ಯೂರೋ 2020: ಕ್ರಿಸ್ಚಿಯಾನೊ ರೊನಾಲ್ಡೋ ಕಾಲಿಗೆ 'ಗೋಲ್ಡನ್ ಬೂಟ್'!

ವೆಂಬ್ಲಿ: ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪೋರ್ಚುಗಲ್‌ನ ಸೂಪರ್ ಸ್ಟಾರ್ ಫುಟ್ಬಾಲರ್ ಕ್ರಿಸ್ಚಿಯಾನೊ ರೊನಾಲ್ಡೋ ತನ್ನ ಚೊಚ್ಚಲ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ. ಭಾನುವಾರ (ಭಾರತದ ಕಾಲಮಾನ ಪ್ರಕಾರ ಸೋಮವಾರ) ಇಂಗ್ಲೆಂಡ್‌ನಲ್ಲಿ ನಡೆದ ಯೂರೋ 2020 ಫೈನಲ್‌ ಪಂದ್ಯದ ಬಳಿಕ ರೊನಾಲ್ಡೋ 'ಗೋಲ್ಡನ್ ಬೂಟ್' ತನ್ನದಾಗಿಸಿಕೊಂಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ 2021ರಲ್ಲಿ ಕರ್ನಾಟಕದಿಂದ ನಾಲ್ವರು ಸ್ಪರ್ಧೆಟೋಕಿಯೋ ಒಲಿಂಪಿಕ್ಸ್‌ 2021ರಲ್ಲಿ ಕರ್ನಾಟಕದಿಂದ ನಾಲ್ವರು ಸ್ಪರ್ಧೆ

ಯೂನಿಯನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಇಎಫ್‌ಎ) ಯೂರೋ 2020ಯ ಗ್ರೂಪ್‌ ಹಂತದ ಪ್ರತೀ ಪಂದ್ಯದಲ್ಲೂ ಕ್ರಿಸ್ಚಿಯಾನೋ ರೊನಾಲ್ಡೋ ಪೋರ್ಚುಗಲ್ ತಂಡಕ್ಕೆ ಗೋಲ್ ಬಾರಿಸಿದ್ದರು. ಆದರೆ 16ನೇ ಸುತ್ತಿನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಪೋರ್ಚುಗಲ್ 0-1ರ ಸೋಲನುಭವಿಸಿ ಟೂರ್ನಿಯಿಂದ ಹೊರ ಬಿದ್ದಿತ್ತು.

ಯುರೋಪ್ ಟೂರ್ನಿಗಳ ಇತಿಹಾಸದಲ್ಲಿ ರೊನಾಲ್ಡೋ ಮುಂಚೂಣಿ ಗೋಲ್ ಸರದಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಅತ್ಯಧಿಕ ಗೋಲ್ ಪಟ್ಟಿಯಲ್ಲಿ 109 ಗೋಲ್ ದಾಖಲೆ ಹೊಂದಿರುವ ರೊನಾಲ್ಡೋ ಅವರು ಸೆನೆಗಲ್ ಫುಟ್ಬಾಲರ್ ಅಲಿ ಡೇಯಿ ಸಾಧನೆ ಸರಿದೂಗಿಸಿದ್ದಾರೆ. ಅಂದ್ಹಾಗೆ ಯೂರೋ 2020 ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇಟಲಿ ಗೆದ್ದಿದೆ.

ಬಡತನದೊಂದಿಗೆ ಹೋರಾಡುತ್ತಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ರೇವತಿಬಡತನದೊಂದಿಗೆ ಹೋರಾಡುತ್ತಲೇ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ರೇವತಿ

ಯೂರೋ 2020ಯಲ್ಲಿ ಅತ್ಯಧಿಕ ಗೋಲ್ ಪಟ್ಟಿ
1. ಕ್ರಿಸ್ಚಿಯಾನೊ ರೊನಾಲ್ಡೋ, ಪೋರ್ಚುಗಲ್, ಆಡಿದ ನಿಮಿಷಗಳು 360, ಹೊಡೆದ ಗೋಲ್ 5, ಸಹಕಾರ 1
2. ಪ್ಯಾಟ್ರಿಕ್ ಶಿಕ್, ಝೆಕ್, ಆಡಿದ ನಿಮಿಷಗಳು 404, ಹೊಡೆದ ಗೋಲ್ 5, ಸಹಕಾರ 0
3. ಕರೀಮ್ ಬೆನ್ಝೆಮಾ, ಫ್ರಾನ್ಸ್, ಆಡಿದ ನಿಮಿಷಗಳು 349, ಹೊಡೆದ ಗೋಲ್ 4, ಸಹಕಾರ 0

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Monday, July 12, 2021, 14:05 [IST]
Other articles published on Jul 12, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X