ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚುನಾವಣೆಯಲ್ಲಿ ಸ್ಪರ್ಧಿಸಲು ಜರ್ಸಿ ಹರಾಜಿಗಿಟ್ಟ ಮಾಜಿ ನಾಯಕ

Bhaichung Bhutia Auctions Two Jerseys To Fight Polls In Sikkim

ಗ್ಯಾಂಗ್‌ಟಾಕ್, ಮಾರ್ಚ್ 25: 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಲು ಟೀಂ ಇಂಡಿಯಾದ ಮಾಜಿ ನಾಯಕ ಸಜ್ಜಾಗುತ್ತಿದ್ದಾರೆ. ಆದರೆ, ಚುನಾವಣಾ ವೆಚ್ಚ ಭರಿಸಲು ಅಗದ ಕಾರಣ, ತಮ್ಮ ಎರಡು ಜರ್ಸಿಗಳನ್ನು ಹರಾಜಿಗಿಟ್ಟಿರುವ ಪ್ರಸಂಗ ನಡೆದಿದೆ.

ಹಮ್ರಾ ಸಿಕ್ಕಿಂ ಪಕ್ಷ(ಎಚ್‌ಎಸ್‌ಪಿ)ದಿಂದ ಸ್ಪರ್ಧಿಸಲು ಬೇಕಾದ ನಿಧಿ ಸಂಗ್ರಹಕ್ಕಾಗಿ ಭಾರತ ಫುಟ್ಬಾಲ್ ತಂಡದ ಮಾಜಿ ಫುಟ್ಬಾಲ್ ನಾಯಕ ಭೈಚುಂಗ್ ಭುಟಿಯಾ ಅವರು ಎರಡು ನೆಚ್ಚಿನ ಜರ್ಸಿಗಳನ್ನು ಹರಾಜು ಹಾಕಿದ್ದಾರೆ.

ಬೈ ಬೈ ಬೈಚುಂಗ್, ಯೂ ಆರ್ ಗ್ರೇಟ್

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಿದ್ದ 'ಬಡತನದ ವಿರುದ್ಧ ಪಂದ್ಯ'ದಲ್ಲಿ ಧರಿಸಿ ಆಡಿದ್ದ ಒಂದು ಜರ್ಸಿ ಹಾಗೂ ಇನ್ನೊಂದು 2012ರಲ್ಲಿ ಬಾಯಾ ಮ್ಯೂನಿಕ್ ವಿರುದ್ಧದ ಕೊನೆ ಪಂದ್ಯದಲ್ಲಿ ಧರಿಸಿದ್ದ ಜರ್ಸಿಯಾಗಿದೆ. ಆ ಜರ್ಸಿಯಲ್ಲಿ ಫುಟ್ಬಾಲ್ ದಿಗ್ಗಜರಾದ ಫ್ರಾನ್ಸಿನ ಜಿನೆದ್ದೀನ್ ಜಿದಾನ್ ಹಾಗೂ ಪೋರ್ಚುಗಲ್‌ನ ಫಿಗೊ ಸಹಿತ ಇತರರ ಆಟೋಗ್ರಾಫ್ ಇದೆ.

ಟ್ವಿಟ್ಟರ್ ನಲ್ಲಿ ಹರಾಜಿನ ಬಗ್ಗೆ ಬರೆದುಕೊಂಡಿರುವ ಭೈಚುಂಗ್, ಪ್ರೀತಿಯ ಫುಟ್ಬಾಲ್ ಅಭಿಮಾನಿಗಳೇ ಹಾಗೂ ದೇಶಬಾಂಧವರೆ, ನಾವು ಸಿಕ್ಕಿಂನಲ್ಲಿ ಎಚ್ಎಸ್ ಪಿ ಎಂಬ ರಾಜಕೀಯ ಪಕ್ಷವೊಂದನ್ನು ಆರಂಭಿಸುತ್ತಿದ್ದೇವೆ. ಇತರ ರಾಜ್ಯಗಳಂತೆಯೇ ನಮ್ಮಲ್ಲೂ ಕೂಡ ಭ್ರಷ್ಟಾಚಾರ, ನಿರುದ್ಯೋಗ, ರೈತರ ಬಿಕ್ಕಟ್ಟು ಇತ್ಯಾದಿ ಸಮಸ್ಯೆಗಳಿವೆ. ಈ ಹೋರಾಟದಲ್ಲಿ ನಿಮ್ಮ ಬೆಂಬಲದ ಅಗತ್ಯವಿದೆ ಎಂದಿದ್ದಾರೆ.

2018ರ ಮಾರ್ಚ್ 31 ರಂದು ಹಮ್ರೊ ಸಿಕ್ಕಿಂ ಪಾರ್ಟಿ(ಎಚ್‌ಎಸ್‌ಪಿ)ಯನ್ನು ಸ್ಥಾಪಿಸಿದ್ದರು. ಮುಂದಿನ ಐದು ವರ್ಷಗಳಲ್ಲಿ 'ಹ್ಯಾಪಿ ಸಿಕ್ಕಿಂ' ಆಗುವ ನಿಟ್ಟಿಯಲ್ಲಿ ತನ್ನ ಪಕ್ಷ ನೀತಿಗಳನ್ನು ಜಾರಿಗೆ ತರಲಿದೆ ಎಂಬ ಭರವಸೆಯನ್ನು ನೀಡಿದ್ದಾರೆ.

ಸಿಕ್ಕಿಂ ಡೆಮೊಕ್ರಾಟಿಕ್ ಫ್ರಂಟ್(ಎಸ್‌ಡಿಎಫ್)ಪ್ರಾಬಲ್ಯವಿರುವ ಸಿಕ್ಕಿಂನಲ್ಲಿ ಒಂದು ಸಂಸತ್ ಸ್ಥಾನಕ್ಕಾಗಿ ಹಾಗೂ 32 ವಿಧಾನಸಭಾ ಸ್ಥಾನಕ್ಕಾಗಿ ಏಪ್ರಿಲ್ 11ರಂದು ಚುನಾವಣೆ ನಡೆಯಲಿದ್ದು, ಮೇ 23ರಂದು ಫಲಿತಾಂಶ ಹೊರಬರಲಿದೆ.ಎಸ್‌ಡಿಎಫ್ 2009 ಹಾಗೂ 2014ರಲ್ಲಿ ಸಂಸತ್ ಚುನಾವಣೆಯಲ್ಲಿ ಜಯ ದಾಖಲಿಸಿದೆ

ಟಿಎಂಸಿಗೆ ರಾಜೀನಾಮೆ ನೀಡಿದ ಮಾಜಿ ಫುಟ್ಬಾಲರ್ ಭೈಚುಂಗ್ ಭುಟಿಯಾ

ಈ ಹಿಂದೆ ತೃಣಮೂಲ ಕಾಂಗ್ರೆಸ್‌ನ್ನು ಸೇರ್ಪಡೆಯಾಗಿದ್ದ ಭುಟಿಯಾ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಡಾರ್ಜಲಿಂಗ್‌ನಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. 2016ರ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮಬಂಗಾಳದ ಸಿಲಿಗುರಿಯಿಂದ ಸ್ಪರ್ಧಿಸಿ ಕೂಡಾ ಸೋಲು ಕಂಡಿದ್ದರು.

Story first published: Monday, March 25, 2019, 13:35 [IST]
Other articles published on Mar 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X