ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬೆಂಗಳೂರು ಎಫ್‌ಸಿ ಆಟಗಾರರ ಜರ್ಸಿ ತೋಳಲ್ಲಿ ಅಪೋಲೊಗೆ ಸ್ಥಾನ

APL Apollo lends big support to Indian Super League by associating with team Bengaluru FC

ಬೆಂಗಳೂರು, ನವೆಂಬರ್ 4: ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಫುಟ್‌ಬಾಲ್ ಜ್ವರ ಹರಡುತ್ತಿದ್ದು, ಭಾರತದ ಉಕ್ಕಿನ ಕೊಳವೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಎಪಿಎಲ್ ಅಪೋಲೊ ಟ್ಯೂಬ್ಸ್ ಲಿಮಿಟೆಡ್ (ಎಪಿಎಲ್ ಅಪೋಲೊ) ಇದೀಗ ನಡೆಯುತ್ತಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) 2019-20ರಲ್ಲಿ "ಬೆಂಗಳೂರು ಎಫ್‌ಸಿ" ತಂಡಕ್ಕೆ ಬೆಂಬಲ ಘೋಷಿಸಿದೆ. ಇತ್ತೀಚೆಗೆ ಮುಕ್ತಾಯವಾದ ಪ್ರೊ ಕಬಡ್ಡಿ ಲೀಗ್-2019ರಲ್ಲಿ ಹರ್ಯಾಣ ಸ್ಟೀಲರ್ಸ್ ತಂಡವನ್ನು ಬೆಂಬಲಿಸಿದ್ದ ಎಪಿಎಲ್ ಅಪೋಲೊ ಇದೀಗ ಮತ್ತೊಂದು ಮೆಗಾ ಬೆಂಬಲವನ್ನು ಬೆಂಗಳೂರು ಎಫ್‌ಸಿ ತಂಡಕ್ಕೆ ಘೋಷಿಸಿದೆ.

ಬೆಂಗಳೂರು ಎಫ್‌ಸಿ ಜತೆಗಿನ ಒಂದು ವರ್ಷದ ಒಪ್ಪಂದದ ಅನ್ವಯ, ಬೆಂಗಳೂರು ಎಫ್‌ಸಿ ತಂಡದ ಆಟಗಾರರು ಧರಿಸುವ ಜೆರ್ಸಿಯ ತೋಳುಗಳಲ್ಲಿ ಎಪಿಎಲ್ ಅಪೋಲೊ ಲೋಗೊ ಇರುತ್ತದೆ. ಬೆಂಗಳೂರು ಎಫ್‌ಸಿ, ಭಾರತೀಯ ವೃತ್ತಿಪರ ಫುಟ್‌ಬಾಲ್ ಕ್ಲಬ್ ಆಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿದೆ. ಈ ತಂಡ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸದಸ್ಯತ್ವ ಹೊಂದಿ ಸ್ಪರ್ಧಿಸುತ್ತಿದೆ. ಭಾರತೀಯ ಫುಟ್‌ಬಾಲ್ ರಂಗದಲ್ಲಿ ಮಾದರಿ ಫುಟ್ಬಾಲ್ ಕ್ಲಬ್ ಎನಿಸಿಕೊಂಡಿರುವ ಬೆಂಗಳೂರು ಎಫ್‌ಸಿ, ಭಾರತೀಯ ಫುಟ್‌ಬಾಲ್‌ಗೆ ಹೊಸ ಬಗೆಯ ವೃತ್ತಿಪರತೆಯನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಈ ಕೂಟಗಳನ್ನು ಅತ್ಯಂತ ಯಶಸ್ವಿಯಾಗಿ ನೆರವೇರಿಸುವ ನಿಟ್ಟಿನ ಬದ್ಧತೆಗೆ ಅನುಗುಣವಾಗಿ ಎಪಿಎಲ್ ಅಪೋಲೊ ಇತ್ತೀಚೆಗೆ ದೇಶದಲ್ಲಿ ಪ್ರಮುಖ ಕ್ರೀಡಾ ಕೂಟಗಳಿಗೆ ಪ್ರಾಯೋಕತ್ವ ವಹಿಸುವ ಮಹತ್ವಾಕಾಂಕ್ಷಿ ನಿರ್ಧಾರವನ್ನು ಪ್ರಕಟಿಸಿದೆ.

ಈ ಬಗ್ಗೆ ವಿವರ ನೀಡಿದ ಎಪಿಎಲ್ ಅಪೋಲೊ ಟ್ಯೂಬ್ಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಸಂಜಯ್ ಗುಪ್ತಾ, "ಕ್ರೀಡೆ ಬಗ್ಗೆ ನನಗೆ ವಿಶೇಷ ಒಲವು ಇದೆ. ಈ ವರ್ಷ ಹೆಚ್ಚಿನ ವಿಶೇಷವೆಂದರೆ ನಾವು ಐಪಿಎಲ್ ಮತ್ತು ಪ್ರೊ ಕಬಡ್ಡಿ ಲೀಗ್‌ನಂಥ ವಿಶಿಷ್ಟ ಕೂಟಗಳಿಗೆ ಯಶಸ್ವಿಯಾಗಿ ಕೈಜೋಡಿಸಿದ್ದೇವೆ. ಇದೀಗ ಭಾರತೀಯ ಸೂಪರ್ ಲೀಗ್ ಕ್ಲಬ್ ಎನಿಸಿದ ಬೆಂಗಳೂರು ಎಫ್‌ಸಿ ತಂಡವನ್ನು ಬೆಂಬಲಿಸುವ ಮತ್ತೊಂದು ಮಹತ್ವದ ನಿರ್ಧಾರವನ್ನು ಸಂಸ್ಥೆ ಕೈಗೊಂಡಿದೆ. ಫುಟ್‌ಬಾಲ್ ದೇಶದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದ್ದು, ಇದರ ಮೂಲಕ ನೈಜವಾದ ಕ್ರೀಡಾ ಮನೋಭಾವ ಮತ್ತು ಶಕ್ತಿ ಪ್ರತಿಫಲಿಸುತ್ತಿದೆ. ದೇಶಾದ್ಯಂತ ಇದು ಬಹಳಷ್ಟು ದೊಡ್ಡ ಸಂಖ್ಯೆಯ ಮಂದಿಯನ್ನು ತಲುಪಿದ್ದು, ಬೆಂಗಳೂರು ಎಫ್‌ಸಿ ತಂಡಕ್ಕೆ ನಮ್ಮ ಸಂಪೂರ್ಣ ಸಹಕಾರವನ್ನು ನೀಡಲು ನಾವು ಬಯಸಿದ್ದೇವೆ. ವಿಶಿಷ್ಟ ಫಲಿತಾಂಶವನ್ನು ನೀಡುವ ನಿಟ್ಟಿನಲ್ಲಿ ತಂಡಕ್ಕೆ ಅಗತ್ಯವಾದ ಎಲ್ಲ ನೆರವನ್ನು ನೀಡಲಾಗುವುದು" ಎಂದು ವಿವರಿಸಿದರು.

Story first published: Monday, November 4, 2019, 18:30 [IST]
Other articles published on Nov 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X