ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

'ನಿದ್ದೆಗೆಟ್ಟು ವಿಶ್ವಕಪ್ ನೋಡಿ ಪ್ರಾಣ ತೆತ್ತರು'

By Mahesh

ಶಾಂಘೈ, ಜೂ.18: ಬ್ರೆಜಿಲ್‌ನಲ್ಲಿ ನಡೆಯುತ್ತಿರುವ 20ನೇ ಫೀಫಾ ವಿಶ್ವಕಪ್‌ ಫುಟ್ಬಾಲ್ ಟೂರ್ನಿ ಕ್ರೇಜ್ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿದೆ. ಬ್ರೆಜಿಲಿನ ಕಾಲಮಾನಕ್ಕೂ ಏಷ್ಯಾ ಖಂಡದ ದೇಶಗಳ ಕಾಲಮಾನಕ್ಕೂ ಇರುವ ಭಾರಿ ವ್ಯತ್ಯಾಸದ ನಡುವೆಯೂ ಅಭಿಮಾನಿಗಳು ಜಾಗರಣೆ ಮುಂದುವರೆಸಿದ್ದಾರೆ. ಆದರೆ, ಇದೇ ಜಾಗರಣೆ ಅವಧಿ ಅಧಿಕವಾಗಿ ಚೀನಿಯರು ದುರಂತ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಫುಟ್ಬಾಲ್ ವೀಕ್ಷಿಸಲು ದಿನಪೂರ್ತಿ ನಿದ್ದೆಗೆಟ್ಟ 39 ವರ್ಷದ ವ್ಯಕ್ತಿಯೊಬ್ಬ ಕಳೆದ ಭಾನುವಾರ ಸಾವನ್ನಪ್ಪಿದ್ದರೆ ಸಾವನ್ನಪ್ಪಿದ್ದಾರೆ ಎಂದು ಈಸ್ಟರ್ನ್ ಡೈಲಿ ವರದಿ ಮಾಡಿತ್ತು. ಇದರ ಬೆನ್ನಲ್ಲೆ ಇನ್ನಿಬ್ಬರು ಅಭಿಮಾನಿಗಳ ಸಾವಿನ ಸುದ್ದಿ ಬಂದಿದೆ. ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ 103ನೇ ಸ್ಥಾನದಲ್ಲಿರುವ ಚೀನಾದಲ್ಲೂ ಫುಟ್ಬಾಲ್ ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ಈ ಬಾರಿ ಏಷ್ಯಾದಿಂದ ಜಪಾನ್(46), ದಕ್ಷಿಣ ಕೊರಿಯಾ(57) ಮಾತ್ರ ವಿಶ್ವಕಪ್ ಆಡುವ ಅರ್ಹತೆ ಪಡೆದುಕೊಂಡಿವೆ. [ಫೀಫಾ ಶ್ರೇಯಾಂಕ: ಸ್ಪೇನ್ 1, ಭಾರತ 154]

ಬ್ರೆಜಿಲ್‌ ಮತ್ತು ಚೀನಾದ ನಡುವೆ 11 ಗಂಟೆಗಳ ಕಾಲಮಾನದ ವ್ಯತ್ಯಾಸವಿದೆ. ಹೀಗಾಗಿ ಬ್ರೆಜಿಲ್‌ನಲ್ಲಿ ನಡೆಯುವ ಪಂದ್ಯಗಳನ್ನು ವೀಕ್ಷಿಸಲು ರಾತ್ರಿಯೆಲ್ಲಾ ಎದ್ದು ಕೂರಬೇಕಾದ ಸ್ಥಿತಿ ಅಭಿಮಾನಿಗಳನ್ನು ಕಾಡುತ್ತಿದೆ. ಹೀಗೆ ಸ್ಪೇನ್‌ ಮತ್ತು ನೆದರ್‌ಲೆಂಡ್‌ ನಡುವಿನ ಪಂದ್ಯ ವೀಕ್ಷಿಸುತ್ತಾ ಕುಳಿತ ವ್ಯಕ್ತಿಯೊಬ್ಬ ಕುಳಿತಲ್ಲೇ ಸಾವನ್ನಪ್ಪಿದ್ದಾನೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

3 Chinese fans die after all-night World Cup viewing

ಮತ್ತೊಬ್ಬ ಅಭಿಮಾನಿ ಉರುಗ್ವೆ ಹಾಗೂ ಕೋಸ್ಟರಿಕಾ ಪಂದ್ಯ ವೀಕ್ಷಿಸುತ್ತಾ ಕುಳಿತ್ತಿದ್ದ ಹಾಗೆ ರಕ್ತದೊತ್ತಡ ಹೆಚ್ಚಾಗಿ ಸಾವನ್ನಪ್ಪಿದ ಎಂದು ತಿಳಿದದು ಬಂದಿದೆ. ಜಿಯಾಂಗ್ಸು ಪ್ರಾಂತ್ಯದ ಸುಜೋಯು ನಗರದಲ್ಲಿ 25 ವರ್ಷದ ಯುವಕನನ್ನು ನಿದ್ರಾಹೀನತೆ ಬಲಿ ಪಡೆದಿದೆ. ಚಿಲಿ ಹಾಗೂ ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಿ ತನ್ನ ಕಂಪ್ಯೂಟರ್ ಡೆಸ್ಕ್ ಮೇಲೆ ಒರಗಿಕೊಂಡವನು ಮತ್ತೆ ಮೇಲೇಳಲಿಲ್ಲ ಎಂದು ಆತನ ಕಂಪನಿ ಪ್ರಕಟಿಸಿದೆ.

ಸ್ಪೇನ್ ಹಾಗೂ ಹಾಲೆಂಡ್ ನಡುವಿನ ಪಂದ್ಯವನ್ನು ವೀಕ್ಷಿಸುತ್ತಿದ್ದ ಮಾಜಿ ವೃತ್ತಿಪರ ಫುಟ್ಬಾಲರ್ ಲಿ ಮಿಂಗ್ಕ್ಯೂಯಾಂಗ್(51) ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಲಿ ಅವರು ಸ್ಪೇನ್ ಸೋಲಿನ ಕಹಿ ಸಹಿಸಲು ಸಾಧ್ಯವಾಗಲಿಲ್ಲ ಎಂದು ಶೆನ್ ಯಾಂಗ್ ಇವನಿಂಗ್ ನ್ಯೂಸ್ ವರದಿ ಮಾಡಿದೆ. 2006 ಹಾಗೂ 2010 ವಿಶ್ವಕಪ್ ಸಂದರ್ಭದಲ್ಲೂ ಈ ರೀತಿ ಸಾವು ನೋವು ಸಂಭವಿಸಿತ್ತು.

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X