ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬಾರ್ಸಿಲೋನಾ ತೊರೆಯುವ ಮುನ್ನ ಕಣ್ಣೀರು ಹಾಕಿದ ಲಿಯೋನೆಲ್ ಮೆಸ್ಸಿ: ವಿಡಿಯೋ

Argentina super star Lionel Messi Confirms Barcelona Exit with tearful eyes

ಮ್ಯಾಡ್ರಿಡ್: ಬಾರ್ಸಿಲೋನಾ ತಂಡದ ಸ್ಟಾರ್ ಫುಟ್ಬಾಲರ್, ಅರ್ಜೆಂಟೀನಾ ರಾಷ್ಟ್ರೀಯ ತಂಡದ ಆಟಗಾರ ಲಿಯೋನೆಲ್ ಮೆಸ್ಸಿ ಕಣ್ಣೀರಿನೊಂದಿಗೆ ಬಾರ್ಸಿಲೋನಾ ಫುಟ್ಬಾಲ್ ಕ್ಲಬ್‌ಗೆ ವಿದಾಯ ಹೇಳಿದ್ದಾರೆ. ಬಾರ್ಸಿಲೋನಾ ತೊರೆಯುವುದಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೆಸ್ಸಿ, ಕ್ಲಬ್ ತೊರೆಯಲು ನಿರ್ಧರಿಸಿರುವ ವಿಚಾರವನ್ನು ಖಾತರಿಪಡಿಸಿದ್ದಾರೆ.

ನಾನೀಗ ವ್ಯಕ್ತಿಯಾಗಿ ಬೆಳೆದಿದ್ದೇನೆ: ವಿವಾದ ಸೃಷ್ಠಿಸಿದ್ದ ರಾಬಿನ್ಸನ್ ಹೇಳಿಕೆನಾನೀಗ ವ್ಯಕ್ತಿಯಾಗಿ ಬೆಳೆದಿದ್ದೇನೆ: ವಿವಾದ ಸೃಷ್ಠಿಸಿದ್ದ ರಾಬಿನ್ಸನ್ ಹೇಳಿಕೆ

34ರ ಹರೆಯದ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ತಂಡದ ಪರ 17 ಸೀಸನ್‌ಗಳಲ್ಲಿ ಆಡಿದ್ದರು. ತಾನು 17ನೇ ಹರೆಯದವನಾಗಿದ್ದಾಗ ಮೆಸ್ಸಿ ಬಾರ್ಸಿಲೋನಾ ಪರ ಅಧಿಕೃತ ಪಂದ್ಯ ಆಡಿದ್ದರು. ಕ್ಲಬ್‌ನಲ್ಲೇ ಉಳಿಯಲು ಕ್ಲಬ್‌ ಅಧಿಕಾರಿಗಳನ್ನು ಮನವೊಲಿಸಲು ತಾನು ಯತ್ನಿಸಿದ್ದಾಗಿ ಮೆಸ್ಸಿ ಹೇಳಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!

"ಇಲ್ಲಿ ಅಂದರೆ ಬಾರ್ಸಿಲೋನಾದಲ್ಲಿ ಉಳಿಯಲು ನಾನು ಬಹಳ ಮನವೊಲಿಸಲು ಯತ್ನಿಸಿದೆ. ಇದು ನನ್ನ ಮನೆ, ನಮ್ಮ ಮನೆ. ನಾನು ಬಾರ್ಸಿಲೋನಾದಲ್ಲಿ ಉಳಿಯಲು ಬಯಸಿದ್ದೆ ಮತ್ತು ಅದೇ ನನ್ನ ಯೋಜನೆಯಾಗಿತ್ತು ... ಆದರೆ ನನ್ನ ಇಡೀ ವೃತ್ತಿ ಜೀವನ ಕಳೆದ ಇಲ್ಲಿಗೆ ನಾನಿಂದು ವಿದಾಯ ಹೇಳುತ್ತಿದ್ದೇನೆ," ಎಂದು ಮೆಸ್ಸಿ ಸುದ್ದಿಗೋಷ್ಠಿ ವೇಳೆ ಹೇಳಿದ್ದಾರೆ.

https://kannada.mykhel.com/more-sports/tokyo-olympics-from-neeraj-chopra-s-athletics-gold-to-fencing-debut-india-s-firsts-at-the-tokyo-ol-019293.html

ಕಳೆದ ಗುರುವಾರವೇ ಬಾರ್ಸಿಲೋನಾ ಕ್ಲಬ್, ಮೆಸ್ಸಿ ನಿರ್ಗಮನದ ಬಗ್ಗೆ ಸುಳಿವು ನೀಡಿತ್ತು. ಮೆಸ್ಸಿ ಮತ್ತು ಕ್ಲಬ್ ಮಧ್ಯೆ ಒಪ್ಪಂದಕ್ಕಾಗಿ ನಡೆದ ಮಾತುಕತೆ ಹೊಂದಿಕೆಯಾಗಿಲ್ಲ. ಹೀಗಾಗಿ ಮೆಸ್ಸಿ ಇನ್ನು ಕ್ಲಬ್‌ನಲ್ಲಿ ಮುಂದುವರೆಯುತ್ತಿಲ್ಲ ಎಂದು ಕ್ಲಬ್ ಹೇಳಿಕೊಂಡಿತ್ತು. ಹಣಕಾಸಿನ ಸಮಸ್ಯೆಯಿಂದಾಗಿ ಮೆಸ್ಸಿ-ಕ್ಲಬ್ ನಡುವಿನ ಒಪ್ಪಂದ ಕೂಡಿಬಂದಿಲ್ಲ ಎಂದು ಕ್ಲಬ್ ಹೇಳಿತ್ತು. ಅಂದ್ಹಾಗೆ ಮೆಸ್ಸಿ ಆರು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ದೈತ್ಯ ಪ್ರತಿಭೆ.

Story first published: Sunday, August 8, 2021, 17:27 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X