ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಾಂಪಿಯನ್ಸ್‌ ಲೀಗ್‌: ಯುವೆಂಟಸ್‌ಗೆ ಸಡ್ಡು ಹೊಡೆದ ಏಜಾಕ್ಸ್‌ ಸೆಮೀಸ್‌ಗೆ

david neres and donny van de beek celebration

ಕ್ರಿಸ್ಟಿಯಾನೊ ರೊನಾಲ್ಡೊ ಹೋರಾಟ ವ್ಯರ್ಥ/ 3-2ರ ಸರಾಸರಿಯಲ್ಲಿ ಗೆದ್ದ ಏಜಾಕ್ಸ್‌

ಟುರಿನ್‌, ಏಪ್ರಿಲ್‌ 17: ಸ್ಟಾರ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ತಂದುಕೊಟ್ಟ ಆರಂಭಿಕ ಮುನ್ನಡೆಯ ಲಾಭ ಪಡೆಯುವಲ್ಲಿ ವಿಫಲಗೊಂಡ ಯುವೆಂಟಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಫುಟ್ಬಾಲ್‌ ಟೂರ್ನಿಯ 2ನೇ ಹಂತದ ಕ್ಯಾರ್ಟರ್‌ಫೈನಲ್ಸ್‌ನಲ್ಲಿ ಏಜಾಕ್ಸ್‌ ಎದುರು 1-2 (2-3) ಗೋಲ್‌ಗಳಿಂದ ಮುಗ್ಗರಿಸಿ ಸ್ಪರ್ಧೆಯಿಂದ ಹೊರಬಿದ್ದಿದೆ.

ಕಳೆದ ವಾರ ನಡೆದ ಮೊದಲ ಹಂತದ ಕ್ವಾರ್ಟರ್‌ಫೈನಲ್ಸ್‌ನಲ್ಲಿಇತ್ತಂಡಗಳು 1-1 ಗೋಲ್‌ಗಳ ಸಮಬಲ ಸಾಧಿಸಿದ್ದವು. ಹೀಗಾಗಿ 2ನೇ ಕ್ವಾರ್ಟರ್‌ಫೈನಲ್ಸ್‌ ಪಂದ್ಯ ತೀವ್ರ ಕುತೂಹಲ ಕಾಯ್ದುಕೊಂಡಿತ್ತು. ಪಂದ್ಯದಲ್ಲಿ ಯುವೆಂಟಸ್‌ ಪರ 28ನೇ ನಿಮಿಷದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಗೋಲ್‌ ದಾಖಲಿಸಿದರೆ, ಬಳಿಕ ಡೋನಿ ವ್ಯಾನ್‌ ಡೆ ಬೀಕ್‌ (34ನೇ ನಿ.) ಮತ್ತು ಮಥಾಯಿಸ್‌ ಡೆ ಲೈಟ್‌ (67ನೇ ನಿ.) ಏಜಾಕ್ಸ್‌ ಪರ ಚೆಂಡನ್ನು ಗುರಿ ಮುಟ್ಟಿಸಿ ತಂಡಕ್ಕೆ 3-2ರ ಸರಾಸರಿ ಗೋಲ್‌ಗಳ ಗೆಲುವಿನ ಮಾಲೆ ತೊಡಿಸಿದರು.

ಈ ಗೆಲುವಿನೊಂದಿಗೆ ಏಜಾಕ್ಸ್‌ ತಂಡ 1997ರ ಬಳಿಕ ಇದೇ ಮೊದಲ ಬಾರಿ ಚಾಂಪಿಯನ್ಸ್‌ ಲೀಗ್‌ನಲ್ಲಿ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಟ್ಟ ಸಾಧನೆ ಮಾಡಿದೆ.

ಮೊದಲ ಹಂತ ಹಾಗೂ ಎರಡನೇ ಹಂತದ ಕ್ವಾರ್ಟರ್‌ಫೈನಲ್ಸ್‌ ಪಂದ್ಯಗಳಲ್ಲಿ ಗೋಲ್‌ ದಾಖಲಿಸಿದ್ದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲರ್‌ ಕ್ರಿಸ್ಟಿಯಾನೊ ರೊನಾಲ್ಡೊ ನಿರಾಸೆಯಲ್ಲಿ ಮುಳುಗಿದರು. ರೊನಾಲ್ಡೊ ತಮ್ಮ ವೃತ್ತಿ ಬದುಕಿನಲ್ಲಿ6ನೇ ಬಾರಿ ಚಾಂಪಿಯನ್ಸ್‌ ಟ್ರೋಫಿ ಎತ್ತಿ ಹಿಡಿಯುವ ಕನಸು ಕಂಡಿದ್ದರು.

ಚಾಂಪಿಯನ್ಸ್‌ ಲೀಗ್‌ನಲ್ಲಿ 23 ವರ್ಷಗಳ ಬಳಿಕ ಮೊದಲ ಬಾರಿ ಪ್ರಶಸ್ತಿ ಗೆಲ್ಲುವ ಉದ್ದೇಶದೊಂದಿಗೆ ರಿಯಲ್‌ ಮ್ಯಾಡ್ರಿಡ್‌ ತಂಡಕ್ಕೆ 881 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದ ಯುವೆಂಟಸ್‌ ತಂಡಕ್ಕೂ ನಿರಾಸೆ ಎದುರಾಗಿದೆ.

ಏಜಾಕ್ಸ್‌ಗೆ ಕಠಿಣ ಸವಾಲು

ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿರುವ ಬಹುತೇಕ ಯುವ ಪ್ರತಿಭೆಗಳನ್ನು ಒಳಗೊಂಡ ಏಜಾಕ್ಸ್‌ ತಂಡ ದಶಕಗಳ ಬಳಿಕ ಸೆಮಿಫೈನಲ್‌ ತಲುಪಿದ ಸಾಧನೆ ಮಾಡಿದೆ. ಆದರೆ, ತಂಡದ ಮುಂದಿನ ಹಾದಿ ಮತ್ತಷ್ಟು ಕಠಿಣವಾಗಲಿದ್ದು, ಸೆಮಿಫೈನಲ್‌ ಹಂತದಲ್ಲಿ ಬಲಿಷ್ಠ ಟೊಟೆನ್‌ಹ್ಯಾಮ್‌ ಹಾಟ್‌ಸ್ಪುರ್‌ ಅಥವಾ ಮ್ಯಾಂಚೆಸ್ಟರ್‌ ಸಿಟಿ ಸವಾಲು ಎದುರಾಗಲಿದೆ. ಸೆಮಿಫೈನಲ್ಸ್‌ನ ಮೊದಲ ಹಂತದ ಪಂದ್ಯ ಏಪ್ರಿಲ್‌ 30ರಂದು ಮತ್ತು 2ನೇ ಪಂದ್ಯ ಮೇ 1ರಂದು ನಡೆಯಲಿದೆ.

ಚಾಂಪಿಯನ್ಸ್‌ ಲೀಗ್‌ನ ಎಲ್ಲ ಪಂದ್ಯಗಳು ಸೋನಿ ಇಎಸ್‌ಪಿಎನ್‌ ಮತ್ತು ಸೋನಿ ಟೆನ್‌ ಚಾನಲ್‌ಗಳಲ್ಲಿ ನೇರ ಪ್ರಸಾರಗೊಳ್ಳಲಿವೆ.

Story first published: Wednesday, April 17, 2019, 17:18 [IST]
Other articles published on Apr 17, 2019
Read in English:
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X