ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಸ್ಥಿರ ಪ್ರದರ್ಶನವೇ ಬೆಂಗಳೂರು ಎಫ್ ಸಿ ಮಂತ್ರ: ಸುನಿಲ್ ಛೆಟ್ರಿ

ಬೆಂಗಳೂರು ಎಫ್ ಸಿ ಹಾಗೂ ಯಶಸ್ಸು ಒಂದೇ ಬೋಗಿಯಲ್ಲಿ ಪ್ರಯಾಣಿಸುತ್ತಿವೆ. 2013ರಲ್ಲಿ ಆರಂಭ ಆದಾಗಿನಿಂದ ಬೆಂಗಳೂರು ಎಫ್ ಸಿ ಪ್ರತೀ ಋತುವಿನಲ್ಲೂ ಒಂದೊಂದು ಟ್ರೋಫಿ ಗೆದ್ದಿದೆ. ಅಲ್ಲದೆ ದೇಶೀಯ ಫುಟ್ಬಾಲ್ ನಲ್ಲಿ ಹೋರಾಟ ನೀಡಿದ ಪ್ರತಿಯೊಂದು ಟ್ರೋಫಿಯನ್ನು ಗೆದ್ದುಕೊಂಡಿತು.

ಎರಡು ವರ್ಷಗಳ ಹಿಂದೆ ಇಂಡಿಯನ್ ಸೂಪರ್ ಲೀಗ್ ಗೆ ಬಂದಾಗಿನಿಂದ ಬೆಂಗಳೂರು, ಆಟದ ಗುಣಮಟ್ಟದಲ್ಲಿ ಶ್ರೇಷ್ಠ ದರ್ಜೆಯನ್ನು ಕಾಯ್ದುಕೊಂಡಿದೆ. ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿ ಪ್ರಶಸ್ತಿ ಗೆದ್ದ ಮೊದಲ ಹಾಗೂ ಏಕೈಕ ತಂಡ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ. ಕಳೆದ ವರ್ಷ ಗೋವಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ ಈ ಸಾಧನೆ ಮಾಡಿತ್ತು.

ಚಾಂಪಿಯನ್ಷಿಪ್ ನ ಇತಿಹಾಸದಲ್ಲಿ ಯಾವುದೇ ತಂಡ ಸತತ ಎರಡನೇ ಬಾರಿಗೆ ಪ್ರಶಸ್ತಿಯನ್ನು ಕಾಯ್ದುಕೊಂಡಿಲ್ಲ. ಎಟಿಕೆ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳು ಈ ಪ್ರಯತ್ನದಲ್ಲಿ ವಿಫಲವಾಗಿವೆ. ಆದರೆ ಕಾರ್ಲ್ಸ್ ಕ್ವಾಡ್ರಟ್ ಪಡೆಗೆ ಅಸಾಧ್ಯವೆಂದು ಸವಾಲೊಡ್ಡುವವರು ಇದ್ದರೆಂದು ಹೇಳಲಾಗದು, ಏಕೆಂದರೆ ಈ ತಂಡ ಇದುವರೆಗೂ ಅಸಾಧ್ಯವಾದುದನ್ನೇ ಸಾಧಿಸಿದೆ.

ಪ್ರತಿ ಪಂದ್ಯ ಗೆಲ್ಲಬೇಕೆಂಬುದು ನಮ್ಮ ಗುರಿ

ಪ್ರತಿ ಪಂದ್ಯ ಗೆಲ್ಲಬೇಕೆಂಬುದು ನಮ್ಮ ಗುರಿ

"ನಾವು ಪಾಲ್ಗೊಳ್ಳುತ್ತಿರುವ ಪ್ರತಿಯೊಂದು ಸ್ಪರ್ಧೆಯಲ್ಲಿ ಗೆಲ್ಲಬೇಕುಂಬುದು ನಮ್ಮ ಹಂಬಲ, ಈಗ ಐಎಸ್ ಎಲ್ ಪ್ರಶಸ್ತಿಯನ್ನು ಕಾಯ್ದುಕೊಳ್ಳಬೇಕಾಗಿದೆ. ಈ ಋತುವಿನಲ್ಲಿ ಇದು ಕಠಿಣವಾಗಲಿದೆ ಎಂಬುದೂ ಗೊತ್ತಿದೆ. ಪ್ರಮುಖವಾಗಿ ನಾವೀಗ ಏಷ್ಯಾ ಹಂತದ ಸ್ಪರ್ಧೆಗೆ ಆಗಮಿಸಿದ್ದೇವೆ, ಉತ್ತಮ ರೀತಿಯಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆಲ್ಲಬಲ್ಲೆವು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಬೇಕಾಗಿದೆ. ಉತ್ತಮ ಸ್ಪರ್ಧೆ ನೀಡಬಲ್ಲೆವು, ಪ್ರಶಸ್ತಿಯನ್ನು ಕಾಯ್ದುಕೊಳ್ಳಲು ಯಾವುದೇ ಸವಾಲಿಗೂ ಸಜ್ಜಾಗಿದ್ದೇವೆ," ಎಂದು ನಾಯಕ ಸುನಿಲ್ ಛೆಟ್ರಿ ಹೇಳಿದ್ದಾರೆ.

ಬೆಂಗಳೂರು ಈ ಬಾರಿ ಮತ್ತಷ್ಟು ಬಲಿಷ್ಠವಾಗಿದೆ

ಬೆಂಗಳೂರು ಈ ಬಾರಿ ಮತ್ತಷ್ಟು ಬಲಿಷ್ಠವಾಗಿದೆ

ಭಾರತದ ಅಂತಾರಾಷ್ಟ್ರೀಯ ಆಟಗಾರ ಆಶಿಕ್ ಕುರುನಿಯನ್, ಚೆನ್ನೈಯಿನ್ ಎಫ್ ಸಿ ತಂಡದ ಮಿಡ್ ಫೀಲ್ಡರ್ ರಫಾಯೆಲ್ ಅಗಸ್ಟೊ ಹಾಗೂ ಸ್ಪೇನ್ ನ ಮ್ಯಾನುಯೆಲ್ ಒನವು ಅವರರಿಂದ ಕೂಡಿರುವ ಬೆಂಗಳೂರು ಈ ಬಾರಿ ಮತ್ತಷ್ಟು ಬಲಿಷ್ಠವಾಗಿದೆ. ತಂಡದ ಸ್ಟಾರ್ ಆಟಗಾರ ಛೆಟ್ರಿ ಕ್ಲಬ್ ಹಾಗೂ ದೇಶಕ್ಕಾಗಿ ಒಂದೇ ರೀತಿಯ ಪ್ರದರ್ಶನ ತೋರುತ್ತಿದ್ದು ಬೆಂಗಳೂರಿನ ಯಶಸ್ಸಿನ ಕತೆ ಮೊದಲಿನಂತೆ ಇರುತ್ತದೆ ಎಂದರೆ ತಪ್ಪಾಗಲಾರದು.

2013ರಲ್ಲಿ ಕ್ಲಬ್ ಗೆ ಮೊದಲ ಬಾರಿ ಸಹಿ

2013ರಲ್ಲಿ ಕ್ಲಬ್ ಗೆ ಮೊದಲ ಬಾರಿ ಸಹಿ

''2013ರಲ್ಲಿ ಕ್ಲಬ್ ಗೆ ಮೊದಲ ಬಾರಿ ಸಹಿ ಮಾಡಿದಾಗ , ಪ್ರಶಸ್ತಿಗಳನ್ನು ಗೆಲ್ಲುವ ಸಲುವಾಗಿ ಪ್ರತಿಯೊಂದನ್ನು ನಾವು ಚರ್ಚಿಸಿ ತಂಡವನ್ನು ಮುನ್ನಡೆಸುತ್ತಿದ್ದೆ. ಆರು ತಿಂಗಳಾಯಿತು ಯಾವುದೇ ಬದಲಾವಣೆ ಆಗಲಿಲ್ಲ, ಬೇರೇನೇ ಇದ್ದರೂ ಆ ಪಾತ್ರ ಹೆಚ್ಚು ಅರ್ಥಪೂರ್ಣವಾಗಿ ಗಮನಸೆಳೆದಿದೆ, '' ತಾನು ಗಳಿಸಿದ ಗೋಲುಗಳು, ಪ್ರವೃತ್ತಿ ಹಾಗೂ ನಾಯಕತ್ವದ ಗುಣಗಳಿಂದ ಕ್ಲಬ್ ಹಾಗೂ ದೇಶದ ಪರ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಆಟಗಾರನೆನಿಸಿರುವ ಛೆಟ್ರಿ ಹೇಳಿದರು.

ಕಪ್ ಮತ್ತು ತುಟಿಯ ನಡುವೆ ಸಾಕಷ್ಟು ಬೀಳುಗಳು ಇರುತ್ತವೆ

ಕಪ್ ಮತ್ತು ತುಟಿಯ ನಡುವೆ ಸಾಕಷ್ಟು ಬೀಳುಗಳು ಇರುತ್ತವೆ

ಕಪ್ ಮತ್ತು ತುಟಿಯ ನಡುವೆ ಸಾಕಷ್ಟು ಬೀಳುಗಳು ಇರುತ್ತವೆ ಎಂದು ಯಾರಿಗೂ ಎಚ್ಚರಿಸಬೇಕಾದ ಅಗತ್ಯ ಇರುವುದಿಲ್ಲ.2017-18ರ ಋತುವಿನಲ್ಲಿ ಮನೆಯಂಗಣವಾಗಿರುವ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಚೆನ್ನೈಯಿನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋತ ಬೆಂಗಳೂರು ಬರಿಗೈಯಲ್ಲಿ ಮನೆ ಸೇರಿತ್ತು. ಇಂಥ ಸ್ಥಿತಿಯ ಬಗ್ಗೆಯೂ ಬೆಂಗಳೂರಿಗೆ ಚೆನ್ನಾಗಿ ಗೊತ್ತಿದೆ. ಚಾಂಪಿಯನ್ ತಂಡಗಳಾದ ಎಟಿಕೆ ಹಾಗೂ ಚೆನ್ನೈಯಿನ್ ವೈಫಲ್ಯಕ್ಕೆ ಕಾರಣವೇನೆಂಬುದನ್ನು ಕಂಡುಕೊಂಡು ಎಚ್ಚರಿಕೆಯಿಂದ ಮುನ್ನಡೆದರೆ ಛೆಟ್ರಿ ಹಾಗೂ ಅವರ ಪಡೆ ಮತ್ತೆ ಯಶಸ್ಸನ್ನು ಕಾಣಲಿದೆ.

Story first published: Friday, October 11, 2019, 17:36 [IST]
Other articles published on Oct 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X