ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

AIFF ಅಧ್ಯಕ್ಷ ಸ್ಥಾನಕ್ಕಾಗಿ ಬೈಚುಂಗ್ ಭುಟಿಯಾ ನಾಮನಿರ್ದೇಶನ ಸಲ್ಲಿಕೆ

Bhaichung Bhutia files nomination for AIFF president post

ಸದ್ಯ ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿಕೊಂಡು ಸುದ್ದಿಗೀಡಾಗಿರುವ ಅಖಿಲ ಭಾರತ ಫುಟ್‌ಬಾಲ್ ಅಸೋಸಿಯೇಶನ್ ( ಎಐಎಫ್ಎಫ್ ) ಇದೀಗ ಚುನಾವಣಾ ವಿಷಯವಾಗಿ ಸುದ್ದಿ ಮಾಡಲು ಆರಂಭಿಸಿದೆ. ಅಖಿಲ ಭಾರತ ಫುಟ್‌ಬಾಲ್ ಅಸೋಸಿಯೇಶನ್ ಕಾರ್ಯಕಾರಿ ಸಮಿತಿಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಚಟುವಟಿಕೆಗಳು ನಡೆಯುತ್ತಿದ್ದು ಇದೀಗ ದಿಗ್ಗಜ ಫುಟ್‌ಬಾಲ್ ಆಟಗಾರ ಭಾರತದ ಬೈಚುಂಗ್ ಭುಟಿಯಾ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಲು ಹೊಸದಾಗಿ ನಾಮನಿರ್ದೇಶನವನ್ನು ಸಲ್ಲಿಸಿದ್ದಾರೆ.

ಅವರ ನಾಮನಿರ್ದೇಶನವನ್ನು ಆಂಧ್ರ ಫುಟ್‌ಬಾಲ್ ಅಸೋಸಿಯೇಷನ್ ​​ಪ್ರಸ್ತಾಪಿಸಿದೆ ಮತ್ತು ರಾಜಸ್ಥಾನ ಫುಟ್‌ಬಾಲ್ ಅಸೋಸಿಯೇಷನ್ ​​ಅನುಮೋದಿಸಿದೆ ಎಂದು ಬೆಳವಣಿಗೆಯ ಬಲ್ಲ ಮೂಲಗಳು ಮಾಹಿತಿ ನೀಡಿವೆ. ಇನ್ನು ಆಗಸ್ಟ್ 15ರಂದು ಫಿಫಾ ಮೂರನೇ ವ್ಯಕ್ತಿಗಳ ಹಸ್ತಕ್ಷೇಪದ ಕಾರಣದಿಂದಾಗಿ ಅಖಿಲ ಭಾರತ ಫುಟ್‌ಬಾಲ್ ಅಸೋಸಿಯೇಶನ್ ( ಎ ಐ ಎಫ್ ಎಫ್ ) ಅನ್ನು ನಿಷೇಧ ಮಾಡಿತ್ತು. ಫಿಫಾದ ಈ ನಡೆ ಭಾರತಕ್ಕೆ ಹಾಗೂ ಭಾರತ ಫುಟ್‌ಬಾಲ್ ಅಸೋಸಿಯೇಶನ್‌ಗೆ ಭಾರೀ ಮುಖಭಂಗವನ್ನು ಉಂಟು ಮಾಡಿತ್ತು.

ಏಷ್ಯಾಕಪ್ ಕ್ವಾಲಿಫೈಯರ್: 3ಕ್ಕೆ 3 ಪಂದ್ಯ ಗೆದ್ದು ಭಾರತ ಮತ್ತು ಪಾಕ್ ಗುಂಪು ಸೇರಿದ ನೂತನ ತಂಡ!ಏಷ್ಯಾಕಪ್ ಕ್ವಾಲಿಫೈಯರ್: 3ಕ್ಕೆ 3 ಪಂದ್ಯ ಗೆದ್ದು ಭಾರತ ಮತ್ತು ಪಾಕ್ ಗುಂಪು ಸೇರಿದ ನೂತನ ತಂಡ!

ಹೀಗೆ ಅಖಿಲ ಭಾರತ ಫುಟ್‌ಬಾಲ್ ಅಸೋಸಿಯೇಶನ್ ನಿಷೇಧಕ್ಕ ಒಳಗಾದ ಕಾರಣ ಭಾರತ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ತವರು ನೆಲದಲ್ಲಿ ಅಂಡರ್ 19 ಮಹಿಳಾ ವಿಶ್ವ ಕಪ್ ನಡೆಸಲು ಸಿಕ್ಕಿದ್ದ ಅವಕಾಶವನ್ನೂ ಸಹ ಕೈತಪ್ಪಿಸಿಕೊಂಡಿತು. ಹೀಗೆ ಈ ನಿಷೇಧದಿಂದ ತೀವ್ರ ಹಿನ್ನಡೆಯನ್ನು ಅನುಭವಿಸಿದ ಕ್ರೀಡಾ ಸಚಿವಾಲಯ ಮೊದಲಿಗೆ ಫಿಫಾ ಜತೆ ಮಾತನಾಡಿ ನಂತರ ನಿಷೇಧವನ್ನು ಹಿಂಪಡೆಸಲು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹಾಗೂ ಮೂರನೇ ವ್ಯಕ್ತಿಗಳ ಯಾವುದೇ ಹಸ್ತಕ್ಷೇಪವಿಲ್ಲದೇ ಆಡಳಿತ ನಡೆಸಲು ಒಪ್ಪಿಗೆ ಸೂಚಿಸಿತ್ತು.

Asia Cup 2022: ಕೊಹ್ಲಿಯ ಸಿಕ್ಸರ್ ಸುರಿಮಳೆ ಕಂಡು ಬೆರಗಾದ ಜಡೇಜಾ, ಚಾಹಲ್; ವಿಡಿಯೋAsia Cup 2022: ಕೊಹ್ಲಿಯ ಸಿಕ್ಸರ್ ಸುರಿಮಳೆ ಕಂಡು ಬೆರಗಾದ ಜಡೇಜಾ, ಚಾಹಲ್; ವಿಡಿಯೋ

ಈ ಪರಿಣಾಮ ಇದೀಗ ಚುನಾವಣೆ ಏರ್ಪಡುತ್ತಿದ್ದು ಸೆಪ್ಟೆಂಬರ್ 2ರಂದು ಚುನಾವಣೆ ನಡೆಯಲಿದೆ. ವಿವಿಧ ಹುದ್ದೆಗಳಿಗೆ ನಾಮಪತ್ರಗಳನ್ನು ಸಲ್ಲಿಸಲು ಆಗಸ್ಟ್ 25ರಿಂದ 27ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ ಹಾಗೂ ಸಲ್ಲಿಕೆಯಾಗಲಿರುವ ಎಲ್ಲಾ ನಾಮನಿರ್ದೇಶನಗಳನ್ನು ಆಗಸ್ಟ್ 28ರಂದು ಪರಿಶೀಲನೆಯನ್ನು ನಡೆಸಲಾಗುತ್ತದೆ.

Story first published: Thursday, August 25, 2022, 16:35 [IST]
Other articles published on Aug 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X