ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಡಚ್ಚರನ್ನು ಮಣಿಸಿ ಜರ್ಮನ್ನರ ಬೇಟೆಗೆ ನಿಂತ ಮೆಸ್ಸಿ ಪಡೆ

By Mahesh

ಬ್ರೆಜಿಲ್, ಜು.10: ಫೀಫಾ ವಿಶ್ವಕಪ್​ ಎರಡನೇ ಸೆಮಿಫೈನಲ್​ನಲ್ಲಿ ಹಾಲೆಂಡ್​ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ರೋಚಕ ಜಯ ಸಾಧಿಸಿದ ಅರ್ಜೆಂಟಿನಾ ವಿಶ್ವಕಪ್​ ಫೈನಲ್ ಪ್ರವೇಶ ಪಡೆದಿದೆ. ಪೆನಾಲ್ಟಿ ಶೂಟೌಟ್ ನಲ್ಲಿ ಅರ್ಜೆಂಟಿನಾ 4-2 ಗೋಲುಗಳ ಮೂಲಕ ಜಯದ ನಗೆ ಬೀರಿದಿದೆ. ಈ ಮೂಲಕ ಸೆಮಿಫೈನಲ್ ತಲುಪಿ ಎಂದೂ ಸೋಲದ ತಂಡವಾಗಿ ಮುಂದುವರೆದಿದೆ.

ಅರ್ಜೆಂಟಿನಾ ತಂಡ ಭಾರತೀಯ ಕಾಲ ಮಾನ ಪ್ರಕಾರ ಜು.14 ರಂದು 12.30 ಮಧ್ಯರಾತ್ರಿ ನಡೆಯುವ ಅಂತಿಮ ಹಣಾಹಣಿಯಲ್ಲಿ ಜರ್ಮನಿಯನ್ನು ಎದುರಿಸಲಿದೆ.

ಪಂದ್ಯದ ನಿಗದಿತ ಅವಧಿವರೆಗೂ ಯಾವುದೇ ಗೋಲುಗಳು ಬರದ ಕಾರಣ ಅದೃಷ್ಟದ ಪರೀಕ್ಷೆ ಎಂಬಂತೆ ನಡೆದ ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟಿನಾ ತಂಡ ಚಾಣಾಕ್ಷತೆ ಮೆರೆದು ಗೋಲು ಗಳಿಸಿತು. ಡಚ್ಚರ ಸ್ಟಾರ್ ಆಟಗಾರ ಸ್ನೈಡರ್ ಹೊಡೆದ ಕಿಕ್ ತಡೆಯುವಲ್ಲಿ ಅರ್ಜೆಂಟಿನಾದ ಗೋಲಿ ರೊಮೆರೋ ಯಶಸ್ವಿಯಾಗುತ್ತಿದ್ದಂತೆ ಜಯ ಖಾತ್ರಿಯಾಗಿಬಿಟ್ಟಿತು. ಅರ್ಜೆಂಟಿನಾ ತಂಡ ಪೆನಾಲ್ಟಿ ಶೂಟೌಟ್ ಆಡಲು ತಯಾರಿಗಾಗಿ ಮೈದಾನಕ್ಕೆ ಇಳಿದಿದ್ದಂತೆ ಕಂಡು ಬಂತು ಎಂದು ರಾಬೆನ್ ಗೊಣಗಿದ್ದಾರೆ.

ಗೆಲುವಿಗೆ ಪ್ರಮುಖ ಪಾತ್ರ ವಹಿಸಿ ಹೀರೋ ಆಗಿ ಮೆರೆದ 33ರ ಹರೆಯದ ಗೋಲ್ ಕೀಪರ್ ರೊಮೆರೋ ಅವರ ಸಾಧನೆಯಲ್ಲಿ ಎದುರಾಳಿ ಕೋಚ್ ಅವರ ಪಾತ್ರ ಇದೆ ಎಂಬ ಅಚ್ಚರಿ ಸಂಗತಿ ನಿಮಗೆ ಗೊತ್ತೆ? ಪಂದ್ಯದ ರೋಚಕ ಕ್ಷಣಗಳು ನಿಮ್ಮ ಮುಂದೆ...

ಅರ್ಜೆಂಟಿನಾ ಪಾಲಿನ ಹೀರೋ ಆದ ರೊಮೆರೋ

ಅರ್ಜೆಂಟಿನಾ ಪಾಲಿನ ಹೀರೋ ಆದ ರೊಮೆರೋ

ಅರ್ಜೆಂಟಿನಾ ಪಾಲಿನ ಹೀರೋ ಆದ ರೊಮೆರೋ ಅವರು ಹಾಲೆಂಡ್ ನಲ್ಲಿ ಎಜಡ್ ಅಲ್ಕ್ಮಾರ್ ಕ್ಲಬ್ ಪರ ಆಡಲು ಸೇರಿದಾಗ ಹೇಗೆ ಪೆನಾಲ್ಟಿ ಶೂಟೌಟ್ ತಡೆಯುವುದು ಎಂಬ ಕಲೆಯನ್ನು ಹೇಳಿಕೊಟ್ಟಿದ್ದೇ ಹಾಲಿ ಹಾಲೆಂಡ್ ಕೋಚ್ ವಾನ್ ಗಾಲ್.

ಈ ಬಗ್ಗೆ ವಾನ್ ಗಾಲ್ ಕೂಡಾ ಮಾತನಾಡಿ, ನಾನು ಹೇಳಿಕೊಟ್ಟ ವಿದ್ಯೆ ಸರಿಯಾಗಿ ಉಪಯೋಗಿಸಿಕೊಂಡಿದ್ದಾನೆ. ಅದು ನಮ್ಮ ತಂಡದ ವಿರುದ್ಧ ಎಂಬುದು ಕೊಂಚ ಬೇಸರ ಎಂದಿದ್ದಾರೆ.

62 ವರ್ಷದ ವಾನ್ ಗಾಲ್ ಅವರು 2007ರಲ್ಲಿ ಬೊನಸ್ ಐರೀಸ್ ನಿಂದ ಯುರೋಪಿನ ಕ್ಲಬಿಗೆ ರೊಮೆರೊರನ್ನು ಕರೆ ತಂದು ಪಾಠ ಹೇಳಿಕೊಟ್ಟಿದ್ದರು. ವಾನ್ ಗಾಲ್ ಮುಂದೆ ಮ್ಯಾಂಚೆಸ್ಟರ್ ಯುನೈಟೆಡ್ ಮ್ಯಾನೇಜರ್ ಆಗುವ ಸಾಧ್ಯತೆಯಿದೆ.

 ಉಭಯ ತಂಡದಿಂದ ಜಿದ್ದಾಜಿದ್ದಿ ಹೋರಾಟ

ಉಭಯ ತಂಡದಿಂದ ಜಿದ್ದಾಜಿದ್ದಿ ಹೋರಾಟ

ಮೊದಲಾರ್ಧದವರೆಗೂ ಎಚ್ಚರಿಕೆ ಹಾಗೂ ಜಿದ್ದಾಜಿದ್ದಿ ಹೋರಾಟ ಉಭಯ ತಂಡಗಳಲ್ಲೂ ಕಂಡುಬಂತು. ಯಾರು ಗೆಲ್ಲುತ್ತಾರೆ ಎಂಬುದನ್ನು ನಿರ್ಧರಿಸಲು ಪಂದ್ಯ ವೀಕ್ಷಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದರು. ಮೊದಲಾರ್ಧದಲ್ಲಿ ಭರ್ಜರಿ ದಾಳಿ ನಡೆಸುವ ಹಾಲೆಂಡ್ ಯಾಕೋ ನಿಧಾನಗತಿ ಆಟವಾಡಿದ್ದು ಮುಳುವಾಯಿತು

ಡಚ್ಚರ ದಾಳಿ ತಡೆಗಟ್ಟಿದ ಅರ್ಜೆಂಟಿನಾ

ಡಚ್ಚರ ದಾಳಿ ತಡೆಗಟ್ಟಿದ ಅರ್ಜೆಂಟಿನಾ

ನೆದರ್‌ಲ್ಯಾಂಡ್‌ನ ವಿಶ್ವಾಸಾರ್ಹ ಆಟಗಾರ ವಾನ್ ಪರ್ಸಿ, ಡರ್‌ಕ್ಯೂಟ್, ರಾಬೆನ್ ಮತ್ತಿತರ ಆಟಗಾರರು ಅರ್ಜೆಂಟೀನಾ ಗೋಲಿನತ್ತ ಚೆಂಡನ್ನು ಕೊಂಡೊಯ್ದರಾದರೂ ಅದನ್ನು ಗೋಲಿನೊಳಗೆ ನುಗ್ಗಿಸಲು ವಿಫಲರಾದರು.

80ನೇ ನಿಮಿಷದಲ್ಲಿ ಬಂದಂತಹ ಉತ್ತಮ ಅವಕಾಶ ಕೈ ತಪ್ಪಿತು. ಇದಾದ ನಂತರ ಅರ್ಜೆಂಟೈನಾ ತಂಡದಲ್ಲಿ ಸಂಚಲನ ಸೃಷ್ಟಿಯಾಗಿ ಒಮ್ಮೆಲೇ ಉತ್ತಮ ಹೋರಾಟಕ್ಕೆ ನಿಂತಿತು.

 ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ಗೆ ಆದೇಶ

ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ಗೆ ಆದೇಶ

ಆನಂತರ ಉಭಯ ತಂಡಗಳಿಗೆ 30 ನಿಮಿಷ ಹೆಚ್ಚುವರಿ ಸಮಯ ನೀಡಲಾಯ್ತು.. ಅಲ್ಲೂ ಕೂಡ ಗೋಲ್​ ಹೊಡೆಯುಲು ಯಾರೂ ಸಫಲರಾಗಲಿಲ್ಲ. ಕೊನೆಯಲ್ಲಿ ಪೆನಾಲ್ಟಿ ಶೂಟೌಟ್ ​ನಿಂದ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಯ್ತು. ಅರ್ಜೆಂಟೀನಾ 4-2 ಗೋಲುಗಳ ಅಂತರದಿಂದ ಗೆಲುವು ಪಡೆಯಿತು.

ಹೀರೋ ಆದ ರೊಮೆರೋ

ಹೀರೋ ಆದ ರೊಮೆರೋ

ಮೊದಲು ನೆದರ್‌ಲ್ಯಾಂಡ್ ಕಡೆಯಿಂದ ರಾನ್‌ರೋನ್(Ron Vlaar)
ಅದೃಷ್ಟ ಪರೀಕ್ಷೆಗೆ ಬಂದರು. ಅವರು ಒದ್ದ ಚೆಂಡನ್ನು ತಡೆಯುವಲ್ಲಿ ಅರ್ಜೆಂಟೈನಾದ ರೊಮೆರೋ(೦)ಯಶಸ್ವಿಯಾದರು.

ಮೆಸ್ಸಿ-ರಾಬೆನ್ ಗೋಲು ಹೊಡೆದರು

ಮೆಸ್ಸಿ-ರಾಬೆನ್ ಗೋಲು ಹೊಡೆದರು

ನಂತರ ಅರ್ಜೆಂಟೈನಾದ ಮೆಸ್ಸಿ ಯಶಸ್ವಿಯಾಗಿ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ (1-0) ತಂದುಕೊಟ್ಟರು. ನಂತರ ನೆದರ್‌ಲ್ಯಾಂಡ್‌ನ ಅಯಾನ್ ರಾಬೆನ್ ಗೋಲು ಬಾರಿಸಿ (1-1) ಸಮಬಲ ಮಾಡಿದರು.

ವೆಸ್ಲಿ ಸ್ನೈಡರ್ ಹೊಡೆದ ಚೆಂಡನ್ನು ತಡೆದ ರೊಮೆರೋ

ವೆಸ್ಲಿ ಸ್ನೈಡರ್ ಹೊಡೆದ ಚೆಂಡನ್ನು ತಡೆದ ರೊಮೆರೋ

ಗೆರೇಯ್ ಕೂಡ ಚೆಂಡನ್ನು ಗುರಿ ಮುಟ್ಟಿಸಲು (2-1) ಯಶಸ್ವಿಯಾದರು.
ನಂತರ ಬಂದ ನೆದರ್‌ಲ್ಯಾಂಡ್‌ನ ವೆಸ್ಲಿ ಸ್ನೈಡರ್ ಹೊಡೆದ ಚೆಂಡನ್ನು ಎದೆ ಭಾಗದಲ್ಲಿ ತಡೆದು ಅರ್ಜೆಂಟೈನಾದ ರೋಮೆರೋ ಸಂಭ್ರಮಿಸಿದರು.

ಡಚ್ಚರ ಸೋಲಿಗೆ ಕಾರಣವೇನು?

ಡಚ್ಚರ ಸೋಲಿಗೆ ಕಾರಣವೇನು?

ಉತ್ತಮ ಆಟವಾಡಿದರೂ ಸೋಲು ಅನುಭವಿಸಿದ ಡಚ್ ಆಟಗಾರರು ಬೇಸರದಿಂದ ವಿಶ್ವಕಪ್ ಗೆ ವಿದಾಯ ಹೇಳಬೇಕಾಯಿತು. ಪಂದ್ಯದ ನಿಗದಿತ ವೇಳೆ ಎಂದಿನ ದಾಳಿ ತಂತ್ರ ಪ್ರಯೋಗಿಸದಿದ್ದದ್ದು, ಪೆನಾಲ್ಟಿ ಶೂಟೌಟ್ ಗೆ ತಯಾರಿ ನಡೆಸದಿದ್ದದ್ದು ಡಚ್ಚರ ಸೋಲಿಗೆ ಕಾರಣವಾಯಿತು.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X