ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಜೇಯರಾಗಿ ಉಳಿಯಲು ವಿಜಯಕ್ಕಾಗಿ ಹೋರಾಟ

By Isl Media
Bengaluru, NorthEast aim to keep unbeaten streak intact

ಗೋವಾ, ಡಿಸೆಂಬರ್,7 : ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಅಜೇಯವಾಗಿ ಉಳಿಯಲು ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಬೆಂಗಳೂರು ಎಫ್ ಸಿ ತಂಡಗಳು ಇಲ್ಲಿನ ಫೊರ್ಟಡಾ ಅಂಗಣಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ.

ಎರಡೂ ತಂಡಗಳು ಹಿಂದಿನ ಪಂದ್ಯದಲ್ಲಿ ಜಯ ಗಳಿಸಿ ಆತ್ಮವಿಶ್ವಾಸದೊಂದಿಗೆ ಆಗಿಮಿಸಿವೆ. ಚೆನ್ನೈಯಿನ್ ಎಫ್ ಸಿ ವಿರುದ್ಧ ನಡೆದ ಪಂದ್ಯದಲ್ಲಿ ಬೆಂಗಳೂರು ತನ್ನ ಮೊದಲ ಜಯ ಗಳಿಸಿದರೆ ನಾರ್ಥ್ ಈಸ್ಟ್ ತಂಡ ಈಸ್ಟ್ ಬೆಂಗಾಲ್ ವಿರುದ್ಧ ಜಯ ಗಳಿಸಿದೆ. ಈ ಹಿಂದಿನ ಎರಡೂ ಪಂದ್ಯಗಳಲ್ಲಿ ಡ್ರಾ ಕಂಡಿತ್ತು.

ಬೆಂಗಳೂರಿನ ಡಿಫೆನ್ಸ್ ಹಾಗೂ ನಾರ್ಥ್ ಈಸ್ಟ್ ಆಕ್ರಮಣದ ನಡುವಿನ ಪೈಪೋಟಿಯನ್ನು ಪಂದ್ಯದಲ್ಲಿ ಕಾಣಬಹುದು. ಬ್ಯಾಕ್ ಲೈನ್ ನಲ್ಲಿ ನೀಲಿ ಪಡೆ ಬಲಿಷ್ಠವಾಗಿದ್ದರೆ ಓಪನ್ ಪ್ಲೇ ಮೂಲಕ ಇಲ್ಲು ಗೋಲು ಗಳಿಸಿರಲಿಲ್ಲ. ಪರ್ವತಪ್ರದೇಶದ ತಂಡ ಆಡಿದ ಪ್ರತಿಯೊಂದು ಪಂದ್ಯದಲ್ಲೂ ಗೋಲು ಗಳಿಸಿರುವುದು ವಿಶೇಷ.

ಐಎಸ್‌ಎಲ್ 2020: ಗೋವಾಕ್ಕೆ ಮೊದಲ ಜಯ, ಮಿಂಚಿದ ಐಗರ್ಐಎಸ್‌ಎಲ್ 2020: ಗೋವಾಕ್ಕೆ ಮೊದಲ ಜಯ, ಮಿಂಚಿದ ಐಗರ್

ತಮ್ಮ ತಂಡವು ಕಠಿಣ ಪಂದ್ಯವೊಂದನ್ನು ಎದುರಿಸಲಿದೆ ಎಂಬುದು ಬೆಂಗಳೂರು ತಂಡದ ಕೋಚ್ ಕಾರ್ಲಸ್ ಕ್ಬಾಡ್ರಾಟ್ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ಅರು ತನ್ನ ತಂಡದ ಸಾಮರ್ಥ್ಯದ ಬಗ್ಗೆ ಅತ್ಯಂತ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. "ಅವರದ್ದು ಉತ್ತಮ ಸಂಘಟಿತ ತಂಡ ಈ ಕಾರಣಕ್ಕಾ ಅತ್ಯಂತ ಸವಾಲಿನ ಪಂದ್ಯವಾಗಲಿದೆ. ಮೂರು ಪಂದ್ಯಗಳಲ್ಲಿ ನಾವು ಎರಡು ಕ್ಲೀನ್ ಶೀಟ್ ಸಾಧನೆ ಮಾಡಿದ್ದೇವೆ. ನಮ್ಮಸು ಉತ್ತಮ ಸ್ಥಿರ ಪ್ರದರ್ಶನ ತೋರುತ್ತಿರುವ ತಂಡ, ನಮ್ಮದು ಉತ್ತಮ ಸಂಘಟಿತ ತಂಡವಾಗಿದೆ,'' ಎಂದರು.

"ನನ್ನ ಕೋಚಿಂಗ್ ಅವಧಿಯಲ್ಲಿ ಬೆಂಗಳೂರು ಎಫ್ ಸಿ ಚೆನ್ನೈಯಿನ್ ವಿರುದ್ಧ ಕೇವಲ ಒಂದು ಬಾರಿ ಸೋತಿತ್ತು. ಗೋವಾ ವಿರುದ್ಧ ಸೋತಿರಲೇ ಇಲ್ಲ. ಇದರರ್ಥ ನಮ್ಮದು ಅತ್ಯಂತ ಸ್ಥಿರ ಪ್ರದರ್ಶನ ತೋರುತ್ತಿರುವ ತಂಡ ಎಂದು. ನಮ್ಮಲ್ಲಿ ಸ್ಪಷ್ಟವಾದ ಯೋಜನೆ ಇದೆ. ನಮ್ಮ ವಿರುದ್ಧ ಆಡುವುದು ಕಷ್ಟ. ಅದೇ ರೀತಿ ತಂಡದಲ್ಲಿ ಸುಧಾರಣೆಗೂ ಅವಕಾಶವಿದೆ. ಆ ಕಾರಣ ನಾವು ಪ್ರತಿಬಾರಿ ಉತ್ತಮಗೊಳ್ಳುತ್ತಿದ್ದೇವೆ," ಎಂದರು.

ನಾರ್ಥ್ ಈಸ್ಟ್ ಯುನೈಟೆಡ್ ತಂಡದ ಕೋಚ್ ಗೆರಾರ್ಡ್ ನಸ್ ಕೂಡ ತಮ್ಮ ತಂಡದ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟಿದ್ದು, ಅದಕ್ಕೆ ಅನುಗುಣವಾಗಿ ಮಂಗಳವಾರ ಆಡಲಿದ್ದೇವೆ ಎಂದರು. "ನಮ್ಮ ಆಟಟದ ಶೈಲಿಗೆ ನಾವು ಬದ್ಧವಾಗಿ ಆಡಲಿದ್ದೇವೆ, ಅದನ್ನು ನಾವು ಬದಲಾಯಿಸುವುದಿಲ್ಲ, ಏಕೆಂದರೆ ನಾವು ನಂಬಿಕೆ ಇಟ್ಟು ಆಡುತ್ತೇವೆ. ನಾವು ಎದುರಾಳಿ ತಂಡದ ಸಾಮರ್ಥ್ಯವನ್ನು ಪರಿಗಣಿಸಿ ಆಡಲಿದ್ದೇವೆ, ಆದ್ದರಿಂದ ಅದು ಖಂಡಿತವಾಗಿ ಒಂದು ಮಿಶ್ರಣವಾಗಲಿದೆ,' ಎಂದರು.

ಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿಐಎಸ್‌ಎಲ್: ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ಮುಂಬೈ ಸಿಟಿ

ನಾರ್ಥ್ ಈಸ್ಟ್ ಯುನೈಟೆಡ್ ತಂಡ ಇದುವರೆಗೂ ಲೀಗ್ ಹಂತದಲ್ಲಿ ಎದುರಾಳಿ ವಿರರುದ್ಧ ಸೋಲು ಕಂಡಿರಲಿಲ್ಲ. ನಸ್ ಅವರಿಗೆ ಈ ದಾಖಲೆಯನ್ನು ಕಾಯ್ದುಕೊಳ್ಳಲು ಇದು ಉತ್ತಮ ಅವಕಾಶ. ಆದರೆ ಎದುರಾಳಿ ತಂಡದ ಸಾಮರ್ಥ್ಯವನ್ನು ಅವರು ಕಡೆಗಾಣಿಸುವುದಿಲ್ಲ ಎಂದಿದ್ದಾರೆ. "ಎರಡು ವರ್ಷಗಳ ಹಿಂದೆ ಬೆಂಗಳೂರು ಪ್ರಶಸ್ತಿ ಗೆದ್ದಿತ್ತು ಎಂಬುದು ಸತ್ಯ. ಕಳೆದ ಋತುವಿನಲ್ಲೂ ಪ್ಲೇ ಆಫ್ ಹಂತ ತಲುಪಿತ್ತು. ಇದು ಅವರು ಎಷ್ಟು ಬಲಿಷ್ಠರು ಎಂಬುದನ್ನು ತೋರಿಸುತ್ತದೆ. ಅದೋಂದು ಬಲಿಷ್ಠ ತಂಡ. ನನಗೆ ನಾಳೆಯ ಪಂದ್ಯದ ಬಗ್ಗೆ ಮಾತ್ರ ಗಮನಹರಿಸುವೆ. ಏಕೆಂದರೆ ನಮಗೆ ಸಿದ್ಧತೆಯ ಕೊರತೆ ಇದೆ. ನಾವು ಎರರಡು ದಿನಗಳ ಹಿಂದೆ ಆಡಿದ್ದೇವೆ, ಆದರೆ ಅದು ಮುಖ್ಯವಲ್ಲ.," ಎಂದರು.

Story first published: Monday, December 7, 2020, 18:47 [IST]
Other articles published on Dec 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X