ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕುತೂಹಲಕಾರಿ ಕಾದಾಟಕ್ಕೆ ಸಾಕ್ಷಿಯಾಗಲಿದೆ 2019ರ ಐಎಸ್‌ಎಲ್ ಪಂದ್ಯಗಳು!

By Isl Media
Beyond usual suspects, ISL could pave the way for fiercest contest

ಬೆಂಗಳೂರು, ಅಕ್ಟೋಬರ್ 20: ಇದುವರೆಗೂ ಐಎಸ್‌ಎಲ್‌ ನಲ್ಲಿ ಬೆಂಗಳೂರು ಎಫ್ ಸಿ ಹಾಗೂ ಎಫ್‌ಸಿ ಗೋವಾ ತಂಡಗಳು ಎಂದಿನಂತೆ ಅತ್ಯಂತ ಫೆವರಿಟ್ ತಂಡಗಳು ಎಣಿಸಿಕೊಳುತ್ತಿದ್ದವು, ಆದರೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಆರನೇ ಆವೃತ್ತಿಯು ಉದ್ಘಾಟನೆಗೆ ಸಜ್ಜಾಗಿದ್ದು, ಈ ಬಾರಿ ಹೊಸ ತಿರುವುಗಳಿಗೆ ಸಾಕ್ಷಿಯಾಗಲಿದೆ.

ತಮ್ಮದೇ ಆದ ಆಟದ ಶೈಲಿಯಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಹಾಗೂ ರನ್ನರ್ ಅಪ್ ಎಫ್ ಸಿ ಗೋವಾ ಕಳೆದ ಋತುವಿನಲ್ಲಿ ಗಮನ ಸೆಳೆದವು. ಎರಡೂ ತಂಡಗಳು ತನ್ನೆಲ್ಲ ಆಟಗಾರರನ್ನು ಉಳಿಸಿಕೊಂಡಿದ್ದು, ಮತ್ತು ತಟಸ್ಥ ಆಯ್ಕೆ ಎಂಬಂತೆ ಪ್ರಭುತ್ವ ಸಾಧಿಸಿವೆ.

ಐಎಸ್‌ಎಲ್: ಜಯದೊಂದಿಗೆ ಆರಂಭ ಕಾಣುವ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್ಐಎಸ್‌ಎಲ್: ಜಯದೊಂದಿಗೆ ಆರಂಭ ಕಾಣುವ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್

ಗೋವಾ ಮತ್ತು ಬೆಂಗಳೂರು ತಂಡಗಳು ಪ್ರಶಸ್ತಿ ಗೆಲ್ಲುವ ಫೆವರಿಟ್ ಎಂಬುದನ್ನು ತಳ್ಳಿ ಹಾಕುವಂತಿಲ್ಲ, ಆದರೆ ಪ್ರತಿಯೊಂದೂ ತಂಡಗಳು 2019-20 ರ ಐಎಸ್ ಎಲ್ ಗೆ ತಮ್ಮದೇ ಆದ ಯೋಜನೆ ಹಾಕಿಕೊಂಡು ಅಂಗಣಕ್ಕಿಳಿದೆವೆ . ಎಟಿಕೆ ತಂಡವನ್ನು ಹೊರತುಪಡಿಸಿದರೆ ಉಳಿದ ತಂಡಗಳು ಹೆಚ್ಚಿನ ಬದಲಾವಣೆಗೆ ಮನಸ್ಸು ಮಾಡಿಲ್ಲ. ಮಾಜಿ ಚಾಂಪಿಯನ್ ಎಟಿಕೆ ಹಲವು ವಿದೇಶಿ ಆಟಗಾರರನ್ನು ಸೇರಿಸಿಕೊಂಡಿದ್ದು ಸದ್ಯ ಮೇಲ್ನೋಟಕ್ಕೆ ಅತ್ಯಂತ ಬಲಿಷ್ಠ ತಂಡವಾಗಿ ಕಾಣುತ್ತಿದೆ.

ನಿವೃತ್ತಿ ಸುಳಿವು ನೀಡಿದ ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ!ನಿವೃತ್ತಿ ಸುಳಿವು ನೀಡಿದ ಫುಟ್ಬಾಲ್‌ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ!

ಕಳೆದ ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಕಂಡಿದ್ದ ಚೆನ್ನೈಯಿನ್ ಎಫ್ ಸಿ, ಋತುವಿಗೆ ಮುನ್ನ ನಡೆದ ಅಭ್ಯಾಸ ಹಾಗೂ ಸೌಹಾರ್ದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಈಬಾರಿ ಹೊಸ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಲಿದೆ.

ಬೆಂಗಳೂರು ಅಗ್ರ ಸ್ಥಾನ

ಬೆಂಗಳೂರು ಅಗ್ರ ಸ್ಥಾನ

ಫೇವರಿಟ್ ತಂಡಗಳ ಕಡೆಗೆ ಗಮನ ಹರಿಸುವ. ಫೇವರಿಟ್ ತಂಡಗಳ ಪಟ್ಟಿಯಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಬ್ಲೂ ಪಡೆ ತಾನು ಸುಧಾರಣೆ ಮಾಡಿಕೊಳ್ಳಬೇಕಾಗಿರುವ ವಿಭಾಗಗಳನ್ನು ಗುರುತಿಸಿ, ಇಬ್ಬರು ಉತ್ತಮ ಆಟಗಾರರನ್ನು ಸೇರಿಸಿಕೊಳ್ಳುವ ಮೂಲಕ ತಂಡವನ್ನು ಸಮತೋಲನ ಮಾಡಿದೆ. ಆಶಿಕ್ ಕುರುನಿಯನ್ ಮತ್ತು ರಫಾಯೆಲ್ ಅಗಸ್ಟೊ ಈ ಇಬ್ಬರೂ ಐಎಸ್ ಎಲ್ ನಲ್ಲಿ ತಾವಿದ್ದ ತಂಡಗಳಲ್ಲಿ ಸ್ಟಾರ್ ಆಟಗಾರಾಗಿದ್ದರು (ಚಿತ್ರದಲ್ಲಿ: ಸುನಿಲ್ ಛೆಟ್ರಿ).

ಆಟಗಾರರನ್ನು ಸೇರಿಸಿಕೊಂಡಿಲ್ಲ

ಆಟಗಾರರನ್ನು ಸೇರಿಸಿಕೊಂಡಿಲ್ಲ

ಎಫ್ ಸಿ ಗೋವಾ ತಮ್ಮ ಪಡೆಗೆ ಯಾವುದೇ ಹೊಸ ವಿದೇಶಿ ಆಟಗಾರರನ್ನು ಸೇರಿಸಿಕೊಂಡಿಲ್ಲ. ಮತ್ತು ಕಳೆದ ಋತುವಿನಲ್ಲಿದ್ದ ಆರು ವಿದೇಶಿ ಆಟಗಾರರನ್ನು ಉಳಿಸಿಕೊಂಡಿದೆ. ಪ್ರಮುಖ ಡಿಫೆಂಡರ್ ಮೌರ್ತಾದ ಫಾಲ್, ಮಿಡ್ ಫೀಲ್ಡ್ ಮಾಂತ್ರಿಕ ಅಹಮದ್ ಜಹೌಹ್ ಮತ್ತು ಗೋಲ್ಡನ್ ಬೂಟ್ ವಿಜೇತ ಫರಾನ್ ಕೊರೊಮಿನಾಸ್ ಸೇರಿದ್ದಾರೆ. ತಂಡದಲ್ಲಿರುವ ಭಾರತೀಯ ಪ್ರತಿಭೆಗಳಲ್ಲಿ, ಬ್ರೆನ್ದಾನ್ ಫೆರ್ನಾಂಡೀಸ್, ಮಂದಾರ ರಾವ್ ದೇಸಾಯಿ ಮಾನ್ವಿರ್ ಸಿಂಗ್ ಸೇರಿದ್ದಾರೆ. ಈ ರೀತಿ ಪ್ರತಿಭಾವಂತ ಆಟಗಾರರ ಮಿಶ್ರಣದಿಂದ ಕೂಡಿರುವ ತಂಡ ಕಳೆದ ಬಾರಿಗಿಂತ ಬಲಿಷ್ಠವಾಗಿ ಕಾಣುತ್ತಿದೆ (ಚಿತ್ರದಲ್ಲಿ: ಆದಿಲ್ ಖಾನ್)

254 ಗೋಲು

254 ಗೋಲು

ಕಳೆದ ಋತುವಿನಲ್ಲಿ 10 ತಂಡಗಳು ಲೀಗ್ ಹಂತದಲ್ಲಿ ಒಟ್ಟು 254 ಗೋಲುಗಳನ್ನು ದಾಖಲಿಸಿದವು. ಈ ಋತುವಿನಲ್ಲಿ ಅದಕ್ಕಿಂತಲೂ ಹೆಚ್ಚು ಗೋಲುಗಳು ದಾಖಲಾಗುವ ಸಾಧ್ಯತೆ ಇದೆ. ಏಕೆಂದರೆ ಪ್ರತಿಯೊಂದು ತಂಡವೂ ದಾಳಿ ಮತ್ತು ಗೋಲು ಗಳಿಸಲು ಅಗತ್ಯವಿರುವ ಉತ್ತಮ ಆಟಗಾರರನ್ನು ಹೊಂದಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಅಚ್ಚರಿಯ ರೀತಿಯಲ್ಲಿ ಘಾನಾದ ಅಂತಾರಾಷ್ಟ್ರೀಯ ಆಟಗಾರ ಹಾಗೂ ಸುಂಡೆರ್ಲ್ಯಾಂಡ್ ನ ಸ್ಟ್ರೈಕರ್ ಅಸಮೊಹ್ ಗ್ಯಾನ್ ಅವರನ್ನು ಸೇರಿಸಿಕೊಂಡಿದೆ. ಗೋಲು ಗಳಿಕೆಯಲ್ಲಿ ತಾನೆಷ್ಟು ಪ್ರವೀಣ ಎಂಬುದನ್ನು ಗ್ಯಾನ್ ಈಗಾಗಲೇ ತೋರಿಸಿಕೊಟ್ಟಿದ್ದಾರೆ (ಚಿತ್ರದಲ್ಲಿ: ಫೆರಾನ್ ಕೊರೊಮಿನಸ್ )

ಗೋಲು ಗಳಿಸುವಲ್ಲಿ ನಿಪುಣ

ಗೋಲು ಗಳಿಸುವಲ್ಲಿ ನಿಪುಣ

ಕಳೆದ ಎರಡು ಋತುಗಳಲ್ಲಿ ನಿರಾಸೆ ಕಂಡಿದ್ದ ಕೇರಳ ಬ್ಲಾಸ್ಟರ್ಸ್ ಮುಂಭಾಗದಲ್ಲಿ ಗೋಲು ಗಳಿಸುವಲ್ಲಿ ನಿಪುಣರಾಗಿರುವ ಬಾರ್ತಲೋಮ್ಯೋ ಒಗ್ಬೇಚೆ ಅವರನ್ನು ಹೆಚ್ಚು ಆಧರಿಸಿದೆ. ಕಳೆದ ಋತುವಿನಲ್ಲಿ ಗೋವಾದ ಕೊರೊಮಿನಾಸ್ ಮಾತ್ರ ಒಗ್ಬೇಚೆ ಅವರಿಗಿಂತ ಹೆಚ್ಚು ಗೋಲು ಗಳಿಸಿದ್ದಾರೆ. ಮುಂಬೈ ಸಿಟಿ ಎಫ್ ಸಿ ಪರ ಮೊದೌ ಸೌಗೋ ಕಳೆದ ಋತುವಿನಲ್ಲಿ ತೋರಿದ ಪ್ರದರ್ಶನವನ್ನೇ ಮುಂದುವರಿಸುತ್ತಾರೆಂಬ ಹಂಬಲದಲ್ಲಿದೆ (ಚಿತ್ರದಲ್ಲಿ: ಆಂಟೋನಿಯೊ ಲೋಪೆಜ್ ಹಬಾಸ್).

ಉತ್ತಮ ರೀತಿಯಲ್ಲಿ ಸ್ಪರ್ಧೆ

ಉತ್ತಮ ರೀತಿಯಲ್ಲಿ ಸ್ಪರ್ಧೆ

2019-20ರ ಐಎಸ್ ಎಲ್ ಉತ್ತಮ ತಂತ್ರಗಾರಿಕೆಯನ್ನು ಹೊಂದಿರುವ ಪಡೆಯಿಂದಲೂ ಕೂಡಿದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಅನುಭವಿ ರಾಬರ್ಟ್ ಜೆರ್ಮಿ ಅವರಲ್ಲಿ ಪಳಗಿದೆ . ನಾರ್ತ್ ಈಸ್ಟ್ ನಲ್ಲಿದ್ದ ಎಲ್ಕೋ ಶಟ್ಟೋರಿ ಈ ಬಾರಿ ಕೇರಳ ಬ್ಲಾಸ್ಟರ್ಸ್ ತಂಡದಲ್ಲಿದ್ದಾರೆ. 2014 ರಲ್ಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಂಟೋನಿಯೋ ಹಬ್ಬಾಸ್ ಅವರನ್ನು ಎಟಿಕೆ ಪುನಃ ಸ್ವಾಗತಿಸಿದೆ. ಜೇಮ್ಶೆಡ್ಪುರ ಎಫ್ ಸಿ ಸ್ಪೇನ್ ನ ಅಂಟೋನಿಯೋ ಇರಿಯೊಂಡೋ ಅವರನ್ನು ಸೇರಿಸಿಕೊಂಡಿದೆ, ಇವರು ಸ್ಪೇನ್ ನಲ್ಲಿ 25 ವರ್ಷಗಳ ಕಾಲ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ (ಚಿತ್ರದಲ್ಲಿ: ಲಲಿಯನ್ಜುವಾಲಾ ಚಾಂಗ್ಟೆ )

ಎದುರಾಳಿಗಳನ್ನು ಎದುರಿಬೇಕಾಗಿದೆ

ಎದುರಾಳಿಗಳನ್ನು ಎದುರಿಬೇಕಾಗಿದೆ

ಹೊಸ ಋತುವಿನಲ್ಲಿ ಹಳೆ ಎದುರಾಳಿಗಳ ಜತೆಯಲ್ಲಿ ಹೊಸ ಎದುರಾಳಿಗಳನ್ನು ಎದುರಿಬೇಕಾಗಿದೆ. ಹೆಚ್ಚಿನ ಆಟಗಾರರು ತಮ್ಮ ಹಿಂದಿನ ತಂಡವನ್ನು ತೊರೆದು ಹೊಸ ತಂಡವನ್ನು ಸೇರಿಕೊಂಡಿದ್ದಾರೆ. ಜೇಮ್ಶೆಡ್ಪುರದ ಸರ್ಗಿಯೊ ಸಿದೊಂಚಾ ಮತ್ತು ಮಾರಿಯೋ ಆರ್ಕ್ಯೂಸ್ ಕೇರಳ ಬ್ಲಾಸ್ಟರ್ಸ್ ತಂಡ ಸೇರಿದ್ದಾರೆ. ಚೆನ್ನೈಯಿನ್ ಎಫ್ ಸಿ ತಂಡವನ್ನು ತೊರೆದ ಬ್ರೆಜಿಲ್ ನ ರಫಾಯೆಲ್ ಅಗಸ್ಟಾ ಬೆಂಗಳೂರು ತಂಡದಲ್ಲಿದ್ದಾರೆ. ಕೇರಳದ ನೆಚ್ಚಿನ ಆಟಗಾರ ಅನಾಸ್ ಎಡತೋಡಿಕಾ ಎಟಿಕೆ ಪರ ಅಂಗಣಕ್ಕಿಳಿಯಲಿದ್ದಾರೆ (ಚಿತ್ರದಲ್ಲಿ: ಸಹಾಲ್ ಅಬ್ದುಲ್ ಸಮದ್)
ಈ ಋತುವಿನಲ್ಲಿ ಸಾಕಷ್ಟು ಕುತೂಹಲಗಳನ್ನು ಕಾಣಲಿದೆ. ಇಲ್ಲಿ ಸಾಕಷ್ಟು ಫೆವರೀಟ್ಸ್ ಇರಬಹುದು, ಆದರೆ, ಈ ಋತು ಸಾಕಷ್ಟು ಅಚ್ಚರಿಗಳಿಗೆ ಸಾಕ್ಷಿಯಾಗಲಿದೆ.

Story first published: Sunday, October 20, 2019, 2:59 [IST]
Other articles published on Oct 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X