ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ದಂತಕತೆ ಪೀಲೆ ದಾಖಲೆ ಸರಿಗಟ್ಟಿದ ಲಿಯೋನೆಲ್ ಮೆಸ್ಸಿ

Barcelona star Lionel Messi overtakes Peles goal record

ಬಾರ್ಸಿಲೋನಾ: ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಲಿಯೋನೆಲ್ ಮೆಸ್ಸಿ ಅವರು ಮತ್ತೊಬ್ಬ ಫುಟ್ಬಾಲ್ ದಿಗ್ಗಜ ಬ್ರೆಝಿಲ್‌ನ ಪೀಲೆ ಹೆಸರಿನಲ್ಲಿದ್ದ ಗೋಲ್‌ಗಳ ದಾಖಲೆ ಸರಿಗಟ್ಟಿದ್ದಾರೆ. ಬಾರ್ಸಿಲೋನಾ ಕ್ಲಬ್‌ ಪರ 644 ಗೋಲ್‌ಗಳನ್ನು ಬಾರಿಸುವ ಮೂಲಕ ಮೆಸ್ಸಿ ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!ದ್ವಿತೀಯ ಟೆಸ್ಟ್‌ಗಾಗಿ ಭಾರತ ತಂಡಕ್ಕೆ ಪ್ರಮುಖ 4 ಆಟಗಾರರು ಸೇರ್ಪಡೆ!

ಮಂಗಳವಾರ (ಡಿಸೆಂಬರ್ 22) ನಡೆದ ಲಾ ಲಿಗಾ ಪಂದ್ಯದಲ್ಲಿ ವಲ್ಲಾಡೋಲಿಡ್ ವಿರುದ್ಧ ಬಾರ್ಸಿಲೋನಾ 3-0ಯ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಮೆಸ್ಸಿ 65ನೇ ನಿಮಿಷದಲ್ಲಿ ಗೋಲ್ ಬಾರಿಸಿದ್ದರು. ಈ ಗೋಲ್‌ನೊಂದಿಗೆ ಮೆಸ್ಸಿ ದಾಖಲೆ ನಿರ್ಮಿಸಿದಂತಾಗಿದೆ.

ಪಂದ್ಯದ ಬಳಿಕ ಮೆಸ್ಸಿ ಇನ್‌ಸ್ಟಾಗ್ರಾಮ್‌ ಪೋಸ್ಟ್ ಮೂಲಕ ಖುಷಿ ಹಂಚಿಕೊಂಡಿದ್ದಾರೆ. 'ನಾನು ಫುಟ್ಬಾಲ್ ಆಡಲಾರಂಭಿಸಿದಾಗ ನಾನು ಯಾವೊಂದೂ ದಾಖಲೆ ಮಾಡಬಲ್ಲದೆ ಅಂದುಕೊಂಡಿರಲಿಲ್ಲ. ಹಾಗಂತ ಇವತ್ತು ನಾನು ಸಾಧಿಸಿದ್ದೂ ದೊಡ್ಡದೇನಲ್ಲ, ಇದೂ ಕಡಿಮೆಯೆ,' ಎಂದು ಮೆಸ್ಸಿ ಇನ್‌ಸ್ಟಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ2021ರ ಟಿ20ಐ ವಿಶ್ವಕಪ್‌ಗೆ ತಾಣಗಳ ಘೋಷಿಸಿದ ಬಿಸಿಸಿಐ

ಶನಿವಾರ (ಡಿಸೆಂಬರ್ 19) ನಡೆದ ಪಂದ್ಯದಲ್ಲಿ ಬಾರ್ಸಿಲೋನಾ ತಂಡ ವೆಲೆನ್ಸಿಯಾ ವಿರುದ್ಧ 2-2ರ ಡ್ರಾ ಸಾಧಿಸಿದ್ದಾಗಲೇ ಮೆಸ್ಸಿ, ಪೀಲೆ ಹಸರಿನಲ್ಲಿದ್ದ ದಾಖಲೆಯನ್ನು ಮೆಸ್ಸಿ ಸರಿದೂಗಿಸಿದ್ದರು. 33ರ ಹರೆಯದ ಮೆಸ್ಸಿ ಬಾರ್ಸಿಲೋನಾ ಪರ 749 ಪಂದ್ಯಗಳಲ್ಲಿ 644 ಗೋಲ್ ಬಾರಿಸಿದ್ದಾರೆ. 1956ರಿಂದ 1974ರ ವರೆಗೆ ಸ್ಯಾಂಟೋಸ್ ಪರ ಆಡಿದ್ದ ಪೀಲೆ 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ದಾಖಲೆ ನಿರ್ಮಿಸಿದ್ದರು.

Story first published: Wednesday, December 23, 2020, 14:13 [IST]
Other articles published on Dec 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X