಷ್ಯಾದಲ್ಲಿ ನಡೆದ 2018ರ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಕ್ರೊಯೇಷ್ಯಾ ವಿರುದ್ಧ ಜಯ ದಾಖಲಿಸಿದ ಫ್ರಾನ್ಸ್‌ ತಂಡ ಎರಡನೇ ಬಾರಿ ವಿಶ್ವ ಚಾಂಪಿಯನ್ಸ್‌ ಪಟ್ಟ ಅಲಂಕರಿಸಿತ್ತು.

Story first published: Thursday, May 23, 2019, 18:38 [IST]
Other articles published on May 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X