ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಜೆಮ್ಷೆಡ್ಪುರಕ್ಕೆ ಸೋಲುಣಿಸಿ ಐದನೇ ಸ್ಥಾನಕ್ಕೆ ಜಿಗಿದ ಗೋವಾ

By Isl Media
Angulo brilliance hands Gaurs early Christmas present against Jamshedpur fc

ಗೋವಾ, ಡಿಸೆಂಬರ್,23 : ಐಗರ್ ಆಂಗುಲೋ (64 ಮತ್ತು 90ನೇ ನಿಮಿಷ) ಗಳಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡವನ್ನು 2-1 ಗೋಲಿನಿಂದ ಮಣಿಸಿದ ಎಫ್ ಸಿ ಗೋವಾ ಕೊನೆಗೂ ಜಯದ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಉತ್ತಮ ಪೈಪೋಟಿ ನೀಡಿದರೂ ಟಾಟಾ ಪಡೆ ದ್ವಿತಿಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸುಸುವಲ್ಲಿ ವಿಫಲವಾಗಿ ಅವಸರದ ಪ್ರಮಾದಗಳಿಗೆ ಬೆಲೆ ತೆರಬೇಕಾಯಿತು.

ಮುನ್ನಡೆದ ಜೆಎಫ್‌ಸಿ: 33ನೇ ನಿಮಿಷದಲ್ಲಿ ಸ್ಟೀಫನ್ ಇಝಿ ಗಳಿಸಿದ ಗೋಲಿನಿಂದ ಜೆಮ್ಷೆಡ್ಪುರ ತಂಡ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮೇಲುಗೈ ಸಾಧಿಸಿತು. ಗೋವಾ ಇನ್ನೂ ಪಂದ್ಯಕ್ಕೆ ಹೊಂದಿಕೊಳ್ಳುತ್ತಿರುವಾಗಲೇ ರೆಡ್ ಮೈನರ್ಸ್ ಖ್ಯಾತಿಯ ಟಾಟಾ ಪಡೆಗೆ ಇಝಿ ಗಳಿಸಿದ ಗೋಲು ಮುನ್ನಡೆ ತಂದುಕೊಟ್ಟಿತು. ಗೋವಾ ಚೆಂಡಿನ ಮೇಲೆ ಬಹಳ ಸಮಯ ಹಿಡಿತ ಸಾಧಿಸಿತ್ತು. ಆದರೆ ಟಾಟಾ ಪಡೆಯ ಡಿಫೆನ್ಸ್ ವಿಭಾಗ ಗೋಲಿಗೆ ಅವಕಾಶ ನೀಡಲಿಲ್ಲ. ಉತ್ತಮ ಪಾಸ್ ನಿಯಂತ್ರಿಸಿದ ಇಝಿ ಗೋವಾದ ಪೆನಾಲ್ಟಿ ವಲಯಕ್ಕೆ ಚೆಂಡನ್ನು ತಂದು ಮೊಹಮ್ಮದ್ ನವಾಜ್ ಅವರನ್ನು ವಂಚಿಸಿ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಪಂದ್ಯ ದ್ವಿತಿಯಾರ್ಧದಲ್ಲಿ ಹೆಚ್ಚಿನ ಕುತೂಹಲಕ್ಕೆ ಅವಕಾಶ ಮಾಡಿಕೊಟ್ಟಿತು.

ಐಎಸ್‌ಎಲ್ 2020: ಅಂಕ ಹಂಚಿಕೊಂಡ ಒಡಿಶಾ, ನಾರ್ಥ್ ಈಸ್ಟ್ಐಎಸ್‌ಎಲ್ 2020: ಅಂಕ ಹಂಚಿಕೊಂಡ ಒಡಿಶಾ, ನಾರ್ಥ್ ಈಸ್ಟ್

ಬಲಿಷ್ಠರ ಹೋರಾಟ: ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಯಾವಾಗಲೂ ಕಾಯ್ದುಕೊಳ್ಳುತ್ತಿದ್ದ ಎಫ್ ಸಿ ಗೋವಾ ಸದ್ಯ 7ನೇ ಸ್ಥಾನದಲ್ಲಿದ್ದು ಕ್ರಿಸ್ಮಸ್ ಹಬ್ಬಕ್ಕೆ ಎರಡು ದಿನಗಳ ವಿಶ್ರಾಂತಿಗೆ ಮುಂಚಿತವಾಗಿ ನಡೆಯುವ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು, ಟಾಟಾ ಪಡೆ ಕೂಡ ಆತ್ಮವಿಶ್ವಾಸದಲ್ಲಿದ್ದು ಯಾವುದೇ ಕಾರಣಕ್ಕೂ ಮೂರು ಅಂಕಗಳನ್ನು ಗಳಿಸುವ ಗುರಿಯೊಂದಿಗೆ ಅಂಗಣಕ್ಕಿಳಿಯಿತು.

ಜುವಾನ್ ಫೆರಾಂಡೊ ಪಡೆ ತನ್ನ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದು ಅಂಕಪಟ್ಟಿಯಲ್ಲಿ ಇದ್ದಕ್ಕಿದ್ದಂತೆ ಕುಸಿತಕ್ಕೆ ಕಾರಣವಾಯಿತು. ಕಳೆದ ವರ್ಷ ಸೆಮಿಫೈನಲ್ ತಲುಪಿದ್ದ ಗೋವಾ ಎಟಿಕೆ ಮೋಹನ್ ಬಾಗನ್ ವಿರುದ್ಧ ಏಕೈಕ ಗೋಲಿನಿಂದ ಸೋಲನುಭವಿಸಿದರೆ, ಕಳೆದ ಋತುವಿನಲ್ಲಿ ಸೋಲಿನ ಆಘಾತ ನೀಡಿದ್ದ ಚೆನ್ನೈಯಿನ್ ವಿರುದ್ಧ 1-2 ಗೋಲಿನ ಅಂತರದಲ್ಲಿ ಸೋತಿತ್ತು. ಗೋವಾದ ಆಟಗಾರರು ಉತ್ತಮ ರೀತಿಯ ಫುಟ್ಬಾಲ್ ಆಡುತ್ತಿದ್ದರೂ ಡಿಫೆನ್ಸ್ ವಿಭಾಗದಲ್ಲಿ ವೈಫಲ್ಯ ಕಾಣುತ್ತಿರುವುದು ತಂಡದ ಜಯ ಕೈ ಜಾರಲು ಪ್ರಮುಖ ಕಾರಣವಾಗಿದೆ. ಐಗರ್ ಆಂಗುಲೋ ಒಬ್ಬರೇ ಗೋಲು ಗಳಿಸುತ್ತಿದ್ದು, ಅವರನ್ನೇ ತಂಡ ಹೆಚ್ಚಾಗಿ ಆತುಕೊಂಡಿದೆ. ಐಗರ್ ತಣಡ ಗಳಿಸಿರುವ 8 ಗೋಲುಗಳಲ್ಲಿ 6 ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ತಂಡದ ಇತರರ ಆಟಗಾರರೂ ಗೋಲು ಗಳಿಸುವಂತಾದರೆ ಗೋವಾ ಮತ್ತೆ ಅಂಕಪಟ್ಟಿಯಲ್ಲಿ ತನ್ನ ಸ್ಥಾವನ್ನು ಉತ್ತಮಪಡಿಸಿಕೊಳ್ಳಲಿದೆ.

ಐಎಸ್‌ಎಲ್: ಅಜೇಯ ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಎಟಿಕೆಎಂಬಿಐಎಸ್‌ಎಲ್: ಅಜೇಯ ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಎಟಿಕೆಎಂಬಿ

ಇನ್ನೊಂದರೆ ಓವೆನ್ ಕೊಯ್ಲ್ ಅವರ ಗರಡಿಯಲ್ಲಿ ಪಳಗಿರುವ ಜೆಮ್ಷೆಡ್ಪುರ ತಂಡ ಈ ಬಾರಿ ಅತ್ಯಂತ ಆತ್ಮವಿಶ್ವಾಸದಲ್ಲಿದ್ದು, ಬಲಿಷ್ಠ ತಂಡಗಳಿಗೇ ಸೋಲಿನ ಆಘಾತ ನೀಡಿದೆ. 7 ಪಂದ್ಯಗಳನ್ನು ಆಡಿರುವ ಟಾಟಾ ಪಡೆ 10 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ಯಶಸ್ಸಿನಲ್ಲಿ ನೆರಿಜಸ್ ವಾಸ್ಕಿಸ್ ಪಾತ್ರ ಪ್ರಮುಖವಾದುದು. ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ವಾಸಕ್ಇಸ್ ತಂಡ ಗಳಿಸಿರುವ 8 ಗೋಲುಗಳಲ್ಲಿ 6 ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ನಾಳೆಯ ಪಂದ್ಯದ ವಿಶೇಷವೆಂದರೆ ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಐಗರ್ ಆಂಗುಲೊ ಮತ್ತು ನೆರಿಜಸ್ ವಾಸ್ಕಿಸ್ ಅವರ ಮುಖಾಮುಖಿ ಕುಲೂಹಲವನ್ನು ಕೆರಳಿಸಿದೆ.

Story first published: Thursday, December 24, 2020, 9:50 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X