ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಕೊರೊನಾವೈರಸ್ ಕಾರಣ: ಯೂರೋ 2020 ಒಂದು ವರ್ಷ ಮುಂದಕ್ಕೆ

Euro 2020 postponed to 2021 over coronavirus

ಬೆಂಗಳೂರು, ಮಾರ್ಚ್ 17: ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್ ಯೂರೋ 2020 ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ. ಕೊರೊನಾವೈರಸ್‌ನಿಂದಾಗಿ ಪ್ರತಿಷ್ಠಿತ ಟೂರ್ನಿ ಮುಂದೂಡಲ್ಪಟ್ಟಿದೆ. ನಾರ್ವೆ ಮತ್ತು ಸ್ವೀಡನ್ ಫುಟ್ಬಾಲ್ ಅಸೋಸಿಯೇಷನ್ ಮಂಗಳವಾರ (ಮಾರ್ಚ್ 17) ಈ ವಿಚಾರವನ್ನು ತಿಳಿಸಿದೆ.

ಭಾರತದ ನಾಯಕ ವಿರಾಟ್ ಕೊಹ್ಲಿಗೆ ಸವಾಲೆಸೆದ ಪಿವಿ ಸಿಂಧು: ವೀಡಿಯೋಭಾರತದ ನಾಯಕ ವಿರಾಟ್ ಕೊಹ್ಲಿಗೆ ಸವಾಲೆಸೆದ ಪಿವಿ ಸಿಂಧು: ವೀಡಿಯೋ

'ಯೂರೋ 2020 ಟೂರ್ನಿ, 11/6 - 11/7 2021ಕ್ಕೆ ಮುಂದೂಡಲ್ಪಟ್ಟಿದೆ. ಸಭೆಯ ಬಳಿಕ ಮುಂದಿನ ಮಾಹಿತಿಯನ್ನು ನಿಮಗೆ ನೀಡುತ್ತೇವೆ,' ಎಂದು ಸ್ವೀಡನ್ ಫುಟ್ಬಾಲ್ ಅಸೋಸಿಯೇಷನ್‌ನ ಮುಖ್ಯಸ್ಥ ಕಾರ್ಲ್-ಎರಿಕ್ ನಿಲ್ಸನ್ ಹೇಳಿದ್ದಾರೆ. ಅಂದ್ಹಾಗೆ ಅಂತಿಮ ಹಂತದಲ್ಲಿದ್ದ ಯೂರೋ 2020 ಟೂರ್ನಿ ಮುಂದೂಡಲ್ಪಟ್ಟಿದ್ದು ಟೂರ್ನಿಯ ಇತಿಹಾಸದಲ್ಲೇ ಇದೇ ಮೊದಲ ಬಾರಿ.

ನಾರ್ವೇಯನ್ ಫುಟ್ಬಾಲ್ ಅಸೋಸಿಯೇಷನ್ ಕೂಡ ಇದೇ ವಿಚಾರವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿದೆ. ಇದರೊಂದಿಗೆ ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ (ಯುಇಎಫ್‌ಎ) ಚಾಂಪಿಯನ್ಸ್ ಲೀಗ್‌ನ ಪಂದ್ಯಗಳೂ ಮುಂದೂಡಲ್ಪಟ್ಟಿವೆ.

ವಿರಾಟ್‌ or ಸಚಿನ್ : ಇಶಾಂತ್ ಶರ್ಮಾ ಆಯ್ಕೆ ಮಾಡಿದ ಬೆಸ್ಟ್ ಬ್ಯಾಟ್ಸ್‌ಮನ್!ವಿರಾಟ್‌ or ಸಚಿನ್ : ಇಶಾಂತ್ ಶರ್ಮಾ ಆಯ್ಕೆ ಮಾಡಿದ ಬೆಸ್ಟ್ ಬ್ಯಾಟ್ಸ್‌ಮನ್!

ವಿಶ್ವದಾದ್ಯಂತ ಸುಮಾರು 180,000 ಮಂದಿ ಈಗಾಗಲೇ ಮಾರಕ ಕೊರೊನಾವೈರಸ್‌ಗೆ ತುತ್ತಾಗಿದ್ದಾರೆ. ಸುಮಾರು 7000 ಮಂದಿ ಸಾವಿಗೀಡಾಗಿದ್ದಾರೆ. ಇದರಿಂದಾಗಿ ಕ್ರೀಡಾಸ್ಪರ್ಧೆಗಳನ್ನೇ ನಡೆಸಲು ಆಯೋಜಕರು ಹೆದರುತ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲಾ ಕ್ರೀಡಾಕೂಟಗಳೂ ರದ್ದಾಗುತ್ತಿವೆ, ಮುಂದೂಡಲ್ಪಡುತ್ತಿವೆ.

Story first published: Tuesday, March 17, 2020, 19:52 [IST]
Other articles published on Mar 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X