ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಎಲ್ ಕ್ಲಾಸಿಕೋ: ಮೆಸ್ಸಿ-ರೊನಾಲ್ಡೋ ಇಲ್ಲದ ತಂಡದಲ್ಲಿ ಮಿಂಚುವರ್ಯಾರು?!

El Clasico preview, timing, live streaming: Four key battles

ಬೆಂಗಳೂರು, ಅಕ್ಟೋಬರ್ 28: ಸ್ಪೇನ್ ನ ಕ್ಯಾಂಪ್ ನೌ ಸ್ಟೇಡಿಯಂನಲ್ಲಿ ನಡೆಯಲಿರುವ ಲಾ ಲಿಗಾ 2018-19ರ ಆವೃತ್ತಿಯ ಪಂದ್ಯದಲ್ಲಿ ಬಲಿಷ್ಟ ಬಾರ್ಸಿಲೋನ ಮತ್ತು ರಿಯಲ್ ಮ್ಯಾಡ್ರಿಡ್ ತಂಡಗಳು ಭಾನುವಾರ (ಅಕ್ಟೋಬರ್ 28) ಮುಖಾಮುಖಿಯಾಗುತ್ತಿವೆ. ಆದರೆ ಎರಡೂ ತಂಡಗಳ ಆಕರ್ಷಣೀಯ ಆಟಗಾರರಾದ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಚಿಯಾನೊ ರೊನಾಲ್ಡೋ ಇಬ್ಬರೂ ಪಾಲ್ಗೊಳ್ಳುತ್ತಿಲ್ಲ!

ಐಎಸ್‌ಎಲ್ 2018: ಡೆಲ್ಲಿ ವಿರುದ್ಧ ಗೆದ್ದು ಸೋಲಿನ ಕಹಿ ಮರೆತ ಮುಂಬೈಐಎಸ್‌ಎಲ್ 2018: ಡೆಲ್ಲಿ ವಿರುದ್ಧ ಗೆದ್ದು ಸೋಲಿನ ಕಹಿ ಮರೆತ ಮುಂಬೈ

ಪ್ರತಿಷ್ಠತ ಲಾ ಲಿಗಾ ಟೂರ್ನಿಯಲ್ಲಿ ಮೆಸ್ಸಿ ಮುಂಚೂಣಿಯ ಬಾರ್ಸಿಲೋನ 25 ಬಾರಿ ಪ್ರಶಸ್ತಿ ಗೆದ್ದಿದ್ದರೆ, ರೊನಾಲ್ಡೋ ಮುಂಚೂಣಿಯ ರಿಯಲ್ ಮ್ಯಾಡ್ರಿಡ್ 33 ಬಾರಿ ಚಾಂಪಿಯನ್ ಆಗಿ ಹೊರ ಮೊಮ್ಮಿದೆ. ಆದರೆ ಈ ಬಾರಿಯ ಮುಖಾಮುಖಿಯಲ್ಲಿ ಇಬ್ಬರೂ ಆಟಗಾರರು ಆಡುವ ತಂಡದಲ್ಲಿ ಕಾರಣಾಂತರ ಕಾಣಿಸಿಕೊಳ್ಳುತ್ತಿಲ್ಲ.

ಮೆಸ್ಸಿ ಗಾಯದ ಕಾರಣದಿಂದ ಸ್ಪರ್ಧೆಯಿಂದ ಹೊರಗುಳಿದಿದ್ದರೆ, ರೊನಾಲ್ಡೋ ಈಗ ರಿಯಲ್ ಮ್ಯಾಡ್ರಿಡ್ ತೊರೆದು ಇಲಿಟಿಯ ಯುವೆಂಟಸ್ ತಂಡವನ್ನು ಸೇರಿಕೊಂಡಿದ್ದಾಗಿದೆ. ಇದೇ ಕಾರಣಕ್ಕೆ ಈ ಇಬ್ಬರ ಬದಲು ಟೂರ್ನಿಯಲ್ಲಿ ಹೊಸಬರು ಮಿಂಚಲು ದಾರಿಯಾಗಿದೆ. ಅಂದ್ಹಾಗೆ, 2007ರಿಂದೀಚೆಗೆ ಇದೇ ಮೊದಲ ಬಾರಿಗೆ ಮೆಸ್ಸಿ-ರೊನಾಲ್ಡೋ ಹೆಸರು ಆಡುವ ತಂಡದಲ್ಲಿ ಸೇರಿಕೊಂಡಿಲ್ಲ!

ಕ್ಲಬ್ ವರ್ಲ್ಡ್ ಕಪ್ ಗೆ ಕ್ರಾಂತಿಕಾರಿ ಪ್ರಸ್ತಾಪ ತಂದ ಫೀಫಾ ಅಧ್ಯಕ್ಷ ಇನ್ಫಾಂಟಿನೊಕ್ಲಬ್ ವರ್ಲ್ಡ್ ಕಪ್ ಗೆ ಕ್ರಾಂತಿಕಾರಿ ಪ್ರಸ್ತಾಪ ತಂದ ಫೀಫಾ ಅಧ್ಯಕ್ಷ ಇನ್ಫಾಂಟಿನೊ

ಭಾನುವಾರ ಪಂದ್ಯದಲ್ಲಿ ಇತ್ತಂಡಗಳು ರೋಚಕ ಸೆಣಸಾಟ ನಡೆಸುವುದರಲ್ಲಿವೆ. ಹೀಗಾಗಿ ರಿಯಲ್ ಮ್ಯಾಡ್ರಿಡ್ ನಲ್ಲಿ ಗರೆಥ್ ಬೇಲ್ ಅವರು ರೊನಾಲ್ಡೋ ಸ್ಥಾನ ತುಂಬಬಲ್ಲ ಸ್ಟಾರ್ ಆಟಗಾರರಾಗಿ ಕಾಣಿಸುತ್ತಿದ್ದಾರೆ. ಬಾರ್ಸಿಲೋನಲ್ಲಿ ಫಿಲಿಪ್ ಕೌಟಿನ್ಹೊ ಮೆಸ್ಸಿ ಸ್ಥಾನದಲ್ಲಿ ಮಿಂಚಬಲ್ಲರು.

ಎಫ್‌ಸಿ ಬಾರ್ಸಿಲೋನ ಮತ್ತು ರಿಯಲ್ ಮ್ಯಾಡ್ರಿಡ್ ಮುಖಾಮುಖಿಗೆ ಎಲ್ ಕ್ಲಾಸಿಕೋ ಅನ್ನಲಾಗುತ್ತದೆ. ಈ ಕುತೂಹಲಕಾರಿ ಪಂದ್ಯ ಅಕ್ಟೋಬರ್ 28ರ ಭಾನುವಾರ 8.45pmಗೆ ಆರಂಭಗೊಳ್ಳಲಿದೆ. ಸೋನಿ ಟೆನ್ 2, ಸೋನಿ ಟೆನ್ 2 ಎಚ್‌ಡಿ ಚಾನೆಲ್‌ಗಳಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ. ವೆಸ್ಟ್ ಇಂಡೀಸ್-ಭಾರತ ಮೂರನೇ ಏಕದಿನ ಕಾದಾಟ ಮುಗಿದಿದೆ, ಬನ್ನಿ ಫುಟ್ಬಾಲ್ ಮೈದಾನಕ್ಕೊಮ್ಮೆ ಇಣುಕು ಹಾಕೋಣ..

Story first published: Sunday, October 28, 2018, 2:34 [IST]
Other articles published on Oct 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X