ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಅಂಕಪಟ್ಟಿಯಲ್ಲಿ ಮೇಲಕ್ಕೇರಲು ಗೋವಾ, ಜೆಮ್ಷೆಡ್ಪುರ ಸೆಣಸು

By Isl Media
Desperate for a win, Goa face revitalised Jamshedpur

ಗೋವಾ, ಡಿಸೆಂಬರ್,22 : ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ತನ್ನ ಸ್ಥಾನವನ್ನು ಯಾವಾಗಲೂ ಕಾಯ್ದುಕೊಳ್ಳುತ್ತಿದ್ದ ಎಫ್ ಸಿ ಗೋವಾ ಸದ್ಯ 7ನೇ ಸ್ಥಾನದಲ್ಲಿದ್ದು ಕ್ರಿಸ್ಮಸ್ ಹಬ್ಬಕ್ಕೆ ಎರಡು ದಿನಗಳ ವಿಶ್ರಾಂತಿಗೆ ಮುಂಚಿತವಾಗಿ ನಡೆಯುವ ಪಂದ್ಯದಲ್ಲಿ ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಜಯ ಗಳಿಸಿ ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಗುರಿ ಹೊಂದಿದೆ. ಜುವಾನ್ ಫೆರಾಂಡೊ ಪಡೆ ತನ್ನ ಹಿಂದಿನ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದ್ದು ಅಂಕಪಟ್ಟಿಯಲ್ಲಿ ಇದ್ದಕ್ಕಿದ್ದಂತೆ ಕುಸಿತಕ್ಕೆ ಕಾರಣವಾಯಿತು.

ಐಎಸ್‌ಎಲ್: ಅಜೇಯ ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಎಟಿಕೆಎಂಬಿಐಎಸ್‌ಎಲ್: ಅಜೇಯ ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಎಟಿಕೆಎಂಬಿ

ಕಳೆದ ವರ್ಷ ಸೆಮಿಫೈನಲ್ ತಲುಪಿದ್ದ ಗೋವಾ ಎಟಿಕೆ ಮೋಹನ್ ಬಾಗನ್ ವಿರುದ್ಧ ಏಕೈಕ ಗೋಲಿನಿಂದ ಸೋಲನುಭವಿಸಿದರೆ, ಕಳೆದ ಋತುವಿನಲ್ಲಿ ಸೋಲಿನ ಆಘಾತ ನೀಡಿದ್ದ ಚೆನ್ನೈಯಿನ್ ವಿರುದ್ಧ 1-2 ಗೋಲಿನ ಅಂತರದಲ್ಲಿ ಸೋತಿತ್ತು. ಗೋವಾದ ಆಟಗಾರರು ಉತ್ತಮ ರೀತಿಯ ಫುಟ್ಬಾಲ್ ಆಡುತ್ತಿದ್ದರೂ ಡಿಫೆನ್ಸ್ ವಿಭಾಗದಲ್ಲಿ ವೈಫಲ್ಯ ಕಾಣುತ್ತಿರುವುದು ತಂಡದ ಜಯ ಕೈ ಜಾರಲು ಪ್ರಮುಖ ಕಾರಣವಾಗಿದೆ. ಐರ್ಗ ಆಂಗುಲೋ ಒಬ್ಬರೇ ಗೋಲು ಗಳಿಸುತ್ತಿದ್ದು, ಅವರನ್ನೇ ತಂಡ ಹೆಚ್ಚಾಗಿ ಅವಲಂಬಿಸಿದೆ. ಐರ್ಗ ತಂಡ ಗಳಿಸಿರುವ 8 ಗೋಲುಗಳಲ್ಲಿ 6 ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ತಂಡದ ಇತರರ ಆಟಗಾರರೂ ಗೋಲು ಗಳಿಸುವಂತಾದರೆ ಗೋವಾ ಮತ್ತೆ ಅಂಕಪಟ್ಟಿಯಲ್ಲಿ ತನ್ನ ಸ್ಥಾವನ್ನು ಉತ್ತಮಪಡಿಸಿಕೊಳ್ಳಲಿದೆ.

ಇನ್ನೊಂದರೆ ಓವೆನ್ ಕೊಯ್ಲ್ ಅವರ ಗರಡಿಯಲ್ಲಿ ಪಳಗಿರುವ ಜೆಮ್ಷೆಡ್ಪುರ ತಂಡ ಈ ಬಾರಿ ಅತ್ಯಂತ ಆತ್ಮವಿಶ್ವಾಸದಲ್ಲಿದ್ದು, ಬಲಿಷ್ಠ ತಂಡಗಳಿಗೇ ಸೋಲಿನ ಆಘಾತ ನೀಡಿದೆ. 7 ಪಂದ್ಯಗಳನ್ನು ಆಡಿರುವ ಟಾಟಾ ಪಡೆ 10 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡದ ಯಶಸ್ಸಿನಲ್ಲಿ ನೆರಿಜಸ್ ವಾಸ್ಕಿಸ್ ಪಾತ್ರ ಪ್ರಮುಖವಾದುದು. ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ವಾಸಕ್‌ಇಸ್ ತಂಡ ಗಳಿಸಿರುವ 8 ಗೋಲುಗಳಲ್ಲಿ 6 ಗೋಲುಗಳನ್ನು ತಮ್ಮ ಹೆಸರಿನಲ್ಲಿ ದಾಖಲಿಸಿದ್ದಾರೆ. ನಾಳೆಯ ಪಂದ್ಯದ ವಿಶೇಷವೆಂದರೆ ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಐರ್ಗ ಆಂಗುಲೊ ಮತ್ತು ನೆರಿಜಸ್ ವಾಸ್ಕಿಸ್ ಅವರ ಮುಖಾಮುಖಿ ಕುಲೂಹಲವನ್ನು ಕೆರಳಿಸಿದೆ.

ನಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಜೆಮ್ಷೆಡ್ಫುರ ತಂಡದ ಕೋಚ್ ಓವೆನ್ ಕೊಯ್ಲ ಅವರು ಪ್ರತಿ ಪಂದ್ಯದಲ್ಲೂ ನಮ್ಮ ತಂಡದ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಎರಡು ತಂಡಗಳ ನಡುವಿನ ಪಂದ್ಯ ಬುಧವಾರ ನಡೆಯಲಿದೆ. ಉಭಯ ತಂಡಗಳ ಆಟಗಾರರಾದ ಐರ್ಗ ಆಂಗುಲೊ ಮತ್ತು ನೆರಿಜಸ್ ವಾಸ್ಕಿಸ್ ಅವರು ಎರಡೂ ತಂಡಕ್ಕೆ ನಿರ್ಣಾಯಕ ಆಟಗಾರರಾಗಿದ್ದು ಈ ಇಬ್ಬರು ಆಟಗಾರರು ಉಭಯ ತಂಡಗಳು ಗಳಿಸಿರುವ ಗೋಲ್‌ಗಳಲ್ಲಿ ಶೇ. 75 ರಷ್ಟನ್ನು ಇವರಿಬ್ಬರೇ ತಂದು ಕೊಟ್ಟಿದ್ದಾರೆ ಎಂದರು.

ಐಎಸ್‌ಎಲ್: ಉಡುಗೊರೆ ಗೋಲು ನೀಡಿದರೂ ಗೆಲ್ಲದ ಈಸ್ಟ್ ಬೆಂಗಾಲ್ಐಎಸ್‌ಎಲ್: ಉಡುಗೊರೆ ಗೋಲು ನೀಡಿದರೂ ಗೆಲ್ಲದ ಈಸ್ಟ್ ಬೆಂಗಾಲ್

ಎರಡು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕುಸಿತ ಕಂಡಿರುವ ಗೋವಾ ತಂಡದ ಕೋಚ್ ಜುವಾನ್ ಫೆರಾಂಡೊ ಅವರು ನಾವು ಭೂತಕ್ಕಿಂತ ಭವಿಷ್ಯದ ಕಡೆ ಗಮನಹರಿಸುತ್ತೇವೆ. ನಾವೀಗ ಈ ಪಂದ್ಯವನ್ನು ಎದುರು ನೋಡುತ್ತಿದ್ದೇವೆ. ಕಳೆದ ಎರಡು ಪಂದ್ಯ ಸೋತಿರುವುದು ಬೇಸರ ತರಿಸಿದೆ. ಆದರೆ ಬುಧವಾರ ಪಂದ್ಯದತ್ತ ನಮ್ಮ ತಂಡ ಗಮನಹರಿಸಿದೆ. ಬುಧವಾರದ ಪಂದ್ಯಕ್ಕೆ ನಾವು ಹೊಸದೊಂದು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

Story first published: Tuesday, December 22, 2020, 20:54 [IST]
Other articles published on Dec 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X