ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್‌ಲೋಕದ ಧ್ರುವತಾರೆ ಮರಡೋನಾ ಮತ್ತು ಏಳುಬೀಳಿನ ಹಾದಿ

Diego Maradona Biography, Career, Records & Achievements in Kannada

ಫುಟ್ಬಾಲ್ ಜಗತ್ತಿನಲ್ಲಿ ಧ್ರುವ ತಾರೆಯಾಗಿ ಡಿಗೋ ಮರಡೋನಾ ನವೆಂಬರ್ 25ರಂದು ಮೃತಪಟ್ಟಿದ್ದಾರೆ. ಎರಡು ದಶಕಗಳ ಕಾಲ ಫುಟ್ಬಾಲ್ ಲೋಕದಲ್ಲಿ ತನ್ನ ಮೆರೆದಾಡಿದ ಮರಡೋನಾ ಅರ್ಜೆಂಟೈನಾ ತಂಡವನ್ನು ಫುಟ್ಬಾಲ್‌ನಲ್ಲಿ ಮರೆಯುವಂತೆ ಮಾಡಿದರು. 1986ರಲ್ಲಿ ನಾಯಕನಾಗಿ ಅರ್ಜೈಂಟೈನಾಗೆ ವಿಶ್ವಕಪ್ ಗೆಲ್ಲಿಸಿಕೊಟ್ಟರು. 20ನೇ ಶತಮಾನದ ಶ್ರೇಷ್ಠ ಫುಟ್ಬಾಲಿಗ ಎಂಬ ಪ್ರಶಸ್ತಿಗೂ ಭಾಜನರಾಗಿದ್ದರು.

ಇಂತಾ ಮರಡೋನಾ ಜೀವನಗಾಥೆ ಸಾಕಷ್ಟು ಏಳುಬೀಳುಗಳಿಂದ ಕೂಡಿದೆ. ಬಡ ಕುಟುಂಬದಲ್ಲಿ ಬಿಯೋನಸ್ ಎರ್ಸ್‌ನ ವಿಲ್ಲ ಫಿಯೋರಿಟೋ ಎಂಬಲ್ಲಿ ಮರಡೋನಾ ಜನಿಸಿದರು. ಬಾಲ್ಯದಲ್ಲೇ ಫುಟ್ಬಾಲ್ ಗೀಳನ್ನು ಅಂಟಿಸಿಕೊಂಡ ಅದರಲ್ಲೇ ದೊಡ್ಡ ಯಶಸ್ಸನ್ನು ಸಾಧಿಸಿದರು. 8ನೇ ವರ್ಷದಲ್ಲಿ ಗೆಳೆಯರ ಜೊತೆಗೆ ಫುಟ್ಬಾಲ್ ಆಡುತ್ತಿದ್ದ ವೇಳೆ ಸ್ಥಳೀಯ ಫುಟ್ಬಾಲ್ ಕ್ಲಬ್‌ವೊಂದರ ಸದಸ್ಯರೊಬ್ಬರ ಕಣ್ಣಿಗೆ ಬಿದ್ದರು. ಅಲ್ಲಿಂದ ಮರಡೋನಾ ಫುಟ್ಬಾಲ್ ಪಯಣ ಆರಂಭವಾಯಿತು.

ಅರ್ಜೆಂಟೈನಾ ಜೂನಿಯರ್ಸ್‌ಮೂಲಕ ಪದಾರ್ಪಣೆ:

ಡಿಗೋ ಮರಡೋನಾ ಅರ್ಜೆಂಟೈನಾ ಜೂನಿಯರ್ಸ್ ತಂಡದ ಮೂಲಕ 1976ರಲ್ಲಿ ರಾಷ್ಟ್ರೀಯ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿದರು. 5 ವರ್ಷಗಳ ಕಾಲ ಜೂನಿಯರ್ ತಂಡವನ್ನು ಪ್ರತಿನಿಧಿಸಿದ ಮರಡೋನಾ 167 ಪಂದ್ಯಗಳಲ್ಲಿ 115 ಗೋಲ್ ಗಳಿಸಿದ್ದರು. ಈ ಮೂಲಕ ಜೂನಿಯರ್ ಮಟ್ಟದಲ್ಲಿ ಉತ್ತಮ ಯಶಸ್ಸು ಗಳಿಸಿದರು.

1976 ಅಂತಾರಾಷ್ಟ್ರೀಯ ವೃತ್ತಿಜೀವನ:

ಡಿಗೋ ಮರಡೋನಾ ಅವರ ಅಂತಾರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನ 1976ರಿಂದ ಆರಂಭವಾಯಿತು. ಹಂಗೇರಿಯ ವಿರುದ್ಧ ಮೊದಲ ಬಾರಿಗೆ ಅರ್ಜೈಂಟೂನಾ ಪರವಾಗಿ ಮರಡೋನಾ ಕಣಕ್ಕಿಳಿದರು. ಆದರೆ 1978ರ ವಿಶ್ವಕಪ್ ತಂಡದಲ್ಲಿ ಮರಡೋನಾ ಅವಕಾಶಗಳಿಸಲು ವಿಫಲರಾಗಿದ್ದರು. ಅರ್ಜೈಂಟೈನಾದಲ್ಲೇ ನಡೆದಿದ್ದ ಈ ವಿಶ್ವಕಪ್‌ನಲ್ಲಿ ಭಾಗವಹಿಸಲು ಇನ್ನೂ ಕೂಡ ಅಸಮರ್ಥರಾಗಿದ್ದಾರೆ ಎಂದು ಕೋಚ್ ಹೇಳಿಕೆ ನೀಡಿದ್ದರು. ಆದರೆ 1979ರಲ್ಲಿ ಜಪಾನ್‌ನಲ್ಲಿ ನಡೆದ ಫಿಫಾ ವಿಶ್ವ ಯುವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದರು ಮಾತ್ರವಲ್ಲದೆ ಅರ್ಜೆಂಟೈನಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು. ಆ ಟೂರ್ನಿಯಲ್ಲಿ ಮರಡೋನಾ ತಾರೆಯಾಗಿ ಮಿಂಚಿದ್ದರು.

ಮುಟ್ಟಿದ್ದೆಲ್ಲಾ ಚಿನ್ನ:

ಬಳಿಕ ಮರಡೋನಾ ಮುಟ್ಟಿದ್ದೆಲ್ಲಾ ಅಕ್ಷರಶಃ ಚಿನ್ನವಾಗಿತ್ತು. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ ಅತಿ ಕಿರಿಯ ಆಟಗಾರ ಎಂಗ ಹೆಗ್ಗಳಿಕೆಯ ಜೊತೆಗೆ 1979ರಲ್ಲಿ ದಕ್ಷಿಣ ಅಮೆರಿಕಾದ ವರ್ಷದ ಆಟಗಾರ ಎಂಬ ಕಿರೀಟವನ್ನೂ ಮುಡಿಗೇರಿಸಿಕೊಂಡರು. 1982ರಲ್ಲಿ ತನ್ನ 21ನೇ ವಯಸ್ಸಿನಲ್ಲಿ 7.7ಮಿಲಿಯನ್ ಡಾಲರ್‌ಗೆ ಮಾರಾಟವಾಗುವ ಮೂಲಕ ದಾಖಲೆ ಬರೆದು ಸುದ್ದಿಯಾದರು.

ಮರಡೋಡಾ ಅವರ ಶ್ರೇಷ್ಠ ಆಟದ ಕಾರಣದಿಂದಾಗಿ 1986ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೈನಾ ವಿಶ್ವಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಬ್ರಿಟಿಷ್ ಸರ್ಕಾರದಿಂದ ಅವರು ದಶಕದ ಆಟಗಾರ ಎಂಬ ಪ್ರಶಸ್ತಿಯನ್ನೂ ಪಡೆದುಕೊಂಡರು.

ಮರಡೋನಾಗೆ ಅಗ್ನಿ ಪರೀಕ್ಷೆ:

ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಮರಡೋನಾ ಮಾದಕ ವ್ಯಸನಕ್ಕೆ ದಾಸರಾಗಿದ್ದರು. ಇದೇ ಕಾರಣಕ್ಕೆ ಬಾರ್ಸಿಲೋನಾ ನಿರ್ದೇಶಕರ ಜೊತೆಗೆ ವೈಮನಸ್ಸು ಉಂಟಾಯಿತು. ಹೀಗಾಗಿ ಬಾರ್ಸಿಲೋನಾ ತೊರೆದ ಮರಡೋನಾ ನಪೋಲಿ ಕ್ಲಬ್‌ಗೆ ಮತ್ತೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾದರು. ಆದರೆ 1991ರಲ್ಲಿ ಕೊಕೈನ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಕಾರಣ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು.

ಡಿಗೋ ಮರಡೋನಾ ದಾಖಲೆ:

ವಿಶ್ವ ಫುಟ್ಬಾಲ್ ಲೋಕದ ಅದ್ಭುತ ಆಟಗಾರ ಮರಡೋನಾ ವೃತ್ತಿ ಜೀವನದಲ್ಲಿ 312 ಗೋಲ್ ದಾಖಲಿಸಿದ್ದಾರೆ. 21 ವಿಶ್ವಕಪ್ ಪಂದ್ಯಗಳಲ್ಲಿ ಆಡಿರುವ ಮರಡೋನಾ 8 ಗೋಲ್ ಹಾಗೂ 8 ಅಸಿಸ್ ಮಾಡಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೈನಾ ಪರವಾಗಿ ಅತಿ ಹೆಚ್ಚು ಗೋಲ್ ಮಾಡಿದ ಎರಡನೇ ಆಟಗಾರ ಮರಡೋನಾ. 1997ರಲ್ಲಿ ನಿವೃತ್ತಿಯನ್ನು ಪಡೆದ ಮರಡೋನಾ ನಿವೃತ್ತಿಯ ಬಳಿಕ ಫಿಫಾ ಶತಮಾನದ ಆಟಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

Story first published: Thursday, November 26, 2020, 10:05 [IST]
Other articles published on Nov 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X