ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏಷ್ಯನ್ ಕಪ್ 2019: ಬಹ್ರೇನ್‌ಗೆ ಶರಣಾದ ಛೆಟ್ರಿ ಬಳಗ ಔಟ್!

By Isl Media
AFC Asian: India lose 0-1 to Bahrain, crash out of Asian Cup

ಶಾರ್ಜಾ, ಜನವರಿ 15: 90ನೇ ನಿಮಿಷದಲ್ಲಿ ಜಮಾಲ್ ರಶೀದ್ ಗಳಿಸಿದ ಗೋಲಿನಿಂದ ಭಾರತ ತಂಡವನ್ನು 1-0 ಗೋಲಿನಿಂದ ಮಣಿಸಿದ ಬಹೆರಿನ್ ತಂಡ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ನಾಕೌಟ್ ತಲುಪಿತು. ಅಂತಿಮ ಕ್ಷಣದವರೆಗೂ ದಿಟ್ಟ ಹೋರಾಟ ನೀಡಿದ ಭಾರತದ ಪ್ರಣೋಯ್ ಪೆನಾಲ್ಟಿ ವಲಯದಲ್ಲಿ ಎದುರಾಳಿ ತಂಡದ ಆಟಗಾರನನ್ನು ಕೆಡವಿದ ಕಾರಣ ರೆರಿ ತಡಮಾಡದೆ ಪೆನಾಲ್ಟಿ ಅವಕಾಶ ಕಲ್ಪಿಸಿದರು.

ಅದ್ಭುತ ಥ್ರೋನಿಂದ ಖವಾಜಾ ಪೆವಿಲಿಯನ್‌ಗೆ ಅಟ್ಟಿದ ಜಡೇಜಾ: ವಿಡಿಯೋಅದ್ಭುತ ಥ್ರೋನಿಂದ ಖವಾಜಾ ಪೆವಿಲಿಯನ್‌ಗೆ ಅಟ್ಟಿದ ಜಡೇಜಾ: ವಿಡಿಯೋ

ಭಾರತದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ನಿಂತಲ್ಲೇ ಇದ್ದು ಚೆಂಡನ್ನು ತಡೆಯುತ್ತಿದ್ದರೆ ಯಶಸ್ಸು ಕಾಣುತ್ತಿದ್ದರು. ಆದರೆ ಬಲಭಾಗಕ್ಕೆ ನೆಗೆಯವ ಮೂಲಕ ಬಹರೆನ್ ಗೋಲು ಗಳಿಸಿ ಭಾರತದ ಐತಿಹಾಸಿಕ ಮುನ್ನಡೆಗೆ ಅಡ್ಡಿ ಮಾಡಿತು. ಇದರೊಂದಿಗೆ ಭಾರತ ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ ನಾಕೌಟ್ ಹಂತ ತಲಪುವಲ್ಲಿ ವಿಲವಾಯಿತು.

ದ್ರಾವಿಡ್ ಮಾರ್ಗದರ್ಶನದಿಂದ ನನ್ನ ಆಟ ಸುಧಾರಿಸಿದೆ : ವಿಜಯ್ ಶಂಕರ್ದ್ರಾವಿಡ್ ಮಾರ್ಗದರ್ಶನದಿಂದ ನನ್ನ ಆಟ ಸುಧಾರಿಸಿದೆ : ವಿಜಯ್ ಶಂಕರ್

ಭಾರತ ಈ ಪಂದ್ಯದಲ್ಲಿ ಡ್ರಾ ಗಳಿಸಿರುತ್ತಿದ್ದರೆ ನಾಕೌಟ್ ಹಂತ ತಲುಪಿರುತ್ತಿತ್ತು. ಆದರೆ ಸತತ ಎರಡು ಸೋಲು ತಂಡವನ್ನು ನಾಕೌಟ್ ಹಂತದಿಂದ ಹೊರಗಟ್ಟುವಂತೆ ಮಾಡಿತು. ದ್ವಿತಿಯಾ'ರ್ಧದಲ್ಲಿ ಭಾರತದ ಆಟಗಾರರು ಉತ್ತಮವಾಗಿಯೇ ಆಡಿದರು. ಬಹೆರಿನ್ ತಂಡದ ಹಲವು ಗೋಲಿನ ಅವಕಾಶಕ್ಕೆ ಅಡ್ಡಿ ಮಾಡಿದ್ದರು, ಆದರೆ ಪ್ರೊಣಾಯ್ ಹಲ್ದಾರ್ ಅವರ ಪ್ರಮಾದ ತಂಡದ ಜಯವನ್ನು ಕಸಿದುಕೊಂಡಿತು.

ಅನಿರೀಕ್ಷಿತ ಬದಲಾವಣೆ

ಅನಿರೀಕ್ಷಿತ ಬದಲಾವಣೆ

ಪಂದ್ಯದ ಆರಂಭದಲ್ಲೇ ಭಾರತ ಅನಿರೀಕ್ಷಿತ ಬದಲಾವಣೆಗೆ ಗುರಿಯಾಯಿತು. ಅನಾಸ್ ಎಡ್ತೋಡಿಕಾ ಗಾಯಗೊಂಡ ಕಾರಣ ಅವರ ಸ್ಥಾನದಲ್ಲಿ ಸಲಾಂ ರಂಜನ್ ಸಿಂಗ್ ಅಂಗಣಕ್ಕಿಳಿದರು. ಆರಂಭದ ಕೆಲವು ನಿಮಿಷಗಳ ಕಾಲ ಬಹೆರಿನ್ ಭಾರತ ತಂಡವನ್ನು ನಡುಗಿಸುವ ಪ್ರದರ್ಶನ ತೋರಿತ್ತು. ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತು. ಆದರೆ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಹಾಗೂ ಸಂದೇಶ್ ಜಿಂಗಾನ್ ಬಹೆರಿನ್‌ನ ಯಶಸ್ಸಿಗೆ ಅಡ್ಡಿಯಾದರು.

ಗೋಲಿಗೆ ಅವಕಾಶವಿತ್ತು

ಗೋಲಿಗೆ ಅವಕಾಶವಿತ್ತು

ಸುನಿಲ್ ಛೆಟ್ರಿ ಹಾಗೂ ಉದಾಂತ್ ಸಿಂಗ್ ಅವರಿಗೆ ಎರಡು ಬಾರಿ ಗೋಲು ಗಳಿಸುವ ಅವಕಾಶ ವಿದ್ದಿತ್ತು. ಆದರೆ ವಾಲೀದ್ ಅದಕ್ಕೆ ಆಸ್ಪದ ನೀಡಲಿಲ್ಲ. ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು. ಕೊನೆಯ ಕ್ಷಣದಲ್ಲಿ ಬಹೆರಿನ್ ಗೋಲ್‌ಬಾಕ್ಸ್‌ಗೆ ಗುರಿ ಇಟ್ಟರೂ, ಭಾರತದ ಡಿಫೆನ್ಸ್ ಮುರಿಯಲು ಸಾಧ್ಯವಾಗಲಿಲ್ಲ. ಪ್ರಥಮಾ‘ರ್ಧ ೦-೦.

ಡ್ರಾ ಸಂಭ್ರಮ

ಡ್ರಾ ಸಂಭ್ರಮ

ಭಾರತಕ್ಕೆ ಡ್ರಾ ಸಾಧಿಸಿದರೆ ಅದೇ ಸಂಭ್ರಮ, ಬಹೆರಿನ್‌ಗೆ ಮುಂದಿನ ಹಂತ ತಲುಪಬೇಕಾದರೆ ಜಯ ಗಳಿಸಲೇಬೇಕು. ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಪ್ರತಿಯೊಂದು ಹೆಜ್ಜೆಯೂ ಈಗ ಐತಿಹಾಸಿಕ ಸಾಧನೆಯಾಗಿ ರೂಪುಗೊಳ್ಳಲಿದೆ. 2011ರಲ್ಲಿ ಜನವರಿ 14ರಂದು ಕತಾರ್‌ನಲ್ಲಿ ನಡೆದ ಏಷ್ಯನ್ ಕಪ್‌ನಲ್ಲಿ ಬಹೆರಿನ್ ತಂಡ ಭಾರತದ ವಿರುದ್ಧ 5-2 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು.

ಎಂಟು ವರ್ಷಗಳ ಹಿಂದೆ

ಎಂಟು ವರ್ಷಗಳ ಹಿಂದೆ

ಎಂಟು ವರ್ಷಗಳ ಹಿಂದೆ ಆಡಿದ ಇತ್ತಂಡಗಳಲ್ಲಿ ಇಬ್ಬರು ಮಾತ್ರ ಈಗ ತಂಡದಲ್ಲಿದ್ದಾರೆ. ಭಾರತದ ಪರ ಸುನಿಲ್ ಛೆಟ್ರಿ ಹಾಗೂ ಬಹೆರಿನ್ ಪರ ಅಬ್ದುಲ್‌ವಾಹಾಬ್ ಅಲ್ ಸಫಿ. ಅಂದು ಭಾರತದ ಗೋಲ್‌ಕೀಪರ್ ಗುರ್‌ಪ್ರೀತ್ ಸಿಂಗ್ ಸಂಧೂ ಹಾಗೂ ಬಹೆರಿನ್ ಗೋಲ್‌ಕೀಪರ್ ವಾಲೀದ್ ಅಲ್ ಹಯಾಮ್ ಬೆಂಚ್‌ನಲ್ಲಿದ್ದರು. ಈಗ ಗೋಲ್‌ಕೀಪಿಂಗ್‌ನಲ್ಲಿದ್ದಾರೆ. ಸುನಿಲ್ ಛೆಟ್ರಿ ಬದಲಿಗೆ ಪ್ರೊಣಾಯ್‌ಹಲ್ದಾರ್ ಅವರಿಗೆ ತಂಡದ ನಾಯಕತ್ವ ನೀಡಲಾಗಿತ್ತು. ಅನಿರುಧ್ ತಾಪಾ ಸ್ಥಾನದಲ್ಲಿ ರಾಲ್ವಿನ್ ಬೋರ್ಗಸ್ ಅಂಗಣಕ್ಕಿಳಿದರು.

Story first published: Tuesday, January 15, 2019, 14:01 [IST]
Other articles published on Jan 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X