ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅಟ್ಲೆಟಿಕೊ ಮ್ಯಾಡ್ರಿಡ್ ಸ್ಟಾರ್ ಫುಟ್ಬಾಲರ್ ಡಿಯಾಗೋ ಕೋಸ್ಟಾಗೆ ಭಾರೀ ದಂಡ

Atletico Madrid’s Diego Costa Fined for Tax Fraud Case

ಮ್ಯಾಡ್ರಿಡ್, ಜೂನ್ 6: ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಅಟ್ಲೆಟಿಕೊ ಮ್ಯಾಡ್ರಿಡ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಡಿಯಾಗೋ ಕೋಸ್ಟಾಗೆ ತೆರಿಗೆ ವಂಚನೆ ಆರೋಪದಲ್ಲಿ ಭಾರೀ ದಂಡ ಮತ್ತು ಆರು ತಿಂಗಳ ಜೈಲು ಶಿಕ್ಷೆ ವಿಧಿಲಾಗಿದೆ. ಆದರೆ ಜೈಲು ಶಿಕ್ಷೆಯಿಂದ ಕೋಸ್ಟಾ ತಪ್ಪಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆ

ತೆರಿಗೆ ವಂಚನೆ ಮಾಡಿದ್ದಕ್ಕಾಗಿ ಡಿಯಾಗೋ ಕೋಸ್ಟಾಗೆ 543,208 ಯೂರೋಸ್ (ಸುಮಾರು 4,63,35,356 ರೂ.) ದಂಡ ಮತ್ತು 6 ತಿಂಗಳ ಜೈಲು ಶಿಕ್ಷೆ ವಿಧಿಲಾಗಿತ್ತು. ಆದರೆ ಸ್ಪ್ಯಾನಿಷ್ ನಿಯಮದ ಪ್ರಕಾರ ಮೊದಲ ಬಾರಿಗೆ ತಪ್ಪೆಸಗಿ 2 ವರ್ಷಗಳಿಗೆ ಕಡಿಮೆ ಜೈಲು ಶಿಕ್ಷೆ ವಿಧಿಲಾಗುವ ವ್ಯಕ್ತಿ ಹೆಚ್ಚುವರಿ ದಂಡ ಪಾವತಿಸಿ ಜೈಲು ಶಿಕ್ಷೆ ತಪ್ಪಿಸಿಕೊಳ್ಳಲು ಅವಕಾಶವಿದ್ದರಿಂದ 31ರ ಹರೆಯದ ಡಿಯಾಗೋ ಈ ಅವಕಾಶ ಬಳಸಿಕೊಂಡಿದ್ದಾರೆ.

ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!ಆಸೀಸ್-ಭಾರತ ಸೇರಿಸಿ ಫಿಂಚ್ ಪ್ರಕಟಿಸಿದ ತಂಡದಲ್ಲಿ ಸಚಿನ್, ರೋಹಿತ್ ಇಲ್ಲ!

ಮಾಸ್ಕ್ ಧರಿಸಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಕೋಸ್ಟಾ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಂಡಿದ್ದಕ್ಕಾಗಿ ವಿಧಿಸಲಾದ ಶಿಕ್ಷೆ ಒಪ್ಪಿಕೊಂಡಿದ್ದರು ಎಂದು ಸ್ಪೇನ್‌ನ ಎಲ್ ಮುಂಡೋ ವರದಿ ಮಾಡಿತ್ತು.

ಫುಟ್ಬಾಲ್: 4 ದಶಕದ ಬಳಿಕ ಭಾರತದಲ್ಲಿ ನಡೆಯಲಿದೆ ಮಹಿಳಾ ಏಷ್ಯನ್ ಕಪ್ಫುಟ್ಬಾಲ್: 4 ದಶಕದ ಬಳಿಕ ಭಾರತದಲ್ಲಿ ನಡೆಯಲಿದೆ ಮಹಿಳಾ ಏಷ್ಯನ್ ಕಪ್

ವರದಿಯ ಪ್ರಕಾರ, ಅಟ್ಲೆಟಿಕ್ ಸ್ಟ್ರೈಕರ್ ಡಿಯಾಗೋ ಕೋಸ್ಟಾ ದಂಡ ಕಟ್ಟುವಂತೆ ಲಾ ಲಿಗಾ ತಂಡ ಅಟ್ಲೆಟಿಕೊ ಮ್ಯಾಡ್ರಿಡ್ ಅನ್ನು ಕೋರಿಕೊಂಡಿದ್ದರು. ಆದರೆ ದಂಡ ಭರಿಸಲು ನಿರಾಕರಿಸಿದ ಅಟ್ಲೆಟಿಕೊ, ದಂಡ ತಾನೇ ಕಟ್ಟುವ ಬದಲಾಗಿ, ಕೋಸ್ಟಾ ವೇತನಕ್ಕೆ ಮುಂಗಡ ಸಾಲ ನೀಡಿತು. ಇದರಿಂದ ಕೋಸ್ಟಾಗೆ ದಂಡ ಕಟ್ಟಲು ಸಾಧ್ಯವಾಗಿದೆ ಎನ್ನಲಾಗಿದೆ.

Story first published: Saturday, June 6, 2020, 10:13 [IST]
Other articles published on Jun 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X