ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಲಿಯೋನೆಲ್ ಮೆಸ್ಸಿಯಿರುವ ಬಾರ್ಸಿಲೋನಾ ತಂಡದ ಆಟಗಾರನಿಗೆ ಕೊರೊನಾ

Barcelona confirm one positive Coronavirus test

ಬಾರ್ಸಿಲೋನಾ, ಆಗಸ್ಟ್ 12: ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿರುವ ಬಾರ್ಸಿಲೋನಾ ತಂಡದಲ್ಲಿ ಒಬ್ಬ ಆಟಗಾರನಿಗೆ ಕೊರೊನಾವೈರಸ್ ಸೋಂಕಿರುವುದು ಪತ್ತೆಯಾಗಿದೆ. ಲಾ ಲಿಗಾ ಈ ವಿಚಾರವನ್ನು ಬುಧವಾರ (ಆಗಸ್ಟ್ 12) ತಿಳಿಸಿದೆ.

ಐಪಿಎಲ್ 2020: ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಕೋಚ್‌ಗೆ ಕೊರೊನಾ ಸೋಂಕು ದೃಢಐಪಿಎಲ್ 2020: ರಾಜಸ್ಥಾನ ರಾಯಲ್ಸ್ ಫೀಲ್ಡಿಂಗ್ ಕೋಚ್‌ಗೆ ಕೊರೊನಾ ಸೋಂಕು ದೃಢ

ಕೋವಿಡ್-19 ಪಾಸಿಟಿವ್ ಬಂದಿರುವ ಆಟಗಾರ ತನ್ನ ಮನೆಯಲ್ಲಿ ಸ್ವ ಐಸೊಲೇಶನ್‌ನಲ್ಲಿದ್ದಾರೆ. ಈ ಆಟಗಾರ ಸದ್ಯ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್‌ಗಾಗಿ ಲಿಸ್ಬನ್‌ಗೆ ಪ್ರಯಾಣಿಸುತ್ತಿರುವ ಯಾವುದೇ ಆಟಗಾರನನ್ನು ಸಂಪರ್ಕಿಸಿಲ್ಲ ಎಂದು ಬಾರ್ಸಿಲೋನಾ ಮಾಹಿತಿ ನೀಡಿದೆ.

ಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿಐಪಿಎಲ್‌ಗೆ ಪತಂಜಲಿ ಪ್ರಾಯೋಜಕತ್ವ: ತಮಾಷೆಯ ಮೀಮ್ಸ್ ಇಲ್ಲಿವೆ ನೋಡಿ

ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧ ಸೆಣಸಾಡಲಿರುವ ಬಾರ್ಸಿಲೋನಾ ತಂಡದ ಯಾವುದೇ ಆಟಗಾರರು ಸೋಂಕಿತ ಆಟಗಾರನನ್ನು ಸಂಪರ್ಕಿಸಿಲ್ಲವಾದ್ದರಿಂದ ಉದ್ದೇಶಿತ ಸೆಮಿಫೈನಲ್ ಪಂದ್ಯ ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಿಷೇಧ ಪೂರ್ಣಗೊಳಿಸಲಿರುವ ಶಕೀಬ್ ಅಲ್ ಹಸನ್, ಲಂಕಾ ಪ್ರವಾಸಕ್ಕೆ ಲಭ್ಯನಿಷೇಧ ಪೂರ್ಣಗೊಳಿಸಲಿರುವ ಶಕೀಬ್ ಅಲ್ ಹಸನ್, ಲಂಕಾ ಪ್ರವಾಸಕ್ಕೆ ಲಭ್ಯ

'ಸೀಸನ್ ಪ್ರಾರಂಭಿಸಲಿರುವ ಒಂಬತ್ತು ಆಟಗಾರರ ಗುಂಪಿಗೆ ಮಂಗಳವಾರ ಮಧ್ಯಾಹ್ನ ಕೊರೊನಾವೈರಸ್ ಪರೀಕ್ಷೆ ನಡೆಸಲಾಯ್ತು. ಗುಂಪಿನಲ್ಲಿ ಒಬ್ಬರಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ,' ಎಂದು ಬಾರ್ಸಿಲೋನಾ ತಿಳಿಸಿದೆ.

Story first published: Friday, August 21, 2020, 15:13 [IST]
Other articles published on Aug 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X