ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ತಂಡಕ್ಕೆ ಸ್ಫೂರ್ತಿ ತುಂಬಲು ಜ್ಯೋತಿಷಿ ನೇಮಕ ಮಾಡಿದ್ದ ಎಐಎಫ್ಎಫ್ ; ಸುರಿದದ್ದು ಲಕ್ಷ ಲಕ್ಷ

AIFF hired an astrologer to motivate national team for 16 lakh rupees: Team Insider

ಎಐಎಫ್ಎಫ್ ( ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ) ಈ ಬಾರಿಯ ಎ ಎಸ್ ಸಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಬೇಕು ಎಂಬ ಕಾರಣಕ್ಕೆ ಮಾರ್ಗದರ್ಶನ ನೀಡುವ ಓರ್ವ ವ್ಯಕ್ತಿಯನ್ನು ನೇಮಕ ಮಾಡಿಕೊಂಡಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಇನ್ನು ಭಾರತ ಫುಟ್ ಬಾಲ್ ಸದ್ಯ ನಡೆಯುತ್ತಿರುವ ಎ ಎಫ್ ಸಿ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಯಶಸ್ವಿಯಾಗಿ ಗೆದ್ದು ಟೂರ್ನಿಯಲ್ಲಿ ಭಾಗವಹಿಸಲು ಅರ್ಹರಾದ 24 ತಂಡಗಳ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಭಾರತ ಫುಟ್ಬಾಲ್ ತಂಡದ ಈ ಗೆಲುವಿನ ಹಿಂದೆಯೇ ತಂಡ ಮಾರ್ಗದರ್ಶಕನಾಗಿ ನೇಮಿಸಿಕೊಂಡಿದ್ದ ವ್ಯಕ್ತಿ ಜ್ಯೋತಿಷ್ಯ ಶಾಸ್ತ್ರದ ಸಂಸ್ಥೆಯ ಕೆಲಸಗಾರನಾಗಿದ್ದ ಎಂಬುದು ತಿಳಿದುಬಂದಿದೆ.

ಒಂದೇ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಧೋನಿ - ತಮಿಳು ನಟ ವಿಜಯ್; ನಾಯಕಿ ಇವರೇ: ವರದಿಒಂದೇ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಧೋನಿ - ತಮಿಳು ನಟ ವಿಜಯ್; ನಾಯಕಿ ಇವರೇ: ವರದಿ

ಈ ಮೂಲಕ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಲು ಜ್ಯೋತಿಷಿಯನ್ನು ನೇಮಿಸಿಕೊಂಡಿದ್ದ ವಿಷಯ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕೆಲ ಫುಟ್ಬಾಲ್ ಅಭಿಮಾನಿಗಳು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ಈ ರೀತಿಯ ಕೆಲಸಗಳಿಗೆ ಕೈ ಹಾಕಿ ಭಾರತದಲ್ಲಿ ಇರುವ ಅಲ್ಪಸ್ವಲ್ಪ ಫುಟ್ಬಾಲ್ ಪ್ರಿಯರನ್ನು ಸಹ ಕಡಿಮೆ ಮಾಡುವ ಸಾಧ್ಯತೆಗಳಿವೆ ಹಾಗೂ ಫುಟ್ಬಾಲ್ ಪಂದ್ಯಗಳಲ್ಲಿ ಗೆಲುವು ಎಂಬುದು ಆಟಗಾರರ ಪರಿಶ್ರಮದಿಂದಲೇ ಹೊರತು ಯಾವುದೇ ಜ್ಯೋತಿಷಿಯ ಮಾರ್ಗದರ್ಶನದಿಂದಲ್ಲ ಎಂದು ಕಾಮೆಂಟ್ ಮಾಡಿ ಕಿಡಿಕಾರಿದ್ದಾರೆ.

ಕೊಹ್ಲಿ ಜೊತೆ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಈ ಕ್ರಿಕೆಟಿಗರು ಈಗ ಕ್ರಿಕೆಟ್‍ನಿಂದಲೇ ಮರೆಯಾಗಿದ್ದಾರೆಕೊಹ್ಲಿ ಜೊತೆ ಟೆಸ್ಟ್ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದ ಈ ಕ್ರಿಕೆಟಿಗರು ಈಗ ಕ್ರಿಕೆಟ್‍ನಿಂದಲೇ ಮರೆಯಾಗಿದ್ದಾರೆ

ಈ ಮಾಹಿತಿಯನ್ನು ಭಾರತ ಫುಟ್ಬಾಲ್ ತಂಡದಲ್ಲಿರುವ ಸಿಬ್ಬಂದಿಯೋರ್ವರು ಹಂಚಿಕೊಂಡಿದ್ದು ರಾಷ್ಟ್ರೀಯ ತಂಡದಲ್ಲಿ ಓರ್ವ ಪ್ರೇರಕರನ್ನು ನೇಮಿಸಿಕೊಳ್ಳಲಾಯಿತು, ಆ ವ್ಯಕ್ತಿ ಜ್ಯೋತಿಷ್ಯ ಶಾಸ್ತ್ರದ ಸಂಸ್ಥೆಗೆ ಸೇರಿದವರಾಗಿದ್ದರು ಎಂಬುದು ನಂತರದ ದಿನಗಳಲ್ಲಿ ಬೆಳಕಿಗೆ ಬಂತು ಎಂದು ಹೇಳಿಕೊಂಡಿದ್ದಾರೆ.

Chris Gayle ಅಭಿಮಾನಿಗಳಿಗೆ ಸಂತಸದ ಸುದ್ದಿ | *Cricket | OneIndia Kannada

ಇನ್ನು ಆಟಗಾರರನ್ನು ಪ್ರೇರೇಪಿಸಲು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ನೇಮಿಸಿಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 16 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಿದೆ.

Story first published: Thursday, June 23, 2022, 10:10 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X