ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮಾಗಿಯ ವಿರಾಮದ ಬಳಿಕ ಸಾಗಲಿದೆ ಇಂಡಿಯನ್ ಸೂಪರ್ ಲೀಗ್

All to play for as Indian Super League set to resume

ಮುಂಬೈ, ಜನವರಿ 23: 40 ದಿನಗಳ ಚಳಿಗಾಲದ ವಿರಾಮದ ಬಳಿಕ ಹೀರೋ ಇಂಡಿಯನ್ ಸೂಪರ್ ಲೀಗ್ ಮತ್ತೆ ಆರಂಭಗೊಳ್ಳಲಿದೆ. ಸ್ಪರ್ಧೆಯಲ್ಲಿ ಜೀವಂತವಾಗಿರುವ ತಂಡಗಳು ತಮ್ಮ ಹೊಸ ಯೋಜನೆಗಳೊಂದಿಗೆ ಅಂಗಣಕ್ಕಿಳಿಯಲಿವೆ.

ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡದ ಪರ ತಮ್ಮ ಕರ್ತವ್ಯವನ್ನು ಪೂರೈಸಿದ ಆಟಗಾರರು ಈಗ ಮತ್ತೆ ತಮ್ಮ ತಂಡಗಳನ್ನು ಸೇರಿಕೊಂಡಿದ್ದಾರೆ. ಭಾರತ ತಂಡ ಅಲ್ಪ ಅಂತರದಲ್ಲಿ ಪ್ರಿ ಕ್ವಾರ್ಟರ್ ಫೈನಲ್ ಹಂತದಿಂದ ವಂಚಿತವಾಯಿತು. ಆಟಗಾರರು ಮತ್ತೆ ಈಗ ತಮ್ಮ ನಿತ್ಯದ ಆಟಕ್ಕೆ ಮುಂದಾಗಿದ್ದಾರೆ. ಶುಕ್ರವಾರದಂದು ನಡೆಯಲಿರರುವ ಪಂದ್ಯದಲ್ಲಿ ಎಟಿಕೆ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಕೊಚ್ಚಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಐಎಸ್‌ಎಲ್‌ 2018: ಸಿಂಗಲ್‌ ಗೋಲ್‌ನಿಂದ ಎಟಿಕೆ ಮಣಿಸಿದ ಬೆಂಗಳೂರು ಐಎಸ್‌ಎಲ್‌ 2018: ಸಿಂಗಲ್‌ ಗೋಲ್‌ನಿಂದ ಎಟಿಕೆ ಮಣಿಸಿದ ಬೆಂಗಳೂರು

ಋತುವಿನ ಮೂರನೇ ಭಾಗದ ಪಂದ್ಯಗಳು ಇನ್ನೂ ಬಾಕಿ ಉಳಿದಿರುವ ಕಾರಣ ಪ್ಲೇ ಆಫ್ ಹಂತ ತಲಪುವ ತವಕದಲ್ಲಿ ತಂಡಗಳು ಮುಖಾಮುಖಿಯಾಗಲಿವೆ. ಲೀಗ್‌ನಲ್ಲಿ ಮುನ್ನಡೆ ಕಂಡಿರುವ ಬೆಂಗಳೂರು ಎಫ್ ಸಿ ತಂಡ ಈಗಾಗಲೇ ಯಾವುದೇ ಸವಾಲಿಗೂ ಸಿದ್ಧ ಎಂಬುದನ್ನು ಖಚಿತಪಡಿಸಿದೆ. ಮುಂಬೈ, ಜೆಮ್ಷೆಡ್ಪುರ, ಗೋವಾ, ಎಟಿಕೆ ಹಾಗೂ ನಾರ್ತ್ ಈಸ್ಟ್ ಯನೈಟೆಡ್ ತಂಡಗಳು ಉಳಿದಿರುವಮೀ ಮೂರು ಸ್ಥಾನಕ್ಕಾಗಿ ಹೋರಾಟ ನಡೆಸಲಿವೆ.

ಬಹಳ ದೀರ್ಘ ಅವಧಿಯ ವಿಶ್ರಾಂತಿ ಸಿಕ್ಕಿದ್ದರಿಂದ ತಂಡಗಳು ಹಿಂದಿನ ಲೆಕ್ಕಾಚಾರವನ್ನು ಬದಿಗಿಟ್ಟ ಹೊಸ ಯೋಜನೆಗಳೊಂದಿಗೆ ಅಂಗಣಕ್ಕೆ ಇಳಿಯಬೇಕಾಗಿದೆ. ಕೆಲವು ತಂಡಗಳು ತಮ್ಮ ಆಟಗಾರರ ವರ್ಗಾವಣೆಗೆ ಇರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡಿವೆ, ಜನವರಿ 1 ರಿಂದ ಆರಂಭಗೊಂಡ ಈ ಅವಕಾಶ ಈ ತಿಂಗಳ ಕೊನೆಯವರೆಗೂ ಚಾಲ್ತಿಯಲ್ಲಿರುತ್ತದೆ. ಎಟಿಕೆ, ನಾರ್ತ್‌ಈಸ್ಟ್ ಹಾಗೂ ಗೋವಾ ತಂಡಗಳು ತಲಾ ಇಬ್ಬರು ಆಟಗಾರರನ್ನು ಸೇರಿಸಿಕೊಂಡಿದ್ದು, ಅವರಿಗೆ ತಂಡಕ್ಕೆ ಅಗತ್ಯವಿರುವುದನ್ನು ಸ್ಪಷ್ಟಪಡಿಸಿವೆ.

ಐಎಸ್‌ಎಲ್‌ 2018: ಮುಂಬೈ ಗೋಲ್ಮಳೆಯಲ್ಲಿ ಕೊಚ್ಚಿ ಹೋದ ಕೇರಳ! ಐಎಸ್‌ಎಲ್‌ 2018: ಮುಂಬೈ ಗೋಲ್ಮಳೆಯಲ್ಲಿ ಕೊಚ್ಚಿ ಹೋದ ಕೇರಳ!

ವಿಶ್ರಾಂತಿ ಪಡೆಯುವುದಕ್ಕೆ ಮುನ್ನ ಗೋವಾ ತಂಡ ಆತಂಕದ ಹೆಜ್ಜೆಯನ್ನಿಟ್ಟಿತ್ತು. ತಾನು ಆಡಿರುವ ಹಿಂದಿನ ನಾಲ್ಕು ಪಂದ್ಯಗಳಲ್ಲಿ ಕೇವಲ ನಾಲ್ಕು ಅಂಕ ಗಳಿಸಿತ್ತು. ಮಧ್ಯಂತರ ವರ್ಗಾವಣೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡ ತಂಡ ಮೊರಾಕ್ಕೊದ ಸ್ಟ್ರೆಕರ್ ಜೈದ್ ಕ್ರೌಚ್ ಹಾಗೂ ಗೋಲ್‌ಕೀಪರ್ ನವೀನ್ ಕುಮಾರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

'ನವೀನ್ ಮತ್ತೆ ತಂಡವನ್ನು ಸೇರಿಕೊಂಡಿರುವುದು ಖುಷಿ ಕೊಟ್ಟಿದೆ. ನಮ್ಮ ತಂಡಕ್ಕೆ ಯಾವ ರೀತಿಯಲ್ಲಿ ಆಡಬೇಕು ಹಾಗೂ ನಮ್ಮ ತಂಡದ ಫುಟ್ಬಾಲ್ ರೀತಿಯನ್ನು ಅರಿತಿರುವ ಆಟಗಾರ, ನಮ್ಮ ಗೋಲ್‌ಕೀಪರ್‌ಗೆ ನಮ್ಮ ಆಟದ ಅರಿವಿರುತ್ತದೆ,' ಎಂದು ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಹೇಳಿದ್ದಾರೆ.

ಲೊಬೆರಾ ಅವರ ತರಬೇತಿಯಲ್ಲಿ ಆಡಿರುವ ಜೈದ್ ಕ್ರೌಚ್, ಹ್ಯೂಗೋ ಬೌಮೌಸ್ ಮತ್ತು ಅಹಮ್ಮದ್ ಜೊಹೊ ಅವರೊಂದಿಗೆ ಆಡಿದ್ದಾರೆ. ಇದರಿಂದ ಫೆರಾನ್ ಕೊರೊಮಿನಾಸ್ ಹಾಗೂ ಎಡು ಬೇಡಿಯಾ ಅವರ ಶಕ್ತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತಾಗುತ್ತದೆ.

ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಬಾರಿಯ ಐಎಸ್‌ಎಲ್‌ನಲ್ಲಿ ಉತ್ತಮ ಆರಂ' ಕಂಡಿತ್ತು, ಆದರೆ ಇತ್ತೀಚಿನ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿತ್ತು, ಗೋವಾ ವಿರುದ್ಧ 1-5 ಗೋಲಿನಿಂದ ಸೋಲಿತಿರುವುದು ತಂಡಕ್ಕೆ ಜೀರ್ಣಿಸಿಕೊಳ್ಳಲಾಗದ ಸೋಲಾಗಿದೆ. ಆಗಸ್ಟಿನ್ ಒರ್ಕಾ ಗಾಯಗೊಂಡಿರುವ ಹಿನ್ನಲೆಯಲ್ಲಿ ಶೌವಿಕ್ ಘೋಷ್ ಹಾಗೂ ಗ್ರೀಕ್ ಫಾರ್ವರ್ಡ್ ಆಟಗಾರ ಪನಾಗಿಯೋಟಿಸ್ ಟ್ರಿಯಾಡಿಸ್ ಅವರು ಫುಲ್ ಬ್ಯಾಕ್‌ನಲ್ಲಿ ಆಡಲಿದ್ದಾರೆ.

ಪರ್ವತ ಪ್ರದೇಶದ ತಂಡ ನಾರ್ತ್ ಈಸ್ಟ್ ಇದುವರೆಗೂ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಪ್ಲೇ ಆಫ್ ಹಂತ ತಲುಪಿರಲಿಲ್ಲ. ಶೌವಿಕ್ ಘೋಷ್ ಹಾಗೂ ಟ್ರಿಯಾಡಿಸ್ ಹಿಂದಿನ ತಪ್ಪುಗಳ ಪುನರಾವರ್ತನೆಯಾಗದಂತೆ ನೋಡಿಕೊಂಡರೆ ಅದೇ ತಂಡಕ್ಕೆ ಪ್ಲಸ್ ಪಾಯಿಂಟ್. ಎಟಿಕೆ ತಂಡ ನಾರ್ತ್ ಈಸ್ಟ್ ಯುನೈಟೆಡ್ ಗಿಂತ ನಾಲ್ಕು ಅಂಕ ಹಿಂದೆ ಇದ್ದು, ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಡಿಫೆನ್ಸ್ ವಿಭಾಗದಲ್ಲಿ ವಿಲಗೊಂಡಿರುವ ಎಟಿಕೆ ತಂಡ ಐಎಸ್‌ಎಲ್‌ನಲ್ಲಿ ಅತಿ ಕಡಿಮೆ ಗೋಲು ಗಳಿಸಿದ ತಂಡವೆನಿಸಿದೆ. ಕಳೆದ ಋತುವಿನಲ್ಲಿ ಬೆಂಗಳೂರು ತಂಡದ ಪರ ಉತ್ತಮ ಪ್ರದರ್ಶನ ತೋರಿದ್ದ ಎಡು ಗಾರ್ಸಿಯಾ ಅವರನ್ನು ಸ್ಟೀವ್ ಕೊಪ್ಪೆಲ್ ತಂಡಕ್ಕೆ ಸೇರಿಸಿಕೊಂಡಿದ್ದಾರೆ, ಕಳೆದ ಬಾರಿ ಡೆಲ್ಲಿ ಡೈನಮೋಸ್‌ನಲ್ಲಿದ್ದ ಪ್ರೀತಮ್ ಕೊತಾಲ್ ಕೂಡ ಎಟಿಕೆ ಸೇರಿಕೊಂಡಿದ್ದಾರೆ.
'ತಂಡಕ್ಕೆ ಆಟಗಾರರನ್ನು ಸೇರಿಸಿಕೊಂಡಿರುವುದು ಖುಷಿ ಕೊಟ್ಟಿದೆ. ಇದರಿಂದ ತಂಡ ಬಲ ಹೆಚ್ಚಿದೆ.

ಹೊಸ ಆಟಗಾರ ಆಗಮನ ತಂಡದ ಮನೋಬಲವನ್ನು ಹೆಚ್ಚಿಸಿದೆ.ಅಂಗಣದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಈ ಆಟಗಾರರು ಪ್ರೇಕ್ಷಕರನ್ನು ಖುಷಿ ಪಡಿಸುತ್ತಾರೆ ಎಂಬ ನಂಬಿಕೆ ಇದೆ. ಹೊಸ ವರ್ಷದಲ್ಲಿ ನಾವು ಹೊಸ ಆರಂಭ ಕಾಣಲಿದ್ದೇವೆ, ' ಎಂದು ಕೊಪ್ಪೆಲ್ ಹೇಳಿದ್ದಾರೆ. ಮುಂಬೈಸಿಟಿ ಹಾಗೂ ಜೆಮ್ಷೆಡ್ಪುರ ತಂಡ ಹೊಸ ಆಟಗಾರರನ್ನು ಸೇರಿಸಿಕೊಳ್ಳದಿದ್ದರೂ, ಅಂತಿಮ ನಾಲ್ಕರ ಹಂತ ತಲುಪಿಸುವ ಸಾಮರ್ಥ್ಯಹೊಂದಿರುವ ಆಟಗಾರರಿಂದ ಕೂಡಿದೆ.

Story first published: Wednesday, January 23, 2019, 20:23 [IST]
Other articles published on Jan 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X