ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಬೆಂಗಳೂರು, ಜನವರಿ21: ಮ್ಯಾಂಚೆಸ್ಟರ್ ಯುನೈಟೆಡ್‍ಗೆ ಜಾಗತಿಕ ಟೈರ್ ಪಾಲುದಾರರಾಗಿರುವ ಅಗ್ರಗಣ್ಯ ಟೈರ್ ಉತ್ಪಾದನಾ ಕಂಪನಿಯಾದ ಅಪೋಲೊ ಟೈರ್ಸ್ ದೇಶಾದ್ಯಂತ ಫುಟ್‍ಬಾಲ್ ಪ್ರತಿಭೆಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಯುನೈಟೆಡ್ ವಿ ಪ್ಲೇ ಯೋಜನೆಗೆ ಚಾಲನೆ ನೀಡಿದೆ.

ಪ್ರತಿಭಾವಂತ ಮಕ್ಕಳಿಗೆ ಮ್ಯಾಂಚೆಸ್ಟರ್ ಯುನೈಟೆಡ್ ಸಾಕರ್ ಸ್ಕೂಲ್ (ಎಂಯುಎಸ್‍ಎಸ್) ತರಬೇತುದಾರರು ತರಬೇತಿ ನೀಡಲಿದ್ದಾರೆ. ಇದರಲ್ಲಿ ಅತ್ಯುತ್ತಮ ಸಾಧನೆ ಮಾಡುವ ಪ್ರತಿಭೆಗಳು ಜೀವಮಾನದಲ್ಲೇ ಅಪೂರ್ವ ಅವಕಾಶ ಪಡೆಯಲಿದ್ದು, ಈ ವರ್ಷದ ಮೇ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಮ್ಯಾಂಚೆಸ್ಟರ್ ಯುನೈಟೆಡ್‍ನ 18ರ ವಯೋಮಿತಿಯ ತಂಡದ ಜತೆ ತರಬೇತಿ ಪಡೆಯಲಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್‍ನ ಕೇಂದ್ರ ಹಿಂಪಡೆ ಮತ್ತು ಮಧ್ಯಫೀಲ್ಡರ್, ನಾಲ್ಕು ಬಾರಿ ಲೀಗ್ ಪ್ರಶಸ್ತಿಗಳನ್ನು ಗೆದ್ದ (1997, 1999, 2000 ಮತ್ತು 2001), ಒಂದು ಬಾರಿ ಎಫ್‍ಎ ಕಪ್ (1999) ಮತ್ತು ಒಂದು ಬಾರಿ ಯುಇಎಫ್‍ಎ ಚಾಂಪಿಯನ್ಸ್ ಲೀಗ್ (1999) ಗೆದ್ದ ರಾನಿ ಜಾನ್ಸನ್ ಅವರು, ಯುನೈಟೆಡ್ ವಿ ಪ್ಲೇ ಕಾರ್ಯಕ್ರಮಕ್ಕೆ ಮುಂಬೈನಲ್ಲಿ ಅಪೋಲೊ ಟೈರ್ಸ್ ಲಿಮಿಟೆಡ್‍ನ ಮಾರಾಟ, ಮಾರುಕಟ್ಟೆ ಮತ್ತು ಸೇವೆ (ಭಾರತ, ಸಾರ್ಕ್ ಮತ್ತು ಓನೇಶಿಯಾ) ವಿಭಾಗದ ಉಪಾಧ್ಯಕ್ಷ ರಾಜೇಶ್ ಧಹಿಯಾ ಜತೆ ಚಾಲನೆ ನೀಡಿದರು.

ಯುನೈಟೆಡ್ ವಿ ಪ್ಲೇ ಕಾರ್ಯಕ್ರಮವು ಎರಡು ವಯೋಮಿತಿಯಲ್ಲಿ ಅಂದರೆ 13 ವರ್ಷ ವಯೋಮಿತಿ ಮತ್ತು 16 ವರ್ಷ ವಯೋಮಿತಿಯಲ್ಲಿ ದೆಹಲಿ, ಚಂಡೀಗಢ, ಮುಂಬೈ, ಗೋವಾ, ಕೊಲ್ಕತ್ತಾ, ಗುವಾಹತಿ, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಮುಂದಿನ ಎರಡು ತಿಂಗಳ ಅವಧಿಯಲ್ಲಿ ನಡೆಯಲಿದೆ. ಇದರಲ್ಲಿ ಸುಮಾರು 3000 ಯುವ ಫುಟ್‍ಬಾಲ್ ಪ್ರತಿಭೆಗಳು ಭಾಗವಹಿಸುವ ನಿರೀಕ್ಷೆ ಇದೆ.

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಯುವ ಪ್ರತಿಭೆಗಳು ಮ್ಯಾಂಚೆಸ್ಟರ್ ಯುನೈಟೆಡ್ ಸಾಕರ್ ಸ್ಕೂಲ್ (ಎಂಯುಎಸ್‍ಎಸ್) ಕೋಚ್‍ಗಳ ಮನ ಗೆಲ್ಲುವ ಮುನ್ನ ಆರಂಭಿಕ ಕಾರ್ಯಕ್ರಮವನ್ನು ಸ್ಥಳೀಯ ತರಬೇತುದಾರರು ನಿರ್ವಹಿಸುತ್ತಾರೆ. ಈ ಹಂತದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಭೆಗಳಿಗೆ ಮ್ಯಾಂಚೆಸ್ಟರ್ ಯುನೈಟೆಡ್‍ಗೆ ನೀಡುವ ಕೌಶಲ ಮತ್ತು ತಂತ್ರಗಾರಿಕೆ ತರಬೇತಿಯನ್ನು ನೀಡಲಾಗುತ್ತದೆ.

ದೇಶಾದ್ಯಂತ ಅತ್ಯುತ್ತಮ ಸಾಧನೆ ಮಾಡುವ 32 ಪ್ರತಿಭೆಗಳನ್ನು ಎಂಯುಎಸ್‍ಎಸ್ ಕೋಚ್‍ಗಳು ಆಯ್ಕೆ ಮಾಡಲಿದ್ದು, ಇವರೆಲ್ಲರೂ ಮುಂಬೈನಲ್ಲಿ ಎರಡು ತರಬೇತಿ ಕಾರ್ಯಕ್ರಮಗಳಿಗೆ ಮ್ಯಾಂಚೆಸ್ಟರ್ ಯುನೈಟೆಡ್ 18ರ ವಯೋಮಿತಿಯ ತಂಡದ ಜತೆ ಸಮಾವೇಶಗೊಳ್ಳಲಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್ ಈ ವರ್ಷದ ಮಾರ್ಚ್‍ನಲ್ಲಿ ಭಾರತಕ್ಕೆ ಭೇಟಿ ನೀಡಲಿದೆ.

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಪೋಲೊ ಟೈರ್ಸ್ ಲಿಮಿಟೆಡ್‍ನ ಮಾರಾಟ, ಮಾರುಕಟ್ಟೆ ಮತ್ತು ಸೇವೆ (ಭಾರತ, ಸಾರ್ಕ್ ಮತ್ತು ಓನೇಶಿಯಾ) ವಿಭಾಗದ ಉಪಾಧ್ಯಕ್ಷ ರಾಜೇಶ್ ಧಹಿಯಾ, "ಭಾರತದಲ್ಲಿ ತಳಮಟ್ಟದಲ್ಲಿ ಫುಟ್‍ಬಾಲ್ ಅಭಿವೃದ್ಧಿಯ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ಇದು ನಮಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಈ ಸಮುದಾಯದ ಜತೆ ಸಂವಾದ ನಡೆಸಲು ಮತ್ತು ತೊಡಗಿಸಿಕಕೊಳ್ಳಲು ನೆರವಾಗುತ್ತದೆ. ಬಳಿಕ ಮ್ಯಾಂಚೆಸ್ಟರ್ ಯುನೈಟೆಡ್‍ನ 18ರ ವಯೋಮಿತಿಯ ತಂಡವನ್ನು ಆಹ್ವಾನಿಸಲಾಗುತ್ತದೆ.

ಇದು ಯುನೈಟೆಡ್‍ನ ಮೊದಲ ತಂಡಕ್ಕೆ ಆಟಗಾರರ ವಾಹಿನಿಯನ್ನು ಗುರುತಿಸಿ ಪದಗಿಸುವ ಕಾರ್ಯ ಮಾಡಲಿದೆ. ನಮ್ಮ ಭಾರತೀಯ ಫುಟ್‍ಬಾಲ್ ಆಟಗಾರರನ್ನು ತೊಡಗಿಸಿಕೊಳ್ಳಲು ಉತ್ತೇಜಿಸುವ ಕಾರ್ಯಕ್ರಮದ ಭಾಗವಾಗಿ ಯುನೈಟೆಡ್ ಮ್ಯಾಂಚೆಸ್ಟರ್‍ನ ಮೊದಲ ತಂಡ ಭಾರತಕ್ಕೆ ಭೇಟಿ ನೀಡಿ ಫುಟ್‍ಬಾಲ್ ಅಭಿಮಾನಿಗಳ ಜತೆ ತೊಡಗಿಸಿಕೊಳ್ಳಲಿದೆ" ಎಂದು ವಿವರಿಸಿದರು.

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಮ್ಯಾಂಚೆಸ್ಟರ್ ಯುನೈಟೆಡ್‍ನ ಪಾಲುದಾರಿಕೆ ವಿಭಾಗದ ನಿರ್ದೇಶಕ ಸಿಯಾನ್ ಜೆಫರ್‍ಸನ್ ಮಾತನಾಡಿ, "ಮ್ಯಾಂಚೆಸ್ಟರ್ ಯುನೈಟೆಡ್ ಭಾರತದ ಜತೆ ಧೀರ್ಘಾವಧಿಯಿಂದಲೂ ಸಂಬಂಧ ಹೊಂದಿದೆ. 2016ರ ಬಳಿಕ ಭಾರತದಲ್ಲಿ ಐದು #ಲವ್ ಯುನೈಟೆಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಜತೆಗೆ ನಮ್ಮ ಲಕ್ಷಾಂತರ ಭಾರತೀಯ ಅಭಿಮಾನಿಗಳು ಹಾಗೂ ಅನುಯಾಯಿಗಳಿಗಾಗಿ ನಮ್ಮ ಕ್ಲಬ್ ಚಾನಲ್‍ನಲ್ಲಿ ಕ್ರೀಡಾ ಅಂಶಗಳನ್ನು ಸೃಷ್ಟಿಸಲಾಗುತ್ತಿದೆ. ಭಾರತದಲ್ಲಿ ಕಳೆದ ಕೆಲ ವರ್ಷಗಳಿಂದ ಫುಟ್ಬಾಲ್ ಜನಪ್ರಿಯತೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ನಾವು ಕಾಣುತ್ತೇವೆ. ಜವಾಬ್ದಾರಿಯುತ ಕ್ಲಬ್ ಆಗಿ ನಾವು ಉತ್ಸಾಹಿ ಆಟಗಾರರನ್ನು ಉತ್ತೇಜಿಸಲು ಬಯಸಿದ್ದೇವೆ. ಅಪೋಲೊ ಟೈರ್ಸ್‍ನ ಯುನೈಟೆಡ್ ವಿ ಪ್ಲೇ ಯೋಜನೆಯಂಥ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಅವರನ್ನು ತೊಡಗಿಸಿಕೊಳ್ಳಲಿದ್ದೇವೆ" ಎಂದು ಹೇಳಿದರು.

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಭಾರತದ ಪ್ರತಿಭೆ ಉತ್ತೇಜನಕ್ಕೆ ಮುಂದಾದ ಮ್ಯಾಂಚೆಸ್ಟರ್ ಯುನೈಟೆಡ್

ಮ್ಯಾಂಚೆಸ್ಟರ್ ಯುನೈಟೆಡ್‍ನ ಅಕಾಡೆಮಿಗಳ ಮುಖ್ಯಸ್ಥ ನಿಕ್ ಕಾಕ್ಸ್ ಮಾತನಾಡಿ, "18 ವರ್ಷ ವಯೋಮಿತಿಯ ತಂಡ ಭಾರತಕ್ಕೆ ನೀಡಲಿರುವ ಸಾಂಸ್ಕೃಂತಿಕ ಭೇಟಿ, ತಂಡದ ತರಬೇತಿಯ ಒಂದು ಭಾಗವಾಗಿದೆ. ಇದು ನಮ್ಮ ಯುವ ಆಟಗಾರರಿಗೆ ತಂಡವಾಗಿ ಒಂದು ದೇಶಕ್ಕೆ ಹೇಗೆ ಪ್ರವಾಸ ಕೈಗೊಳ್ಳಬೇಕು ಎಂಬ ಅನುಭವವನ್ನು ನೀಡುತ್ತದೆ. ಈ ತಂಡ ಇದುವರೆಗೆ ಭೇಟಿ ನೀಡಿಲ್ಲ ಹಾಗೂ ಜಾಗತಿಕ ಅಭಿಮಾನಿಗಳನ್ನು ಭೇಟಿ ನೀಡಿಲ್ಲ ಹಾಗೂ ತಮ್ಮ ಸ್ವಂತ ಹವಾಮಾನ ಹಾಗೂ ಸಂಸ್ಕೃತಿಗಿಂತ ಭಿನ್ನವಾದ ಅನುಭವವನ್ನು ಪಡೆದಿಲ್ಲ" ಎಂದು ಬಣ್ಣಿಸಿದರು.

ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‍ಬಾಲ್ ಕ್ಲಬ್‍ನ ಜಾಗತಿಕ ಟೈರ್ ಪಾಲುದಾರರಾಗಿರುವ ಜತೆಗೆ ಅಪೋಲೊ ಟೈರ್ಸ್ ಭಾರತದಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್)ನಲ್ಲೂ ಅಸ್ತಿತವ ಹೊಂದಿದೆ. ಚೆನ್ನೈಯೀನ್ ಫುಟ್‍ಬಾಲ್ ಕ್ಲಬ್‍ನ ಪ್ರಮುಖ ಪ್ರಾಯೋಜಕರಾಗಿದ್ದು, ಇಂಡಿಯನ್ ಲೀಗ್‍ನಲ್ಲಿ ಪಂಜಾಬ್ ಫುಟ್‍ಬಾಲ್ ಕ್ಲಬ್‍ನ ಪ್ರಾಯೋಜಕತ್ವ ಹೊಂದಿದೆ. ಹಂಗೇರಿಯಲ್ಲಿ ಕಂಪನಿಯು ದೇಶದ ಅಗ್ರಗಣ್ಯ ಕ್ರೀಡಾ ಕ್ಲಬ್ ಎನಿಸಿದ ಡಿವಿಟಿಕೆ ಜತೆ ಸಹಯೋಗ ಹೊಂದಿದೆ. ಜರ್ಮನ್ ಬುಂಡೇಸ್ಲಿಗಾದಲ್ಲೂ ಅಸ್ತಿತ್ವವನ್ನು ಹೊಂದಿದ್ದು, ಬೊರೂಸಿಯಾ ಮಾಂಚೆಂಗ್ಲಾದಬಾಕ್‍ನಲ್ಲೂ ಅಸ್ತಿತ್ವ ಹೊಂದಿದೆ.

Story first published: Tuesday, January 21, 2020, 14:59 [IST]
Other articles published on Jan 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X