ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ನೂತನ ಫುಟ್ಬಾಲ್‌ ಶಾಲೆ ಆರಂಭಿಸಲಿರುವ ಬೆಂಗಳೂರು ಎಫ್‌ಸಿ!

Bengaluru FC to start football school in Ahmedabad

ಬೆಂಗಳೂರು, ಜೂನ್‌ 03: ಹಾಲಿ ಇಂಡಿಯನ್‌ ಸೂಪರ್‌ ಲೀಗ್‌ ಮತ್ತು ಮಾಜಿ ಐ-ಲೀಗ್‌ ಚಾಂಪಿಯನ್ಸ್‌ ಬೆಂಗಳೂರು ಎಫ್‌ಸಿ ತಂಡ ಅಹಮದಾಬಾದ್‌ನಲ್ಲಿರುವ ಅದಾನಿ ಶಾಂತಿಗ್ರಾಮ ಫುಟ್ಬಾಲ್‌ ಗ್ರೌಂಡ್‌ನಲ್ಲಿ ನೂತನ ಫುಟ್ಬಾಲ್‌ ಶಾಲೆ ಆರಂಭಿಸುವುದಾಗಿ ಹೇಳಿದೆ. ಈಮೂಲಕ ಕರ್ನಾಟಕದಿಂದಾಚೆಗೆ ಬಿಎಫ್‌ಸಿ ಮೊದಲ ಶಾಲೆಯನ್ನು ಆರಂಭಿಸಲು ಮುಂದಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಬೆಂಗಳೂರು ಎಫ್‌ಸಿ ತಂಡ ಈಗಾಗಗಲೇ ಬೆಂಗಳೂರಿನಲ್ಲಿ ಒಟ್ಟು 14 ಶಾಲೆಗಳನ್ನು ಹೊಂದಿದ್ದು, ಇತ್ತೀಚೆಗೆ ಸ್ಪೋರ್ಟ್‌ಹುಡ್‌ ಜೊತೆಗಿನ ಒಪ್ಪಂದದ ಮೇರೆಗೆ ಈ ಸಂಖ್ಯೆನ್ನು 35ಕ್ಕೆ ವಿಸ್ತರಿಸಲು ಮುಂದಾಗಿದೆ.

ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!ಪಾಕಿಸ್ತಾನ ತಂಡ ಈ ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದೇ ಗೆಲ್ಲುತ್ತಂತೆ!

"ಕರ್ನಾಟಕದಿಂದ ಆಚೆಗೆ ನಮ್ಮ ಮೊದಲ ಫುಟ್ಬಾಲ್‌ ಶಾಲೆ ಆರಂಭಿಸುತ್ತಿರುವುದಾಗಿ ಘೋಷಿಸುತ್ತಿರುವುದು ಸಂತಸ ತಂದಿದೆ. ಈ ಬಾರಿ ಬೇಸಿಗೆ ದಿನಗಳಲ್ಲಿ ಮಂಗಳೂರಿನಲ್ಲಿ ಶಿಬಿರ ಕೈಗೊಂಡಿದ್ದೆವು. ಕರ್ನಾಟಕದ ಆಚೆಯಿಂದಲೂ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಮೊದಲ ಹೆಜ್ಜೆ ಇಡಲಾಗಿದ್ದು, ಗುಜರಾತ್‌ ತಲುಪಿದ್ದೇವೆ. ಬಿಎಫ್‌ಸಿ ಶಾಲೆಯ ಮೂಲಕ ಪ್ರತಿಭಾನ್ವಿತ ಮಕ್ಕಳನ್ನು ಪ್ರೋತ್ಸಾಹಿಸಲಿದ್ದೇವೆ,'' ಎಂದು ಕ್ಲಬ್‌ನ ಯೂತ್‌ ಡಿಪಾರ್ಟ್‌ಮೆಂಟ್‌ ಮುಖ್ಯಸ್ಥ ನೌಶಾದ್‌ ಮೂತಾ ತಿಳಿಸಿದ್ದಾರೆ.

ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!ಪಾಕ್‌ ಆಟಗಾರಿಗೆ ವಿರಾಟ್‌ ಕೊಹ್ಲಿ ರೀತಿ ಆಡುವ ಆಸೆಯಂತೆ!

ಬಿಎಫ್‌ಸಿ ತಂಡದ ಈ ನಿರ್ಧಾರವನ್ನು ಪ್ರಶಂಶಿಸಿರುವ ಅದಾನಿ ಟೌನ್‌ಷಿಪ್ ಮತ್ತು ರಿಯಲ್‌ ಎಸೆಟೇಟ್‌ ಸಂಸ್ಥೆಯ ಗುಜರಾತ್‌ ವಿಭಾಗದ ಸಿಇಒ ರಂಜೀವ್‌ ಮಹಿಂದು, "ಬಿಎಫ್‌ಸಿ ತಂಡದ ಈ ಪ್ರಯತ್ನದಿಂದ ಅಹಮದಾಬಾದ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರತಿಭಾನ್ವಿತ ಯುವ ಹಾಗೂ ಅವಕಾಶ ಆಕಾಂಕ್ಷಿತ ಆಟಗಾರರಿಗೆ ನೆರವಾಗಲಿದೆ,'' ಎಂದು ಹೇಳಿದ್ದಾರೆ.

 2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ? 2007ರಲ್ಲಿ ನಿವೃತ್ತಿ ಹೊಂದಬೇಕಿದ್ದ ಸಚಿನ್‌ ಅವರನ್ನು ತಡೆದದ್ದು ಯಾರು ಗೊತ್ತಾ?

ಜೂನ್‌ 4ರಿಂದ ಬಿಎಫ್‌ಸಿ ಶಾಲೆ ಆರಂಭವಾಗಲಿದ್ದು, ಮಂಗಳವಾರ, ಬುಧವಾರ ಮತ್ತು ಶನಿವಾರ ಸಂಜೆ 6-7ರವರೆಗೆ 5ರಿಂದ 16 ವರ್ಷ ವಯೋಮಿತಿಯಲ್ಲಿನ ಆಟಗಾರರಿಗೆ ತರಬೇತಿ ನೀಡಲಾಗುತ್ತದೆ.

Story first published: Monday, June 3, 2019, 23:03 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X