ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫುಟ್ಬಾಲ್ ಹಬ್ಬದ ನಡುವೆ ರಷ್ಯಾ-ಸೌದಿ ಅರೇಬಿಯಾ ತೈಲ ಮಾತುಕತೆ

ಫುಟ್ಬಾಲ್ ಪಂದ್ಯದ ನಡುವೆ ರಷ್ಯಾ-ಸೌದಿ ಅರೇಬಿಯಾ ತೈಲ ಮಾತುಕತೆ | Oneindia kannada
Diplomacy at World Cup opener: Russia and Saudi plan for oil talks

ಒಂದು ತಿಂಗಳ ಕಾಳ ಕಾಲ್ಚೆಂಡಿನಾಟದ ಮನರಂಜನೆಗೆ ಕ್ಷಣಗಣನೆ ಆರಂಭವಾಗಿದೆ. ಫುಟ್ಬಾಲ್ ಹಬ್ಬದ ಆತಿಥ್ಯ ವಹಿಸಿರುವ ರಷ್ಯಾದಲ್ಲಿ ಈಗ ಎಲ್ಲೆಡೆ ಆಟದ್ದೇ ಮಾತು.

ಉದ್ಘಾಟನೆಯ ಪಂದ್ಯ ಆತಿಥೇಯ ರಷ್ಯಾ ಮತ್ತು ಸೌದಿ ಅರೇಬಿಯಾಗಳ ನಡುವೆ ನಡೆಯಲಿದೆ. ಉಭಯ ದೇಶಗಳು ತಮ್ಮ ರಾಜತಾಂತ್ರಿಕ ಮಾತುಕತೆಯನ್ನು ನಡೆಸಲು ಫುಟ್ಬಾಲ್ ವಿಶ್ವಕಪ್‌ಅನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿವೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

21ನೇ ವಿಶ್ವಕಪ್ ಮಹಾಸಮರದ ಉದ್ಘಾಟನಾ ಸಮಾರಂಭದಲ್ಲಿ ಫುಟ್ಬಾಲ್ ಆಡುವ ದೇಶಗಳ ವಿವಿಧ ಗಣ್ಯರು ಆಗಮಿಸಿದ್ದಾರೆ. ಸಮಾರಂಭದ ನೆಪದಲ್ಲಿಯೇ ರಷ್ಯಾ ತನ್ನ ತೈಲ ಪೂರೈಕೆಯ ಸಮಸ್ಯೆಯನ್ನು ನೀಗಿಸಿಕೊಳ್ಳಲು ಸೌದಿ ಅರೇಬಿಯಾ ಜತೆ ಮಾತುಕತೆ ನಡೆಸಲಿದೆ.

ವಿಶ್ವಕಪ್ ಉದ್ಘಾಟನಾ ಸಮಾರಂಭ ವೀಕ್ಷಿಸಲು ಸೌದಿ ರಾಜಕುಮಾರ ಮೊಹಮದ್ ಬಿನ್ ಸಲ್ಮಾನ್ ಆಗಮಿಸಿದ್ದು, ಅವರೊಂದಿಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುರುವಾರ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ ಎಂದು ವಕ್ತಾರ ಡಿಮಿಟ್ರಿ ಪೆಸ್ಕೊವ್ ತಿಳಿಸಿದ್ದಾರೆ.

ಜಾಗತಿಕವಾಗಿ ತೈಲ ಉತ್ಪಾದನೆಯ ಒಪ್ಪಂದದ ಕುರಿತು ಉಭಯ ದೇಶಗಳು ಮಾತುಕತೆ ನಡೆಸಲಿವೆ. ಒಪ್ಪಂದವನ್ನು ಅಂತ್ಯಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದು ಅವರು ಹೇಳಿದ್ದಾರೆ.

ಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯ ಬೆಕ್ಕು ಭವಿಷ್ಯ : ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಷ್ಯಾಕ್ಕೆ ಜಯ

ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದ ಬೆನ್ನಲ್ಲೇ ಕಳೆದ ವರ್ಷದ ಜನವರಿಯಲ್ಲಿ ಮಾಡಿಕೊಂಡ ತೈಲ ಬಳಕೆಯ ದೀರ್ಘಾವಧಿ ಒಪ್ಪಂದವನ್ನು ಬಲಪಡಿಸುವ ಸಂಬಂಧ ಉಭಯ ದೇಶಗಳು ಪ್ರಯತ್ನ ನಡೆಸುತ್ತಿವೆ.

ಪ್ರತಿ ವರ್ಷವೂ ಒಪ್ಪಂದ ಮಾಡಿಕೊಳ್ಳುವ ಬದಲು 10-20 ವರ್ಷದ ದೀರ್ಘಕಾಲದ ಒಪ್ಪಂದ ನಡೆಸಲು ಸೌದಿ ಅರೇಬಿಯಾ ಮತ್ತು ರಷ್ಯಾಗಳು ಉದ್ದೇಶಿಸಿವೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಈ ಹಿಂದೆ ಹೇಳಿದ್ದರು.

ತೈಲ ಬೆಲೆಯನ್ನು ಸ್ಥಿರವಾಗಿ ಇರಿಸುವ ಸಲುವಾಗಿ ಸೌದಿಯ ದೇಶಗಳು ಒಪೆಕ್ (ಪೆಟ್ರೋಲಿಯಂ ರಫ್ತು ದೇಶಗಳ ಒಕ್ಕೂಟ) ಸ್ಥಾಪಿಸಿದ್ದವು. ಇದಕ್ಕೆ ಅನೇಕ ದೇಶಗಳು ಕೈಜೋಡಿಸಿವೆ.

ರಷ್ಯಾವು ಒಪೆಕ್‌ನ ಸದಸ್ಯ ದೇಶವಾಗಿರದಿದ್ದರೂ, ತೈಕ ಬೆಲೆ ಇಳಿಕೆಯಾದ ಸಂದರ್ಭದಲ್ಲಿ ಒಕ್ಕೂಟದ ಜತೆಗೂಡಿ ಕೆಲಸ ಮಾಡಿತ್ತು.

ಸಂಘರ್ಷ ಪೀಡಿತ ಸಿರಿಯಾದ ಅಸ್ಸಾದ್ ವಿರೋಧಿ ಪಡೆಗಳ ಪರವಾಗಿ ಸೌದಿ ನಿಲುವು ತಾಳಿದ್ದರೆ, ರಷ್ಯಾ ಅಸ್ಸಾದ್ ಅವರನ್ನು ಬೆಂಬಲಿಸುತ್ತಿದೆ. ಈ ಭಿನ್ನ ನಿಲುವುಗಳ ನಡುವೆಯೂ ರಷ್ಯಾ ಮತ್ತು ಸೌದಿಗಳು ತಮ್ಮ ಆರ್ಥಿಕ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ.

Story first published: Friday, June 15, 2018, 13:22 [IST]
Other articles published on Jun 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X