ಡಿಯಾಗೋ ಮರಡೋನಾ ರೋಮಾಂಚಕಾರಿ ಗೋಲ್: ವಿಡಿಯೋ

ಬ್ಯೂನಸ್ ಏರ್ಸ್: ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಗುರುತಿಸಿಕೊಂಡಿದ್ದ ಅರ್ಜೆಂಟೀನಾದ ಫುಟ್ಬಾಲ್ ದಂತಕತೆ ಡಿಯಾಗೋ ಮರಡೋನಾ ಬುಧವಾರ (ನವೆಂಬರ್ 25) ಹೃದಯಾಘಾತದಿಂದ ನಿಧನರಾಗಿದ್ದಾರೆ. ಫುಟ್ಬಾಲ್ ದಿಗ್ಗಜನ ಅಗಲಿಕೆಗೆ ಕ್ರೀಡಾಲೋಕ ಕಂಬನಿ ಮಿಡಿದಿದೆ. ಮರಡೋನಾಗೆ 60 ವರ್ಷ ವಯಸ್ಸಾಗಿತ್ತು.

ನನ್ನ ಹೀರೋ ಇನ್ನಿಲ್ಲ, ನಿಮಗಾಗಿ ಫುಟ್ಬಾಲ್ ನೋಡುತ್ತಿದೆ: ಗಂಗೂಲಿ

1986ರ ಫೀಫಾ ವಿಶ್ವಕಪ್‌ ಫುಟ್ಬಾಲ್‌ನಲ್ಲಿ ಅರ್ಜೆಂಟೀನಾ ತಂಡದ ನಾಯಕರಾಗಿದ್ದ ಮರಡೋನಾ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಂದು ಫೈನಲ್‌ನಲ್ಲಿ ಅರ್ಜೆಂಟೀನಾ ತಂಡ ವೆಸ್ಟ್ ಜರ್ಮನಿ ವಿರುದ್ಧ 3-2ರ ಅಂತರದಲ್ಲಿ ಗೆದ್ದು ವಿಶ್ವ ಚಾಂಪಿಯನ್ಸ್ ಆಗಿ ಮಿನುಗಿತ್ತು.

ಫುಟ್ಬಾಲ್‌ಲೋಕದ ಧ್ರುವತಾರೆ ಮರಡೋನಾ ಮತ್ತು ಏಳುಬೀಳಿನ ಹಾದಿ

1986ರಲ್ಲಿ ವಿಶ್ವಕಪ್ ಚಾಂಪಿಯನ್ಸ್, 1986ರಲ್ಲಿ ಗೋಲ್ಡನ್ ಬಾಲ್ ವಿನ್ನರ್ ಆಗಿರುವ ಡಿಯಾಗೋ ಒಟ್ಟು ನಾಲ್ಕು ಬಾರಿ ವಿಶ್ವಕಪ್‌ನಲ್ಲಿ ಆಡಿದ್ದಾರೆ. ಬೋಕಾ ಜೂನಿಯರ್ಸ್ ಪರ 1, ಬಾರ್ಸಿಲೋನಾ ಪರ 3, ನೆಪೋಲಿ ಪರ 5 ಹೀಗೆ ಒಟ್ಟು 9 ಬಾರಿ ಕ್ಲಬ್‌ಗಾಗಿ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಮರಡೋನಾಗೆ ಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿತ್ತು. ರಕ್ತಹೀನತೆ, ನಿರ್ಜಲೀಕರಣ ಮತ್ತು ಖಿನ್ನತೆಯ ಕಾರಣದಿಂದಾಗಿ ಮರಡೋನಾ ಅವರು ಲಾ ಪ್ಲಾಟಾದಲ್ಲಿರುವ ಐಪೆನ್ಸಾ ಕ್ಲಿನಿಕ್‌ಗೆ ದಾಖಲಾಗಿದ್ದರು. ಮಾನಸಿಕ ತೊಳಲಾಟದಲ್ಲಿದ್ದ ಮರಡೋನಾ ಬುಧವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

(1986ರ ಯುಇಎಫ್‌ಎ ಸೆಮಿಫೈನಲ್‌ ವೇಳೆ ಮರಡೋನಾ ವಾರ್ಮ್‌ಅಪ್‌ ನೋಡೋದೇ ಚಂದ)

For Quick Alerts
ALLOW NOTIFICATIONS
For Daily Alerts
Story first published: Wednesday, November 25, 2020, 23:58 [IST]
Other articles published on Nov 25, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X