ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮನೆಯಂಗಣದಲ್ಲಿ ಮಿಂಚಿದ ಒಡಿಶಾಕ್ಕೆ ಹೈದರಾಬಾದ್ ಸವಾಲು

By Isl Media
After excellent home run, Odisha look for points in Hyderabad

ಹೈದರಾಬಾದ್, ಜನವರಿ, 14: ಉತ್ತಮ ಪ್ರದರ್ಶನ ತೋರುತ್ತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಿರುವ ಒಡಿಶಾ ಎಫ್ ಸಿ, ಸಂಕಷ್ಟದಲ್ಲಿರುವ ಹೈದರಾಬಾದ್ ಎಫ್ ಸಿ ವಿರುದ್ಧ ಹೈದರಾಬಾದ್ ನ ಜಿಎಂಸಿ ಬಾಲಯೋಗಿ ಅಥ್ಲೆಟಿಕ್ಸ್ ಅಂಗಣದಲ್ಲಿ ಬುಧವಾರ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಂದು ಹೋರಾಟಕ್ಕೆ ಮುಂದಾಗಿವೆ.

ಸತತ ಮೂರು ಜಯ ಗಳಿಸಿದ ನಂತರ ಹೈದರಬಾದ್ ಗೆ ಆಗಮಿಸಿದ ಒಡಿಶಾ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಹೈದರಾಬಾದ್ ವಿರುದ್ಧ ಜಯ ಗಳಿಸಿದರೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ.

ಐಎಸ್‌ಎಲ್ 2020: ಎಟಿಕೆಗೆ ಮನೆಯಂಗಣದಲ್ಲಿ ಶಾಕ್ ನೀಡಿದ ಬ್ಲಾಸ್ಟರ್ಸ್ಐಎಸ್‌ಎಲ್ 2020: ಎಟಿಕೆಗೆ ಮನೆಯಂಗಣದಲ್ಲಿ ಶಾಕ್ ನೀಡಿದ ಬ್ಲಾಸ್ಟರ್ಸ್

''ನಮ್ಮ ಪಾಲಿನ ಅತಿ ಮುಖ್ಯವಾದ ಅಂಶವೆಂದರೆ ಆಟದಿಂದ ಆಟದ ಮೇಲೆ ಗಮನ ಹರಿಸುವುದು. ಪ್ರತಿಯೊಂದು ಪಂದ್ಯದಲ್ಲೂ ನಾವು ಉತ್ತಮ ಪ್ರದರ್ಶನ ತೋರಿದ್ದೇವೆ. ನಮ್ಮ ಅಟಗಾರರ ಮೇಲೆ ನಾವು ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ. ನಮ್ಮದು ದೊಡ್ಡ ತಂಡ. ನಾವು ಟಾಪ್ ನಾಲ್ಕರ ಹಂತ ತಲುಪಿದ್ದೇವೆ, ಆದರೆ ಇನ್ನೂ ಆರು ಪಂದ್ಯಗಳಿವೆ. ನಾವು ಪ್ರತಿಯೊಂದು ಪಂದ್ಯವನ್ನು ಫೈನಲ್ ಎಂದು ಪರಿಗಣಿಸಿ ಆಡುತ್ತೇವೆ,'' ಎಂದು ಗೊಂಬಾವ್ ಹೇಳಿದ್ದಾರೆ.

12 ಪಂದ್ಯಗಳಲ್ಲಿ ಕೇವಲ ಐದು ಅಂಕ ಗಳಿಸಿರುವ ಹೈದರಾಬಾದ್ ತಂಡದ ಕೋಚ್ ಫಿಲ್ ಬ್ರೌನ್ ಆವರಿಗೆ ಮನೆಯ ಹಾದಿ ತೋರಲಾಗಿದೆ. ಮೊಂದಿನ ಋತುನಿಂದ ಕ್ಲಬ್ ನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಅಲ್ಬರ್ಟ್ ರೋಕಾ ಅವರ ತರಬೇತಿಯಲ್ಲಿ ತಂಡ ಹೊಸ ರೂಪ ಪಡೆಯುವ ತವಕದಲ್ಲಿದೆ.

ಐಎಸ್‌ಎಲ್ 2020: ಎಟಿಕೆ ಮನೆಯಲ್ಲಿ ಕೇರಳಕ್ಕೆ ಜಯದ ಅನಿವಾರ್ಯಐಎಸ್‌ಎಲ್ 2020: ಎಟಿಕೆ ಮನೆಯಲ್ಲಿ ಕೇರಳಕ್ಕೆ ಜಯದ ಅನಿವಾರ್ಯ

''ಹೊಸ ತರಬೇತುದಾರರು ಆಟಗಾರರ ಅಟವನ್ನು ಗಮನಿಸಲಿದ್ದಾರೆ. ಆಟಗಾರರು ನೂತನ ಕೋಚ್ ಸಮ್ಮುಖದಲ್ಲಿ ಉತ್ತಮ ಪ್ರದರ್ಶನ ತೋರುವ ತವಕದಲ್ಲಿದ್ದಾರೆ. ಅವರು ಜಯ ಗಳಿಸುವ ತವಕದಲ್ಲಿದ್ದಾರೆ, ಇದರಿಂದಾಗಿ ನಾಳೆಯ ಪಂದ್ಯ ಸವಾಲೆನಿಸಲಿದೆ,'' ಎಂದು ಗೊಂಬಾವ್ ಹೇಳಿದ್ದಾರೆ.

ಮಿಡ್ ಫೀಲ್ಡ್ ಮಾರ್ಕೋ ಸ್ಟ್ಯಾಂಕೊವಿಕ್ ಅವರನ್ನು ಅಮಾನತಿನಲ್ಲಿಟ್ಟ ಕಾರಣ ಹೈದರಾಬಾದ್ ನ ಜಯದ ಹಾದಿ ಕಠಿಣವಾಗಿತ್ತು. ಆದಿಲ್ ಖಾನ್ ಮತ್ತು ರೋಹಿತ್ ಕುಮಾರ್ ಒಡಿಶಾ ವಿರುದ್ಧ ಉತ್ತಮ ರೀತಿಯಲ್ಲಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಅಗತ್ಯ ಇದೆ. ಆದರೆ ಡೊಫೆನ್ಸ್ ವಿಭಾಗದಲ್ಲಿ ಹೈದರಾಆಬಾದ್ ಹೆಚ್ಚಿನ ಗಮನ ಹರಿಸಬೇಕಾಗಿದೆ. ಇದುವರೆಗೂ ತಂಡ ಕ್ಲೀನ್ ಶೀಟ್ ಸಾಧನೆ ಮಾಡಿಲ್ಲ. ಕಳೆದ ಐದು ಪಂದ್ಯಗಳಲ್ಲಿ ತಂಡ ಎದುರಾಳಿಗಳಿಗೆ 15 ಗೋಲುಗಳನ್ನು ಗಳಿಸಲು ಅವಕಾಶ ಮಾಡಿಕೊಟ್ಟಿದೆ.

''ನಾವೀಗ ಋತುವಿನ ಅತ್ಯಂತ ಕಠಿಣ ವಿಭಾಗದಲ್ಲಿದ್ದೇವೆ. ಋತುವಿನ ಮಧ್ಯ ಭಾಗದಲ್ಲಿ ತಂಡದ ಕೋಚ್ ಅವರನ್ನು ಕೈ ಬಿಡಲಾಗಿದೆ. ನಾವು ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದೇವೆ, ನಮ್ಮ ಅಭಿಮಾನಿಗಳಿಗೆ ಇದುವರೆಗೂ ನಿರಾಸೆಯಾಗಿರುವುದು ಸಹಜ. ಅದೇ ರೀತಿ ಆಡಳಿತ ಮಂಡಳಿ ಮತ್ತು ಆಟಗಾರರಿಗೂ ನಿರಾಸೆಯಾಗಿದೆ,'' ಎಂದು ಹೈದರಾಬಾದ್ ನ ಸಹಾಯಕ ಕೋಚ್ ಮೆಹ್ರಾಜುದ್ದೀನ್ ವಾಡೂ ಹೇಳಿದ್ದಾರೆ.

Story first published: Wednesday, January 15, 2020, 10:24 [IST]
Other articles published on Jan 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X