ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಅತೀ ಸುಲಭದ ಗೋಲ್ ಮಿಸ್ ಮಾಡಿದ ಫುಟ್ಬಾಲಿಗ: ವೈರಲ್ ವಿಡಿಯೋ

Belgian football player Aster Vranckx involved in an incredible open-goal miss

ಬ್ರಸೆಲ್ಸ್: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಗಾದೆಯಿದೆಯಲ್ಲ? ಅಂಥದ್ದೇ ದೃಶ್ಯವೊಂದು ಫುಟ್ಬಾಲ್ ಟೂರ್ನಿ ವೇಳೆ ಕಾಣ ಸಿಕ್ಕಿದೆ. ಗೋಲ್ ಬಾರಿಸಲು ಇದ್ದ ಅತೀ ಸುಲಭದ ಅವಕಾಶವನ್ನು ಆಟಗಾರರೊಬ್ಬ ಕೈಚೆಲ್ಲಿದ್ದಾರೆ. ಬೆಲ್ಜಿಯಂನಲ್ಲಿ ನಡೆದ ಬೆಲ್ಜಿಯನ್ ಪ್ರೋ ಲೀಗ್‌ನಲ್ಲಿ ಈ ಅಪರೂಪದ ಕ್ಷಣ ಸೆರೆಯಾಗಿದೆ.

ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್

ಫುಟ್ಬಾಲ್‌ನಲ್ಲಿ ಅದ್ಭುತ ರೀತಿಯಲ್ಲಿ ಗೋಲ್ ಬಾರಿಸಿದ್ದು ಹೇಗೆ ಒಂದು ದಾಖಲೆಯಾಗಿ ಉಳಿಯುತ್ತದೆಯೇ ಹಾಗೇ ಕೆಟ್ಟ ರೀತಿಯಲ್ಲಿ ಗೋಲ್ ಮಿಸ್ ಮಾಡಿದ್ದೂ ಕೆಟ್ಟ ದಾಖಲೆ ಪಟ್ಟಿ ಸೇರುತ್ತದೆ. ಮೆಕೆಲೆನ್ ಎಫ್‌ಸಿ ಆಟಗಾರ ಆಸ್ಟರ್ ವ್ರಾಂಕ್ಸ್ ಇಂಥದ್ದೊಂದು ಕೆಟ್ಟ ದಾಖಲೆಗೆ ಕಾರಣರಾಗಿದ್ದಾರೆ.

51ರ ಹರೆಯದಲ್ಲೂ ಅದ್ಭುತ ಕ್ಯಾಚ್‌ ಪಡೆದು ಬೆರಗು ಮೂಡಿಸಿದ ರೋಡ್ಸ್: ವಿಡಿಯೋ51ರ ಹರೆಯದಲ್ಲೂ ಅದ್ಭುತ ಕ್ಯಾಚ್‌ ಪಡೆದು ಬೆರಗು ಮೂಡಿಸಿದ ರೋಡ್ಸ್: ವಿಡಿಯೋ

ಈ ಪಂದ್ಯ ನಡೆದಿದ್ದು ಸೆಪ್ಟೆಂಬರ್ 12ರಂದು. ಆದರೆ ಈಗಲೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆವತ್ತಿನ ಪಂದ್ಯದಲ್ಲಿ ಮೆಕೆಲೆನ್ ಮತ್ತು ಕೆ.ವಿ. ಓಸ್ಟೆಂಡೆ ತಂಡಗಳು ಮುಖಾಮುಖಿಯಾಗಿದ್ದವು. ಸುಮಾರು 67 ನಿಮಿಷಗಳು ಕಳೆದರೂ ಎರಡೂ ತಂಡಗಳಿಂದ ಗೋಲ್ ದಾಖಲಾಗಿರಲಿಲ್ಲ.

'ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಐಪಿಎಲ್ ಆರಂಭದಲ್ಲಿ ಆಡೋ ಖಾತ್ರಿಯಿಲ್ಲ''ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಐಪಿಎಲ್ ಆರಂಭದಲ್ಲಿ ಆಡೋ ಖಾತ್ರಿಯಿಲ್ಲ'

68ನೇ ನಿಮಿದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಡಲು 17ರ ಹರೆಯದ ವ್ರಾಂಕ್ಸ್‌ಗೆ ಅಪೂರ್ವ ಅವಕಾಶವಿತ್ತು. ವ್ರಾಂಕ್ಸ್‌ ತಂಡದ ಆಟಗಾರ ಎದುರಾಳಿ ಗೋಲ್ ಕೀಪರ್ ಅನ್ನು ದೂರದಲ್ಲಿರಿಸುವಲ್ಲಿ ಯಶಸ್ವಿಯಾಗಿದ್ದರು. ಚೆಂಡು ವ್ರಾಂಕ್ಸ್ ಬಳಿಗೆ ಬರುವಾಗ ಗೋಲ್ ಪೋಸ್ಟ್ ಬಳಿ ಪ್ರತಿರೋಧಕ್ಕೆ ಯಾರೂ ಇರಲಿಲ್ಲ.

ಚೆಂಡು ಕನೆಕ್ಟ್ ಮಾಡಿ ಗೋಲ್ ಬಾರಿಸಲು ವ್ರಾಂಕ್ಸ್‌ಗೆ ತುಂಬಾ ಸುಲಭವಿತ್ತು. ಆದರೂ ಒಂದೆರಡು ಮೀಟರ್ ದೂರದಿಂದ ಗೋಲ್ ಬಾರಿಸುವ ಅವಕಾಶವನ್ನು ವ್ರಾಂಕ್ಸ್ ತಪ್ಪಿಸಿಕೊಂಡರು. ಬಹುಶಃ ಗೋಲ್ ಬಾರಿಸುವ ತರಾತುರಿಯಲ್ಲಿದ್ದ ವ್ರಾಂಕ್ಸ್ ಎಡವಿದರು ಅನ್ನಿಸುತ್ತೆ. ಪಂದ್ಯದಲ್ಲಿ 1-0ಯಿಂದ ಕೆ.ವಿ. ಓಸ್ಟೆಂಡೆ ಜಯ ಗಳಿಸಿತು.

Story first published: Tuesday, September 15, 2020, 9:45 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X