ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಗ್ಲೆಂಡ್ ಆಟಗಾರರಿಗೆ ಜನಾಂಗೀಯ ನಿಂದನೆ, ಅಭಿಮಾನಿಗಳ ಅಸಮಾಧಾನ

Euro 2020: England football players face racial abuse on social media

ಲಂಡನ್: ಸಾಮಾಜಿಕ ಜಾಲತಾಣ ದೈತ್ಯರಾದ ಫೇಸ್ಬುಕ್ ಮತ್ತು ಟ್ವಿಟರ್ ವಿರುದ್ಧ ಫುಟ್ಬಾಲ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೂರೋ 2020 ಫೈನಲ್‌ನಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಸೋತ ಬಳಿಕ ಇಂಗ್ಲೆಂಡ್‌ನ ಮೂವರು ಕರಿಯ ಜನಾಂಗದ ಆಟಗಾರರು ನಿಂದನೆಗೆ ಗುರಿಯಾಗಿದ್ದರಿಂದ ಫೇಸ್ಬುಕ್, ಟ್ವಿಟರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಇಂಗ್ಲೆಂಡ್ vs ಪಾಕಿಸ್ತಾನ: ವೈಟ್‌ವಾಶ್ ಅವಮಾನದಿಂದ ಪಾರಾಗುತ್ತಾ ಪಾಕಿಸ್ತಾನಇಂಗ್ಲೆಂಡ್ vs ಪಾಕಿಸ್ತಾನ: ವೈಟ್‌ವಾಶ್ ಅವಮಾನದಿಂದ ಪಾರಾಗುತ್ತಾ ಪಾಕಿಸ್ತಾನ

ಇಟಲಿ ವಿರುದ್ಧ ಯೂರೋ 2020 ಫೈನಲ್ ಪಂದ್ಯದಲ್ಲಿ ಸೋತ ಬಳಿಕ ಇಂಗ್ಲೆಂಡ್ ಆಟಗಾರರಾದ ಮಾರ್ಕಸ್ ರಾಶ್‌ಫೋರ್ಡ್, ಜಾಡಾನ್ ಸ್ಯಾಂಚೊ ಮತ್ತು ಬುಕಾಯೊ ಸಾಕಾ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. ಪಂದ್ಯದಲ್ಲಿ ಮೂವರೂ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲ್ ಬಾರಿಸಲು ವಿಫಲರಾಗಿದ್ದರು. ಪಂದ್ಯದಲ್ಲಿ ಇಟಲಿ 3-2ರಿಂದ ಗೆದ್ದಿತ್ತು.

ಯೂರೋ 2020ಯಲ್ಲಿ ಇಟಲಿ ವಿರುದ್ಧ ಇಂಗ್ಲೆಂಡ್ ಸೋತ ಬಳಿಕ ಆಂಗ್ಲ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆಗೆ ತುತ್ತಾಗಿದ್ದರು. ಆಟಗಾರರನ್ನು ನಿಂದನೆ ಮಾಡಿರುವ ಪೋಸ್ಟ್‌ ಅನ್ನು ತಕ್ಷಣ ಯಾಕೆ ಟ್ವಿಟರ್, ಫೇಸ್ಬುಕ್ ತೆಗೆದು ಹಾಕಿಲ್ಲ ಎಂದು ಅಭಿಮಾನಿಗಳು ಅಸಮಾಧಾನ ತೋರಿಕೊಂಡಿದ್ದಾರೆ.

ಧೋನಿ ಪದಾರ್ಪಣೆಗೂ ಮುನ್ನವೇ ಸಚಿನ್ ಬ್ಯಾಟ್‌ನಿಂದ ಸಿಡಿದಿತ್ತು ಹೆಲಿಕಾಪ್ಟರ್ ಶಾಟ್: ವಿಡಿಯೋಧೋನಿ ಪದಾರ್ಪಣೆಗೂ ಮುನ್ನವೇ ಸಚಿನ್ ಬ್ಯಾಟ್‌ನಿಂದ ಸಿಡಿದಿತ್ತು ಹೆಲಿಕಾಪ್ಟರ್ ಶಾಟ್: ವಿಡಿಯೋ

"ಇದರ ಹಿಂದೆ ಯಾರಿದ್ದಾರೆ ಅನ್ನೋದು ನಮಗೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಇಂಥ ಕೆಟ್ಟ ನಡೆಗಳನ್ನು ಯಾವತ್ತೂ ಬೆಂಬಲಿಸುವುದಿಲ್ಲ. ಆಟಗಾರರನ್ನು ನಿಂದಿಸಿದವರಿಗೆ ಕಠಿಣ ಶಿಕ್ಷೆ ನೀಡಲು ಬೇಕಾದ ಎಲ್ಲದಕ್ಕೂ ನಾವು ಬೆಂಬಲಿಸುತ್ತೇವೆ," ಎಂದು ಫುಟ್ಬಾಲ್ ಅಸೋಸಿಯೇಶನ್ ಹೇಳಿದೆ.

Story first published: Tuesday, July 13, 2021, 9:18 [IST]
Other articles published on Jul 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X