ಬೆಂಗಳೂರು, ಏಪ್ರಿಲ್ 02: ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ನ 30ನೇ ವಾರದ ಪಂದ್ಯಾವಳಿಗಳು ಏಪ್ರಿಲ್ 01 ರಂದು ಆರಂಭವಾಗಿದ್ದು, ಎವರ್ಟನ್ ವಿರುದ್ಧ ಭರ್ಜರಿ ಜಯದೊಂದಿಗೆ ಲಿವರ್ ಪೂಲ್ ಭರ್ಜರಿ ಶುಭಾರಂಭ ಮಾಡಿದೆ.
ಲಿವರ್ ಪೂಲ್ ಪರ ಸಾಡಿಯೋ ಮನ್, ಫಿಲಿಫೆ ಕೊಟಿನೋ ಹಾಗೂ ಡಿವೊಕ್ ಓರಿಗಿ ತಲಾ ಒಂದೊಂದು ಗೋಲು ಬಾರಿಸಿ 3-1ರ ಜಯ ದಾಖಲಿಸಲು ನೆರವಾದರು. ಈ ಗೆಲುವಿನೊಂದಿಗೆ ಜುರ್ಗೆನ್ ಕ್ಲೊಪ್ ತಂಡ 30 ಪಂದ್ಯಗಳಿಂದ 59 ಅಂಕಗಳನ್ನು ಗಳಿಸಿದ್ದು, ಚಾಂಪಿಯನ್ಸ್ ಲೀಗ್ ನಲ್ಲಿ ಟಾಪ್ 4 ತಂಡವಾಗಿ ಲೀಗ್ ಗೆ ಅರ್ಹತೆ ಪಡೆಯುವ ನಿರೀಕ್ಷೆ ಹೆಚ್ಚಿಸಿಕೊಂಡಿದೆ.
ಇನ್ನೊಂದೆಡೆ, ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಮತ್ತೊಂಡು ಡ್ರಾಗೆ ತೃಪ್ತಿ ಪಟ್ಟಿತು. ವೆಸ್ಟ್ ಬ್ರೊಮ್ವಿಚ್ ಅಲ್ಬಿಯಾನ್ ತಂಡದ ವಿರುದ್ಧ ಜೋಸ್ ಮಾರಿನ್ಹೋ ತಂಡ ನೀರಸ ಪ್ರದರ್ಶನ ನೀಡಿತು.
ವಾರದ ಆಘಾತಕಾರಿ ಫಲಿತಾಂಶದಲ್ಲಿ ಕ್ರಿಸ್ಟಲ್ ಪ್ಲಾಲೇಸ್ ವಿರುದ್ದ ಚೆಲ್ಸಿಯಾ ತಂಡ 2-1 ಅಂತರ ಸೋಲು ಕಂಡಿದ್ದನ್ನು ಸ್ಮರಿಸಬಹುದು. ಅಂಕ ಪಟ್ಟಿಯಲ್ಲಿ ಚೆಲ್ಸಿಯಾ ಈಗ 7 ಅಂಕಗಳನ್ನು ಕಳೆದುಕೊಂಡಿದೆ.