ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏಷ್ಯನ್ ಕಪ್ 2019 : ಯುಎಇಗೆ ಶರಣಾದ ಸುನಿಲ್ ಛೆಟ್ರಿ ಬಳಗ

By Isl Media
AFC Asian Cup 2019: UAE punish unlucky India

ಅಬು ಧಾಬಿ, ಜನವರಿ 11: 41ನೇ ನಿಮಿಷದಲ್ಲಿ ಖಲ್ಫಾನ್ ಮುಬಾರಕ್ ಹಾಗೂ 88ನೇ ನಿಮಿಷದಲ್ಲಿ ಅಲಿ ಅಹಮ್ಮದ್ ಮಾಬ್ಖೌತ್ ಗಳಿಸಿದ ಗೋಲಿನಿಂದ ಭಾರತವನ್ನು 2-0 ಗೋಲಿನಿಂದ ಮಣಿಸಿದ ಯುಎಇ ತಂಡ ಇಲ್ಲಿ ನಡೆದ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲಿ ಅಗ್ರ ಸ್ಥಾನಕ್ಕೇರಿತು. ಭಾರತ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸುವಲ್ಲಿ ವಿಫಲವಾಯಿತು.

ಪಾಂಡ್ಯ, ರಾಹುಲ್ ಉದ್ಧಟತನಕ್ಕೆ ಭಾರತ ತಂಡ ಬೆಂಬಲಿಸಲಾರದು: ಕೊಹ್ಲಿಪಾಂಡ್ಯ, ರಾಹುಲ್ ಉದ್ಧಟತನಕ್ಕೆ ಭಾರತ ತಂಡ ಬೆಂಬಲಿಸಲಾರದು: ಕೊಹ್ಲಿ

41ನೇ ನಿಮಿಷದಲ್ಲಿ ಖಲ್ಫಾನ್ ಮುಬಾರಕ್ ಗಳಿಸಿದ ಗೋಲಿನಿಂದ ಆತಿಥೇಯ ಯುಎಇ ತಂಡ ಮೇಲುಗೈ ಸಾಧಿಸಿತು. ಅಲಿ ಅಹಮ್ಮದ್ ಮಾಬ್ಖೌತ್ ಈ ಗೋಲು ಗಳಿಸುವಲ್ಲಿ ನೆರವಾದರು. ಮಿಡ್‌ಫೀಲ್ಡ್ ವಿಭಾಗದಿಂದ ಬಂದ ಚೆಂಡನ್ನು ಪೆನಾಲ್ಟಿ ವಲಯದಲ್ಲಿ ಅಲ್ ಅಹಮ್ಮದ್ ಭಾರತದ ಡಿಫೆನ್ಸ್ ವಿಭಾಗವನ್ನು ವಂಚಿಸಿ ಖಲ್ಭಾನ್‌ಗೆ ನೀಡಿದರು. ಖಲ್ಫಾನ್ ಯಾವುದೇ ಪ್ರಮಾದ ಎಸಗದೆ ಸುಲಭವಾಗಿ ಗೋಲು ಗಳಿಸಿದರು. ಗುರ್‌ಪ್ರೀತ್ ಸಿಂಗ್ ಅವರ ತಡೆಯುವ ಪ್ರಯತ್ನ ಯಶಸ್ಸು ನೀಡಲಿಲ್ಲ.

ರಣಜಿ : ಕೊನೆಗೂ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕರಣಜಿ : ಕೊನೆಗೂ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

43ನೇ ನಿಮಿಷದಲ್ಲಿ ಭಾರತದ ನಾಯಕ ಸುನಿಲ್ ಛೆಟ್ರಿಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಅವರು ಗೋಲ್‌ಬಾಕ್ಸ್‌ಗೆ ಗುರಿ ಇಟ್ಟ ಚೆಂಡು ಎದುರಾಳಿಯ ಗೋಲ್‌ಕೀಪರ್‌ನನ್ನು ವಂಚಿಸಿದರೂ ಗೋಲ್‌ಬಾಕ್ಸ್ ತಲುಪದೆ ಅಲ್ಪ ಅಂತರದಲ್ಲಿ ಹೊರ ನಡೆಯಿತು.

ವಿಫಲ ಪ್ರಯತ್ನ

ವಿಫಲ ಪ್ರಯತ್ನ

ಪಂದ್ಯ ಆರಂಭಗೊಂಡ 11ನೇ ನಿಮಿಷದಲ್ಲಿ ಉದಾಂತ್ ಸಿಂಗ್‌ಗೆ ಗೋಲು ಗಳಿಸುವ ಅವಕಾಶ ಉತ್ತಮವಾಗಿತ್ತು. ಒಂಟಿಯಾಗಿ ಅತ್ಯಂತ ವೇಗದಲ್ಲಿ ಚೆಂಡನ್ನು ನಿಯಂತ್ರಿಸಿದ ಉದಾಂತ್ ಗೋಲ್‌ಬಾಕ್ಸ್‌ಗೆ ನೇರವಾಗಿ ಗುರಿ ಇಟ್ಟಿದ್ದರು. ಆದರೆ ಮೇಲಿಂದ ಸಾಗುತ್ತಿದ್ದ ಚೆಂಡಿಗೆ ಯುಎಇ ಗೋಲ್‌ಕೀಪರ್ ಖಾಲೀದ್ ಇಸಾ ಕೈ ತಗಲಿದ ಕಾರಣ ಚೆಂಡು ಅಷ್ಟೇ ವೇಗದಲ್ಲಿ ಗೋಲ್‌ಬಾಕ್ಸ್‌ನ ಮೇಲಿಂದ ಸಾಗಿ ಹೊರ ನಡೆಯಿತು. ಯುಎಇ ಪ್ರಥಮಾರ್ಧದಲ್ಲಿ ಗೋಲು ಗಳಿಸಿ ಮೇಲುಗೈ ಸಾಧಿಸಿರಬಹುದು, ಆದರೆ ಭಾರತದ ಹೋರಾಟ ಉತ್ತಮವಾಗಿರುವುದನ್ನು ಮರೆಯುವಂತಿಲ್ಲ.

ಹಿಂದೆಯೂ ಯುಎಇಗೆ ಜಯ

ಹಿಂದೆಯೂ ಯುಎಇಗೆ ಜಯ

2014ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಇತ್ತಂಡಗಳು 2011ರಲ್ಲಿ ಮುಖಾಮುಖಿಯಾಗಿದ್ದವು. ಯುಎಇ 5-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಈಗಿನ ನಾಯಕ ಇಸ್ಮಾಯಿಲ್ ಅಲ್ ಹಮ್ಮದಿ ಗೋಲು ಗಳಿಸಿದ್ದರು. ‘ಾರತದ ಪರ ಅಂದು ಗೋಲು ಗಳಿಸಿದ್ದ ಜೆಜೆ ಲಾಲ್‌ಪೆಖ್ಲವಾ ಇಂದು ಬೆಂಚ್‌ನಲ್ಲಿ ಬದಲಿ ಆಟಗಾರರಾಗಿದ್ದಾರೆ.

ಬದಲಾಗದ ತಂಡ

ಬದಲಾಗದ ತಂಡ

ಭಾರತ ತಂಡ ಯಾವುದೇ ಬದಲಾವಣೆಯನ್ನು ಮಾಡದೆ ಥಾಯ್ಲೆಂಡ್ ವಿರುದ್ಧ ಆಡಿದ ತಂಡವನ್ನೇ ಕಾಯ್ದುಕೊಂಡಿತ್ತು. ಕಳೆದ ಪಂದ್ಯದಲ್ಲಿ ಗುರ್‌ಪ್ರೀತ್ ಸಿಂಗ್ ಸಂಧೂ ನಾಯಕತ್ವ ವಹಿಸಿದ್ದರು. ಯುಎಇ ವಿರುದ್ಧ ಸುನಿಲ್ ಛೆಟ್ರಿ ನಾಯಕನ ಜವಾಬ್ದಾರಿ ವಹಿಸಿದರು. ಯುಎಇ ತಂಡ ಕೇವಲ ಒಂದು ಬದಲಾವಣೆ ಮಾಡಿದ್ದು, ಫಾರೆಸ್ ಜುಮಾ ಅವರ ಸ್ಥಾನದಲ್ಲಿ ಇಸ್ಮಾಯಿಲ್ ಅಹಮ್ಮದ್ ಅಂಗಣಕ್ಕಿಳಿದರು.

ಭಾರತ ಅಗ್ರಸ್ಥಾನದಲ್ಲಿ

ಭಾರತ ಅಗ್ರಸ್ಥಾನದಲ್ಲಿ

ಗುಂಪಿನಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಯುಎಇ ತಂಡ ಬಹೆರಿನ್ ವಿರುದ್ಧದ ಪಂದ್ಯದಲ್ಲಿ 1-1 ಗೋಲಿನಿಂದ ಡ್ರಾ ಗಳಿಸಿತ್ತು. ಭಾರತ ತಂಡ ಥಾಯ್ಲೆಂಡ್ ವಿರುದ್ಧ 4-1 ಗೋಲುಗಳಿಂದ ಐತಿಹಾಸಿಕ ಜಯ ಗಳಿಸಿತ್ತು. ಆದರೆ ಥಾಯ್ ತಂಡ ಬಹೆರಿನ್ ವಿರುದ್ಧ ಗುರುವಾರ ನಡೆದ ಮೊದಲ ಪಂದ್ಯದಲ್ಲಿ 1-0 ಗೋಲಿನಿಂದ ಗೆದ್ದಿತ್ತು. 3 ಅಂಕಗಳನ್ನು ಗಳಿಸಿದ ಭಾರತ ಅಗ್ರ ಸ್ಥಾನದಲ್ಲಿದೆ. ಎರಡು ಪಂದ್ಯಗಳನ್ನಾಡಿ ಮೂರು ಅಂಕ ಗಳಿಸಿದ ಥಾಯ್ಲೆಂಡ್ ಎರಡನೇ ಸ್ಥಾನದಲ್ಲಿದೆ. ಬಹರಿನ್ ಒಂದು ಅಂಕ ಗಳಿಸಿ ಕೊನೆಯ ಸ್ಥಾನದಲ್ಲಿದೆ.

Story first published: Friday, January 11, 2019, 15:51 [IST]
Other articles published on Jan 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X