ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೋವಿಡ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

Cristiano Ronaldo Breaks The Covid-19 Quarantine And Returns To Italy

ವಿಶ್ವದ ಖ್ಯಾತ ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕೊರೊನಾ ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ ಎಂದು ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಕೋವಿಡ್-19 ಪಾಸಿಟಿವ್ ದೃಢಪಟ್ಟ ಬಳಿಕ ಪೋರ್ಚುಗಲ್ ತಂಡವನ್ನು ತೊರೆದಿದ್ದ ಕ್ರಿಸ್ಟಿಯಾನೊ ಪ್ರತೇಕವಾಗಿ ಕ್ವಾರಂಟೈನ್‌ಗೆ ಒಳಗಾಗಿದ್ದರು.

ಆದರೆ ಇತ್ತೀಚಿನ ಸುದ್ದಿ ಪ್ರಕಾರ ಹಠಾತ್​ ಆಗಿ ನಿಯಮ ಉಲ್ಲಂಘಿಸಿ ಪೋರ್ಚುಗಲ್​ನಿಂದ ಇಟಲಿಗೆ ತೆರಳಿರುವ ಬಗ್ಗೆ ವರದಿಯಾಗಿದೆ. ಕಳೆದ ವಾರವಷ್ಟೇ 35 ವರ್ಷದ ರೊನಾಲ್ಡೊ ಸ್ಪೇನ್​ ವಿರುದ್ಧ ಹಾಗೂ ಫ್ರಾನ್ಸ್​ ವಿರುದ್ಧ ಆಡಿದ್ದರು. ಇವರಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಪೂರ್ಣ ಪೋರ್ಚುಗಲ್​ ತಂಡದ ಆಟಗಾರರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಪೋರ್ಚುಗಲ್​ ತಂಡ ಹೇಳಿಕೊಂಡಿತ್ತು.

ರೊನಾಲ್ಡೊಗೆ ಕೊರೊನಾ ಪಾಸಿಟಿವ್: ''ನನ್ನ ಜೀವನದಲ್ಲಿ ಕಂಡ ಅತಿ ದೊಡ್ಡ ಮೋಸ'' ಎಂದ ಆತನ ಸಹೋದರಿರೊನಾಲ್ಡೊಗೆ ಕೊರೊನಾ ಪಾಸಿಟಿವ್: ''ನನ್ನ ಜೀವನದಲ್ಲಿ ಕಂಡ ಅತಿ ದೊಡ್ಡ ಮೋಸ'' ಎಂದ ಆತನ ಸಹೋದರಿ

ನಿಯಮ ಉಲ್ಲಂಘಿಸಿ ಪೋರ್ಚುಗಲ್​ನಿಂದ ಇಟಲಿಗೆ ತೆರಳಿರುವ ಕ್ರಿಸ್ಟಿಯಾನೊ ರೊನಾಲ್ಡೊ ಯಾವುದೇ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳದೆ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ. ಮತ್ತೊಂದು ವರದಿ ಪ್ರಕಾರ ಆಟಗಾರನ ಮನವಿಯಂತೆ ವಿಶೇಷ ವೈದ್ಯಕೀಯ​ ವಿಮಾನದಲ್ಲಿ ಅವರನ್ನು ಮುನ್ನೆಚ್ಚರಿಕೆಯ ಕ್ರಮಗಳೊಂದಿಗೆ ಇಟಲಿಗೆ ಕರೆದುಕೊಂಡು ಬರಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಖಚಿತಪಟ್ಟಿಲ್ಲ ,ಆದರೆ ಆತ ಕ್ವಾರಂಟೈನ್ ನಿಯಮಗಳನ್ನು ಮುರಿದಿರಬಹುದು ಎಂದು ಇಟಲಿ ಕ್ರೀಡಾ ಸಚಿವ ವಿನ್ಸೆಂಜೊ ಸ್ಪಾಡಾಫೊರಾ ತಿಳಿಸಿದ್ದಾರೆ.

ಪೋರ್ಚುಗೀಸ್ ಫುಟ್ಬಾಲ್ ಫೆಡರೇಶನ್ (ಪಿಎಫ್ಎಫ್) ಮಂಗಳವಾರ ರೊನಾಲ್ಡೊ ಅವರ ಪಾಸಿಟಿವ್ ಪರೀಕ್ಷೆಯನ್ನು ಘೋಷಿಸಿತು ಮತ್ತು ಆತ "ಉತ್ತಮವಾಗಿ, ರೋಗಲಕ್ಷಣಗಳಿಲ್ಲದೆ ಮತ್ತು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ" ಎಂದು ಹೇಳಿದೆ.

ಪೋರ್ಚುಗಲ್ ತಂಡದ ಉಳಿದ ಆಟಗಾರರನ್ನು ಮಂಗಳವಾರ ಪರೀಕ್ಷಿಸಿದ ನಂತರ ನೆಗೆಟಿವ್ ಫಲಿತಾಂಶ ಬಂದಿದೆ.

Story first published: Saturday, October 17, 2020, 10:43 [IST]
Other articles published on Oct 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X