ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬೆಂಗಳೂರಿಗೆ ಬಂದ ಬಾರ್ಸಿಲೋನಾ ಅಕಾಡೆಮಿ ಸ್ಕೂಲ್ಸ್

 Barca Academy to come up with 2 Football school in Bengaluru.

ಬೆಂಗಳೂರು, ಅಕ್ಟೋಬರ್ 05: ದೇಶದಲ್ಲಿ ಅತ್ಯಂತ ಜನಪ್ರಿಯವಾಗಿರುವ ಬಾರ್ಕ (ಬಿಎಆರ್ ಸಿಎ) ಅಕಾಡೆಮಿ ಬೆಂಗಳೂರು ಜತೆಗಿನ ಬಾಂಧ್ಯವವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಬೆಂಗಳೂರಿನ ಎರಡು ಕಡೆ ಫುಟ್‍ಬಾಲ್ ತರಬೇತಿ ಶಾಲೆಗಳನ್ನು ಆರಂಭಿಸಲು ಬಾರ್ಕ ಸಂಸ್ಥೆ ನಿರ್ಧರಿಸಿದೆ.

ಯಲಹಂಕ ಸಮೀಪದ ಸಹಕಾರ ನಗರದಲ್ಲಿ ಟ್ರಿಯೋ ವರ್ಲ್ಡ್ ಅಕಾಡೆಮಿ ಹಾಗೂ ವೈಟ್‍ಫೀಲ್ಡ್ ಬಳಿ ಎಕ್ಯುಮೆನಿಕಲ್ ಕ್ರಿಶ್ಚಿಯನ್ ಕೇಂದ್ರದಲ್ಲಿ ಟ್ರೈನಿಂಗ್ ಕೇಂದ್ರಗಳನ್ನು ಶುರು ಮಾಡಲು ತೀರ್ಮಾನಿಸಿ, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದೆ.

2018ರ ನ.19ರಂದು ಎರಡೂ ಕೇಂದ್ರಗಳಿಗೆ ಅಧಿಕೃತವಾಗಿ ಚಾಲನೆ ನೀಡಲು ಬಾರ್ಕ ಅಕಾಡೆಮಿ ದಿನಾಂಕ ನಿಗದಿಪಡಿಸಿದೆ. ಎರಡೂ ಕೇಂದ್ರಗಳಿಂದ 1 ಸಾವಿರ ಹೊಸ ಯುವಕರಿಗೆ ಫುಟ್‍ಬಾಲ್ ತರಬೇತಿ ನೀಡಲು ತೀರ್ಮಾನಿಸಿದೆ.

ಬಾರ್ಸ ಅಕಾಡೆಮಿಯ ತಾಂತ್ರಿಕ ನಿರ್ದೇಶಕ ಜೊರ್ಡಿ ಎಸ್ಕೋಬಾರ್ ಬೆಂಗಳೂರು ಕೇಂದ್ರಗಳ ನಿರ್ವಹಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಒಟ್ಟು 12 ಫುಟ್‍ಬಾಲ್ ಕೋಚ್‍ಗಳು ತರಬೇತಿ ನೀಡಲಿದ್ದಾರೆ. ಒಂದು ವರ್ಷದ ಕಾಲ ಹೊಸ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ವಾರಕ್ಕೆ 3 ದಿನ ಮಾತ್ರ ಟ್ರೈನಿಂಗ್ ನೀಡಲಾಗುತ್ತದೆ.

ಏಷಿಯಾ ಪೆಸಿಫಿಕ್ ಕಪ್ ಟೂರ್ನಿ ಆಯೋಜನೆ

ಏಷಿಯಾ ಪೆಸಿಫಿಕ್ ಕಪ್ ಟೂರ್ನಿ ಆಯೋಜನೆ

ಬಾರ್ಸ ಅಕಾಡೆಮಿ ಏಷಿಯಾ ಪೆಸಿಫಿಕ್ ಕಪ್ ಟೂರ್ನಿ ಆಯೋಜನೆ ಸಿದ್ಧತೆ ಸಂದರ್ಭದಲ್ಲೆ ಬೆಂಗಳೂರಲ್ಲೆ ಈ ಎರಡೂ ಕೇಂದ್ರಗಳ ಉದ್ಘಾನೆಯಾಗಲಿವೆ. ಪೆಸಿಫಿಕ್ ಕಪ್ ಟೂರ್ನಿಗೆ ಗುರ್‍ಗಾಂವ್ ಆತಿಥ್ಯ ವಹಿಸುತ್ತಿದ್ದು, ಈ ವಿಚಾರವನ್ನು ಅರ್ಜೆಂಟಿನಾದ ಮಾಜಿ ವಿಶ್ವಕಪ್ ಆಟಗಾರ ಜೇವಿಯರ್ ಸವಿಯೋಲಾ ಅವರು ಘೋಷಣೆ ಮಾಡಲಿದ್ದಾರೆ.

ಬಾರ್ಸ ಅಕಾಡೆಮಿ, ಮುಖ್ಯಸ್ಥ ಆಂಥೋನಿಯೊ ಕ್ಲವರಿಯಾ ಮಾತನಾಡಿ, "ಭಾರತೀಯರಿಗೆ ಕ್ರೀಡೆಯ ಜತೆಗೆ ವಿಶೇಷ ಬಾಂಧವ್ಯವಿರುತ್ತದೆ. ಅದರಲ್ಲೂ ಫುಟ್‍ಬಾಲ್ ಆಟಕ್ಕೆ ಬೇರೆಲ್ಲ ಆಟಗಳಿಗಿಂಥ ಕೊಂಚ ಹೆಚ್ಚೇ ಆಸಕ್ತಿಕರವಾಗಿದೆ. ಯುವಪೀಳಿಗೆಗೆ ಫುಟ್‍ಬಾಲ್ ಅಚ್ಚುಮೆಚ್ಚಿನ ಆಟವಾಗಿದೆ. ಕಳೆದ 7 ವರ್ಷಗಳಿಂದ ಬಾರ್ಸ ಅಕಾಡೆಮಿ ಹೊಸ ಫುಟ್‍ಬಾಲ್ ಆಟಗಾರರನ್ನು ಸೃಷ್ಟಿಸುವಲ್ಲಿ ಪ್ರಮುಖ ವಹಿಸುತ್ತ ಮುಂದೆ ಬಂದಿದೆ" ಎಂದು ಹೇಳಿದರು

ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆ ಸಹಯೋಗ

ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆ ಸಹಯೋಗ

ಭಾರತದಲ್ಲಿ 2011ರಲ್ಲಿ (ನವದೆಹಲಿಯಲ್ಲಿ) ಮೊದಲ ಫುಟ್‍ಬಾಲ್ ತರಬೇತಿಯನ್ನು ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ ಪ್ರಮುಖ ಯುರೋಪ್ ಕ್ಲಬ್‍ಗಳಲ್ಲಿ ಎಫ್‍ಸಿ ಬಾರ್ಸಿಲೋನಾ ಕೂಡ ಒಂದು. ಆ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಅದಾದ ಬಳಿಕ ದೇಶದ ಪ್ರಮುಖ ನಗರದಲ್ಲಿ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಇದಾದ ಬಳಿಕ ಎಫ್‍ಸಿಬಿ ಹಾಗೂ ಎಫ್‍ಸಿ ಸಹಭಾಗಿತ್ವದಲ್ಲಿ ಮೊದಲ ಬಾರ್ಸ ಅಕಾಡೆಮಿಯಿಂದ ತರಬೇತಿ ಕೇಂದ್ರ ಶುರು ಮಾಡಲಾಗಿತ್ತು.

ಬಾರ್ಸ ಅಕಾಡೆಮಿಯಲ್ಲಿ ತರಬೇತಿ ಪಡೆದ ಅದೆಷ್ಟೊ ಫುಟ್‍ಬಾಲ್ ಆಟಗಾರರು ಬಾರ್ಸಿಲೋನಾಗೆ ಪ್ರಯಾಣ ಬೆಳೆಸುವ ಮೂಲಕ ಅಂತಾರಾಷ್ಟ್ರೀಯಮಟ್ಟದ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದಾರೆ. ಈವರೆಗೆ 25 ಸಾವಿರಕ್ಕೂ ಹೆಚ್ಚು ಆಟಗಾರರಿಗೆ ತರಬೇತಿ ಕೊಟ್ಟು ತಯಾರು ಮಾಡುವ ಮುಖಾಂತರ ಬಾರ್ಕ ಅಕಾಡೆಮಿಯ ಫುಟಬಾಲ್ ಕ್ಷೇತ್ರಕ್ಕೆ ಕೊಡುಗೆ ನೀಡಿದೆ.

ನಿರ್ದೇಶಕಿ ಅನುಪಮಾ ಜೈನ್ ಮಾತನಾಡಿ

ನಿರ್ದೇಶಕಿ ಅನುಪಮಾ ಜೈನ್ ಮಾತನಾಡಿ

ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆಯ ನಿರ್ದೇಶಕಿ ಅನುಪಮಾ ಜೈನ್ ಮಾತನಾಡಿ, "2011ರಲ್ಲಿ ಎಫ್‍ಸಿಬಿ ಹಾಗೂ ಎಫ್‍ಸಿ ಜಂಟಿಯಾಗಿ ಭಾರತದಲ್ಲಿ ಬಾರ್ಸ ಅಕಾಡೆಮಿ ಸ್ಥಾಪನೆ ಮಾಡಲಾಯಿತು. ಫುಟ್‍ಬಾಲ್ ಆಟದ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಾರ್ಕ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಹಲವು ತರಬೇತಿ ಶಿಬಿರಗಳನ್ನು ನಡೆಸುತ್ತಿದೆ" ಎಂದು ವಿವರಿಸಿದರು.

ಬಾರ್ಸ ಅಕಾಡೆಮಿ ಟ್ರೈನಿಂಗ್ ಕೇಂದ್ರಗಳಲ್ಲಿ ಆಟಗಾರರಿಗೆ ಬರೀ ತರಬೇತಿ ನೀಡಲ್ಲ. ಬದಲಾಗಿ ಸ್ನೇಹ, ಪ್ರೀತಿ, ನಂಬಿಕೆ ಹಾಗೂ ನೈತಿಕ ಮೌಲ್ಯಗಳ ಕುರಿತು ಕಲಿಸಲಾಗುತ್ತದೆ. ತರಬೇತಿ ಪಡೆಯುವ ಆಟಗಾರರ ಆರೋಗ್ಯ, ಫಿಟ್ನೆಸ್, ಪೌಷ್ಟಿಕತೆಯ ಬಗ್ಗೆಯೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಇಂಥ ತರಬೇತಿಯಿಂದ ಮಕ್ಕಳು ಹಾಗೂ ಅವರ ಪಾಲಕರಿಗೆ ಹೆಚ್ಚಿನ ಲಾಭವಿದೆ ಎಂದು ಹೇಳಿದರು.

ಎಫ್‍ಸಿ ಬಾರ್ಸಿಲೋನಾ ಬಗ್ಗೆ

ಎಫ್‍ಸಿ ಬಾರ್ಸಿಲೋನಾ ಬಗ್ಗೆ

ಬಾರ್ಸ ಅಕಾಡೆಮಿ ಹಲವು ಉತ್ತಮ ಆಟಗಾರರನ್ನು ನೀಡುವ ನಿಟ್ಟಿನಲ್ಲಿ ವಿಶ್ವದಲ್ಲೆ ಅತ್ಯುತ್ಯಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮೆಸ್ಸಿ, ಇನಿಯಸ್ಟ ಅಂಥ ಶ್ರೇಷ್ಟ ಆಟಗಾರರನ್ನು ತಯಾರು ಮಾಡಲಾಗುತ್ತಿದೆ.

ಇಂಡಿಯಾ ಯು17 ವರ್ಲ್ಡ್ ಕಪ್, ಹರಿಯಾಣ, ದೆಹಲಿ ಸಬ್ ಜೂನಿಯರ್ ಮತ್ತು ಜೂನಿಯರ್ ಸ್ಟೇಟ್ ತಂಡ ಹಾಗೂ ದೆಹಲಿ ಫುಟ್‍ಬಾಲ್ ಲೀಗ್‍ಗಳಲ್ಲಿ ಬಾರ್ಸ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಆಟಗಾರರು ಭಾಗವಹಿಸುತ್ತಿದ್ದಾರೆ.ಭಾರತದಲ್ಲಿ ಬಾರ್ಸ ಅಕಾಡೆಮಿ ಅತಿದೊಡ್ಡ ತರಬೇತಿ ಸಂಸ್ಥೆಯಾಗಿದೆ. ಎಐಎಫ್‍ಎಫ್ ಸಂಸ್ಥೆ ಕೂಡ ಬಾರ್ಕ ಅಕಾಡೆಮಿ ಉಳಿದೆಲ್ಲ ಅಕಾಡೆಮಿಗಳಿಗಿಂಥ ಅಗ್ರಸ್ಥಾನದಲ್ಲಿದೆ ಎಂದು ಹೇಳಿದೆ.
ಎಫ್‍ಸಿ ಬಾರ್ಸಿಲೋನಾ ಬಗ್ಗೆ

ಎಫ್‍ಸಿ ಬಾರ್ಸಿಲೋನಾ ಬಗ್ಗೆ

ಎಫ್‍ಸಿ ಬಾರ್ಸಿಲೋನಾ ಬಗ್ಗೆ: ಎಫ್‍ಸಿ ಬಾರ್ಸಿಲೋನ 1899ರಲ್ಲಿ ಸ್ಥಾಪನೆಯಾಯಿತು. ಇಂದು ಇಡೀ ವಿಶ್ವದಲ್ಲೆ ಅತ್ಯಂತ ಜನಪ್ರಿಯ ಫುಟ್‍ಬಾಲ್ ಕ್ಲಬ್‍ಗಳ ಸಾಲಿನಲ್ಲಿ ಪ್ರಮುಖ ಸ್ಥಾನದಲ್ಲಿದೆ. ವಿಶ್ವದಾದ್ಯಂತ ಅಭಿಮಾನಿಗಳು ಹಾಗೂ ಕ್ಲಬ್ ಸದಸ್ಯರನ್ನು ಹೊಂದಿದೆ. ಅತ್ಯುತ್ತಮ ಆಟಗಾರರನ್ನು ಫುಟ್‍ಬಾಲ್ ಕ್ಷೇತ್ರಕ್ಕೆ ನೀಡುವ ನಿಟ್ಟಿನಲ್ಲಿ ಈ ಸಂಸ್ಥೆ ನಿರಂತರವಾಗಿ ಕೆಲಸ ಮಾಡುತ್ತಿದೆ.

ಕಾನ್ಸಿಯಂಟ್ ಫುಟ್‍ಬಾಲ್ ಸಂಸ್ಥೆಯು ಫುಟ್ಬಾಲ್ ಟೂರ್ನಿ, ತರಬೇತಿ ಶಿಬಿರ ಹಾಗೂ ಕೋಚಿಂಗ್ ಕೋರ್ಸ್‍ಗಳನ್ನು ಆಯೋಜಿಸುತ್ತಿದೆ. ಹೊಸ ಫುಟ್ಬಾಲ್ ಆಟಗಾರರು ಗುರುತಿಸಿಕೊಳ್ಳಲು ಸಹಕಾರಿಯಾಗುವಂಥ ಪ್ರವಾಸಗಳನ್ನು ಆಯೋಜಿಸುವ ಮೂಲಕ ನೆರವು ನೀಡುತ್ತಿದೆ.

Story first published: Friday, October 5, 2018, 20:55 [IST]
Other articles published on Oct 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X