ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರಿಯಲ್ ಮ್ಯಾಡ್ರಿಡ್ ತೊರೆದು ಯುವೆಂಟಸ್ ಸೇರಲಿರುವ ರೊನಾಲ್ಡೋ

ರಿಯಲ್ ಮ್ಯಾಡ್ರಿಡ್ ತೊರೆದು ಯುವೆಂಟಸ್ ಸೇರಲಿರುವ ರೊನಾಲ್ಡೋ | Oneindia Kannada
Cristiano Ronaldo joining Juventus in €100m deal from Real Madrid

ಮ್ಯಾಡ್ರಿಡ್, ಜುಲೈ 10: ಪೋರ್ಚುಗಲ್ ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಅವರು ರಿಯಲ್ ಮ್ಯಾಡ್ರಿಡ್ ತಂಡವನ್ನು ತೊರೆದು ಇಟಾಲಿಯನ್ ಕ್ಲಬ್ ಯುವೆಂಟಸ್ ಅನ್ನು ಸೇರಿಕೊಳ್ಳಲಿದ್ದಾರೆ. ಯುವೆಂಟಸ್ 100 ಮಿಲಿಯನ್ ಯೂರೋಸ್ (ಸುಮಾರು 805 ಕೋ. ರೂ) ನೀಡಲು ಒಪ್ಪಿರುವುದರಿಂದ ರೋನಾಲ್ಡೊ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ.

ಭಾರತ ವನಿತಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದ ಅರೋತೆಭಾರತ ವನಿತಾ ಕ್ರಿಕೆಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿದ ಅರೋತೆ

ಸುಮಾರು 9 ವರ್ಷಗಳ ಕಾಲ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸಿದ್ದ 33ರ ಹರೆಯದ ರೊನಾಲ್ಡೋ ಹೊಸದೊಂದು ಸವಾಲಿಗೆ ತಯಾರಾಗಿದ್ದಾರೆ. ರೊನಾಲ್ಡೋ ಏಜೆಂಟ್ ಜಾರ್ಜ್ ಮೆಂಡೆಸ್ ಅವರು ಯುವೆಂಟಸ್ ಅಧ್ಯಕ್ಷ ಆಂಡ್ರಿಯಾ ಆಗ್ನೆಲ್ಲಿ ಅವರೊಂದಿಗೆ ಮಂಗಳವಾರ ಅಂತಿಮ ಒಪ್ಪಂದಗಳ ಬಗ್ಗೆ ಚರ್ಚಿಸಿದ್ದಾರೆ.

ವಾರ್ಷಿಕ 30 ಮಿಲಿಯನ್ ಯೂರೋಸ್ ( ಟ್ಯಾಕ್ಸ್ ಸೇರಿ ಸುಮಾರು 241 ಕೋಟಿ ರೂ.) ನಂತೆ ನಾಲ್ಕು ವರ್ಷಗಳ ಕಾಲದ ಯುವೆಂಟಸ್ ಒಪ್ಪಂದಕ್ಕೆ ರೊನಾಲ್ಡೋ ಸಹಿ ಹಾಕಲಿದ್ದಾರೆ. ಟ್ಯಾಕ್ಸ್ ಕೂಡ ಕಟ್ಟಬೇಕಾಗಿರುವುದರಿಂದ ಒಟ್ಟಾರೆ ಸುಮಾರು 2743 ಕೋಟಿ ರೂ.ಗಳನ್ನು ಖ್ಯಾತ ಆಟಗಾರನಿಗಾಗಿ ಇಟಾಲಿಯನ್ ಕ್ಲಬ್ ವ್ಯಯಿಸಲಿದೆ.

ರಿಯಲ್ ಮ್ಯಾಡ್ರಿಡ್ ಮಂಗಳವಾರ ಪತ್ರಿಕಾ ಪ್ರಕಟಣೆ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದೆ. ಪ್ರಕಟಣೆಯಲ್ಲಿ ಈ ವಿಚಾರ ತಿಳಿಸುವ ವೇಳೆ 'ಆಟಗಾರನ ಇಚ್ಛೆ ಮತ್ತು ಕೋರಿಕೆಯೆ ಮೇರೆಗೆ' ಎಂಬ ಸಾಲನ್ನೂ ರಿಯಲ್ ಸೇರಿಸಿಕೊಂಡಿದೆ. 'ನಮ್ಮ ಕ್ಲಬ್ ಇತಿಹಾಸದಲ್ಲೇ ವಿಶ್ವಖ್ಯಾತಿಯ, ಪ್ರತಿಭಾವಂತ ಆಟಗಾರ' ಎಂದು ರಿಯಲ್, ಪ್ರಕಟಣೆಯಲ್ಲಿ ರೊನಾಲ್ಡೋ ಅವರನ್ನು ಶ್ಲಾಘಿಸಿದೆ.

'ಈ 9ವರ್ಷಗಳ ಕಾಲ ನಮ್ಮ ತಂಡದಲ್ಲಿದ್ದು ರೊನಾಲ್ಡೋ ಗೆದ್ದಿದ್ದಕ್ಕಿಂತ ಮಿಗಿಲಾಗಿ ಅವರು ಶ್ರದ್ಧೆ, ಕೆಲಸ, ಜವಾಬ್ದಾರಿ, ಪ್ರತಿಭೆ ಮತ್ತು ಹೆಚ್ಚುತ್ತಾ ಸಾಗುವ ಸುಧಾರಣೆ-ಶಕ್ತಿಗೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ' ಎಂದು ರಿಯಲ್ ಮ್ಯಾಡ್ರಿಡ್ ಹೇಳಿದೆ.

Story first published: Tuesday, July 10, 2018, 22:53 [IST]
Other articles published on Jul 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X