ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಗೋಲ್ ದಾಖಲೆ ಮುರಿದ ಲಿಯೋನೆಲ್ ಮೆಸ್ಸಿ

Argentine star Lionel Messi surpasses Sunil Chhetris international goals tally

ಕ್ಯುಯಾಬಾ: ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಹೆಸರಿನಲ್ಲಿದ್ದ ದಾಖಲೆಯನ್ನು ಆರ್ಜೆಂಟೀನಾ ಸ್ಟಾರ್ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ಸರಿಗಟ್ಟಿದ್ದಾರೆ. ಮಂಗಳವಾರ (ಜೂನ್ 29) ನಡೆದ ಕೋಪಾ ಅಮೆರಿಕಾ ಪಂದ್ಯದಲ್ಲಿ ಮೆಸ್ಸಿ ಈ ಸಾಧನೆ ಮಾಡಿದ್ದಾರೆ.

WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!WTC ಫೈನಲ್‌ ಜೆರ್ಸಿ ಹರಾಜಿಗಿಟ್ಟ ಟಿಮ್ ಸೌಥೀ, ಕಾರಣ ಕೇಳಿದ್ರೆ ಮನ ಕರಗುತ್ತೆ!

ಮಂಗಳವಾರದ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಬೊಲಿವಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಅರ್ಜೆಂಟೀನಾ 4-1ರ ಅಂತರದೊಂದಿಗೆ ಪಂದ್ಯ ಗೆದ್ದಿತ್ತು. ಪಂದ್ಯದಲ್ಲಿ ಮೆಸ್ಸಿ 33 (ಪೆನಾಲ್ಟಿ ಶೂಟ್) ಮತ್ತು 42ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು.

ಐಪಿಎಲ್‌ 2022ಕ್ಕೆ ಮತ್ತೆರಡು ತಂಡಗಳ ಸೇರ್ಪಡೆ ಆಗುತ್ತ?!ಐಪಿಎಲ್‌ 2022ಕ್ಕೆ ಮತ್ತೆರಡು ತಂಡಗಳ ಸೇರ್ಪಡೆ ಆಗುತ್ತ?!

ಬೊಲಿವಿಲಿಯಾ ವಿರುದ್ಧದ ಪಂದ್ಯದೊಂದಿಗೆ ಮೆಸ್ಸಿ 148 ಪಂದ್ಯಗಳೊಂದಿಗೆ ಅರ್ಜೆಂಟೀನಾ ಪರ 75 ಅಂತಾರಾಷ್ಟ್ರೀಯ ಗೋಲ್‌ಗಳನ್ನು ಬಾರಿಸಿದಂತಾಗಿದೆ. ಇದೇ ಪಂದ್ಯದಲ್ಲಿ ಮೆಸ್ಸಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅರ್ಜೆಂಟೀನಾ ಪರ ಅತೀ ಹೆಚ್ಚು ಪಂದ್ಯ (148 ಪಂದ್ಯ)ಗಳನ್ನು ಆಡಿದ ದಾಖಲೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿರುವ ಸುನಿಲ್ ಛೆಟ್ರಿ ಭಾರತ ಪರ 118 ಪಂದ್ಯಗಳಲ್ಲಿ 74 ಅಂದರೆ ಮೆಸ್ಸಿಗಿಂತ ಒಂದು ಕಡಿಮೆ ಗೋಲ್ ಬಾರಿಸಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಇರಾನ್‌ನ ಅಲಿ ಡೇಯಿ (109 ಗೋಲ್), ಪೋರ್ಚುಗಲ್‌ನ ಕ್ರಿಸ್ಚಿಯಾನೊ ರೊನಾಲ್ಡೋ (109) ಮತ್ತು ಮಲೇಷ್ಯಾದ ಮೊಕ್ತಾರ್ ದಹರಿ (89) ಆರಂಭಿಕ ಮೂರು ಸ್ಥಾನಗಳಲ್ಲಿದ್ದಾರೆ.

Story first published: Tuesday, June 29, 2021, 17:47 [IST]
Other articles published on Jun 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X