ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕ್ರಿಸ್ಚಿಯಾನೊ ರೊನಾಲ್ಡೋಗೆ ಕೆಟ್ಟ ದಿನ, ತಮಾಷೆಯ ಆ್ಯಡ್‌ ನೋಡಿ: ವಿಡಿಯೋ

Cristiano Ronaldo sports leopard print dressing gown in hilarious new advertisement

ಲಿಸ್ಬನ್, ಸೆಪ್ಟೆಂಬರ್ 6: ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ ಕೂಡ ಕೆಟ್ಟ ದಿನದಲ್ಲಿದ್ದಾರೆ. ಫುಟ್ಬಾಲ್ ದೈತ್ಯ ಪಾಲ್ಗೊಂಡಿರುವ ಇತ್ತೀಚಿನ ಆ್ಯಂಡ್‌ನಲ್ಲಿ ರೊನಾಲ್ಡೋ ಅವರನ್ನು ಕೆಟ್ಟ ದಿನದಲ್ಲಿರುವಂತೆ ಬಿಂಬಿಸಲಾಗಿದೆ. ಅಂತೂ ಕೊನೆಗೆ ರೊನಾಲ್ಡೋಗೆ ಒಳ್ಳೇ ದಿನಗಳು ಬಂದಿವೆ ಎಂಬಂತೆ ಆ್ಯಡನ್ನು ಕೊನೆಗೊಳಿಸಲಾಗಿದೆ.

ಟ್ರಾಫಿಕ್ ದಂಡ ಕಟ್ಟಿದ ಬಳಿಕ ವಿರಾಟ್ ಕೊಹ್ಲಿ ಪರಿಸ್ಥಿತಿ ನೋಡಿ!ಟ್ರಾಫಿಕ್ ದಂಡ ಕಟ್ಟಿದ ಬಳಿಕ ವಿರಾಟ್ ಕೊಹ್ಲಿ ಪರಿಸ್ಥಿತಿ ನೋಡಿ!

ಇಟಲಿ ಮೂಲದ ಯುವೆಂಟಸ್ ಕ್ಲಬ್‌ನ ಫಾರ್ವರ್ಡ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಸಿಆರ್‌7 ಎನ್ನುವ ತನ್ನ ಸ್ವಂತ ಬ್ರ್ಯಾಂಡ್‌ ಹೊಂದಿದ್ದಾರೆ. ಈ ಬ್ರ್ಯಾಂಡ್‌ ಬಟ್ಟೆ, ಒಳ ಉಡುಪು, ವಾಚ್, ಶೂ, ಪರ್ಫ್ಯೂಮ್ ಹೀಗೆ ಅನೇಕ ಕ್ರೀಡಾ ವಸ್ತುಗಳನ್ನು ಒಳಗೊಂಡಿದೆ.

ದ್ವಿಶತಕದ ಮೂಲಕ 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನೇ ಕಿಂಗ್‌' ಎಂದ ಸ್ಟೀವ್ ಸ್ಮಿತ್!ದ್ವಿಶತಕದ ಮೂಲಕ 'ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾನೇ ಕಿಂಗ್‌' ಎಂದ ಸ್ಟೀವ್ ಸ್ಮಿತ್!

ಇದರಲ್ಲಿ ಸಿಆರ್‌7 ಪರ್ಫ್ಯೂಮ್ ಜಾಹೀರಾತಿನಲ್ಲಿ ರೊನಾಲ್ಡೋ ಕಾಣಿಸಿಕೊಂಡಿದ್ದು, ಆ್ಯಡ್ ನೋಡಲು ತಮಾಷೆಯಾಗಿದೆ. ಆ್ಯಡ್ ಆರಂಭದಲ್ಲಿ ಮುಂಜಾನೆ ಎದ್ದ ರೊನಾಲ್ಡೋ ಚೆಂಡು ಒದ್ದು ನಾಯಿಯ ಪುತ್ಥಳಿಕೆಯನ್ನು ಹಾಳುಗೆಡವುತ್ತಾರೆ. ಕಾಯಿಸಿಕೊಳ್ಳುವಾಗ ಬ್ರೆಡ್, ಕಾಫೀ ಕುಡಿಯುವಾಗ ನಾಲಗೆ ಸುಟ್ಟುಕೊಳ್ಳುತ್ತಾರೆ. ಆಕಸ್ಮಿಕವಾಗಿ ಈಜುಕೊಳಕ್ಕೆ ಬೀಳುತ್ತಾರೆ. ಅವರ ಫೋಟೋವೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಒಂದು ಲೈಕೂ ಬಂದಿರೋಲ್ಲ.

ಹೀಗೆ ರೊನಾಲ್ಡೋ ದಿನವೇ ಭಾಳ ಕೆಟ್ಟದಾಗಿರತ್ತೆ. ಆದರೆ ಕ್ರಿಸ್ಚಿಯಾನೊ ಯಾವತ್ತು ತನ್ನ ನೂತನ ಸಿಆರ್‌7 ಪರ್ಫ್ಯೂಮ್ ಬಳಸುತ್ತಾರೆ ನೋಡಿ, ದಿನವೇ ಬದಲಾಗುತ್ತೆ. ಈ ಹಿಂದೆ ದಿನವೊಂದರಲ್ಲಿ ರೊನಾಲ್ಡೋ ಎಲ್ಲೆಲ್ಲಿ ವೈಫಲ್ಯಗಳನ್ನು ಕಂಡಿದ್ದರೋ ಅಲ್ಲೆಲ್ಲಾ ಈ ಬಾರಿ ಯಶಸ್ವಿ ಕಾಣುತ್ತಾರೆ. ಗೆಳತಿಯ ಜೊತೆಗೆ ಡೇಟ್‌ ಮಾಡುವಲ್ಲೂ ಸಫಲರಾಗುತ್ತಾರೆ. ಇಲ್ಲಿಗೆ ಆ್ಯಡ್ ಮುಗಿಯುತ್ತೆ (ವಿಡಿಯೋ ಕೃಪೆ: ಮೆಟ್ರೋ)

ದ್ವಿಶತಕ ಬಾರಿಸಿ ಸರ್ ಗ್ಯಾರಿ ಸೋಬರ್ಸ್ ದಾಖಲೆ ಮುರಿದ ಸ್ಮಿತ್, ಬ್ರಾಡ್ಮನ್ ದಾಖಲೆ ಬಾಕಿ!ದ್ವಿಶತಕ ಬಾರಿಸಿ ಸರ್ ಗ್ಯಾರಿ ಸೋಬರ್ಸ್ ದಾಖಲೆ ಮುರಿದ ಸ್ಮಿತ್, ಬ್ರಾಡ್ಮನ್ ದಾಖಲೆ ಬಾಕಿ!

ಅಂದ್ಹಾಗೆ ಈ ವರ್ಷದ ಫೀಫಾ ಅತ್ಯುತ್ತಮ ಆಟಗಾರ ಪಟ್ಟಿಯಲ್ಲಿ ವರ್ಜಿಲ್ ವ್ಯಾನ್ ಡಿಜ್ಕ್ (ಡಚ್), ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) ಹೆಸರುಗಳ ಜೊತೆ ರೊನಾಲ್ಡೋ ಕೂಡ ಶಾರ್ಟ್ ಲಿಸ್ಟ್‌ನಲ್ಲಿದ್ದಾರೆ. ಈ ಪ್ರಶಸ್ತಿ ವಿಶ್ವಶ್ರೇಷ್ಠ ಆಟಗಾರ (88 ಅಂತಾರಾಷ್ಟ್ರೀಯ ಗೋಲ್‌ಗಳು) ಕ್ರಿಸ್ಚಿಯಾನೊಗೆ ಲಭಿಸುವ ಸಾಧ್ಯತೆ ಹೆಚ್ಚಿದೆ.

Story first published: Friday, September 6, 2019, 18:22 [IST]
Other articles published on Sep 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X