ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಗೌರವ್ ಮುಖಿ ವಯಸ್ಸಿನ ವಿವಾದ: ಹೇಳಿಕೆ ನೀಡಿದ ಫುಟ್ಬಾಲ್ ಫೆಡರೇಶನ್

AIFF to look into Mukhis age fraud controversy

ಬೆಂಗಳೂರು, ಅಕ್ಟೋಬರ್ 9: ಜೆಮ್ಶೆಡ್ಪುರ್ ಎಫ್ಸಿಯ ಗೌರವ್ ಮುಖಿ ಅವರ ವಯಸ್ಸಿಗೆ ಸಂಬಂಧಿಸಿದ ವಿವಾದದ ಕುರಿತು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್) ಹೇಳಿಕೆ ನೀಡಿದೆ. ವಿವಾದದ ವಿಚಾರಣೆಯನ್ನು ಸಂಬಂಧಿಸಿದ ಸಮಿತಿ ನೋಡಿಕೊಂಡು ಕ್ರಮ ಜರುಗಿಸಲಿದೆ ಎಂದು ಅದು ತಿಳಿಸಿದೆ.

ಬೆಂಗಳೂರು ಫುಟ್ಬಾಲ್ ಕ್ಲಬ್ ಜತೆ ಕಿಯಾ ಮೋಟರ್ಸ್ ಡೀಲ್ಬೆಂಗಳೂರು ಫುಟ್ಬಾಲ್ ಕ್ಲಬ್ ಜತೆ ಕಿಯಾ ಮೋಟರ್ಸ್ ಡೀಲ್

16ರ ಹರೆಯದ ಗೌರವ್ ಮುಖಿ ಅವರು ಐಎಸ್ಎಲ್ ಟೂರ್ನಿ ಇತಿಹಾಸದಲ್ಲೇ ಗೋಲ್ ದಾಖಲಿಸಿದ ಅತೀ ಕಿರಿಯ ಆಟಗಾರ ಎಂದು ಐಎಸ್ಎಲ್ ಹೇಳಿಕೊಂಡಿತ್ತು. ಇದಕ್ಕೆ ಕಾರಣ ಭಾನುವಾರ ನಡೆದಿದ್ದ ಪಂದ್ಯದಲ್ಲಿ ಗೌರವ್ ಅಮೋಘ ಗೋಲ್ ಬಾರಿಸಿದ್ದು.

ಬೆಂಗಳೂರಿಗೆ ಬಂದ ಬಾರ್ಸಿಲೋನಾ ಅಕಾಡೆಮಿ ಸ್ಕೂಲ್ಸ್ಬೆಂಗಳೂರಿಗೆ ಬಂದ ಬಾರ್ಸಿಲೋನಾ ಅಕಾಡೆಮಿ ಸ್ಕೂಲ್ಸ್

ಭಾನುವಾರ (ಅಕ್ಟೋಬರ್ 7) ನಡೆದಿದ್ದ ಜೇಮ್ಶೆಡ್ಪುರ್ ಎಫ್ಸಿ ಮತ್ತು ಬೆಂಗಳೂರು ಎಫ್ಸಿ ತಂಡಗಳ ಮುಖಾಮುಖಿಯಲ್ಲಿ ಪಂದ್ಯ ಮುಕ್ತಾಯಕ್ಕಿನ್ನು 19 ನಿಮಿಷ ಬಾಕಿಯಿದೆ ಅನ್ನುವಾಗ ಜೆಮ್ಶೆಡ್ಪುರ ಎಫ್ಸಿ 0-1ರ ಹಿನ್ನಡೆಯಲ್ಲಿತ್ತು. ಆಗ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮುಖಿ, ಅದ್ಭುತ ಆಟವಾಡಿ ಪಂದ್ಯ 2-2ರಿಂದ ಸಮಬಲಗೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಗೌರವ್ ಅವರು ಮೊದಲು ತನ್ನ ಜನ್ಮ ದಿನಾಂಕವನ್ನು 04/05/1999 ಎಂದು ಹೇಳಿಕೊಂಡಿದ್ದರೆ, ಇನ್ನೊಂದೆಡೆ ತನ್ನ ಜನ್ಮದಿನಾಂಕವನ್ನು 04/05/2002 ಎಂದು ಹೇಳಿಕೊಂಡಿದ್ದರು. ಇದು ಜನ್ಮದಿನಾಂಕದ ವಂಚನೆಯ ಅನುಮಾನಕ್ಕೀಡು ಮಾಡಿದೆ. 2015ರಲ್ಲೂ ಗೌರವ್ ಜನ್ಮದಿನಾಂಕ ವಂಚನೆ ವಿಚಾರಕ್ಕಾಗಿಯೇ ಪಂದ್ಯವೊಂದರಿಂದ ನಿಷೇಧಕ್ಕೊಳಗಾಗಿದ್ದರು ಎಂದು ಹೇಳಲಾಗುತ್ತಿದೆ.

ಜೊತೆಗೆ ಗೌರವ್ ಅವರ ಮೀಸೆ, ಅವರ ದೇಹವೂ ಅವರು ನಿಜಕ್ಕೂ ಕಿರಿಯ ಆಟಗಾರರು ಹೌದೋ ಅಲ್ಲವೋ ಎಂಬ ಗೊಂದಲಕ್ಕೀಡು ಮಾಡುವಂತಿದೆ. ಹೀಗಾಗಿ ಈ ಬಗ್ಗೆ ಮುಂದೆ ವಿಚಾರಣೆ ನಡೆಸಿ ಸಂಬಂಧ ಪಟ್ಟ ಸಮಿತಿ ಕ್ರಮ ಜರುಗಿಸಲಿದೆ ಎಂದು ಎಐಎಫ್‌ಎಫ್ ಹೇಳಿಕೊಂಡಿದೆ.

Story first published: Tuesday, October 9, 2018, 22:27 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X