ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಮ್ಯಾನ್ ಯುನೈಟೆಡ್ ಸೋಲಿಸಿ ಚೊಚ್ಚಲ ಯುರೋಪಾ ಲೀಗ್ ಪ್ರಶಸ್ತಿ ಗೆದ್ದ ವಿಲ್ಲಾರ್ರಿಯಲ್

Europa League 2021: Villarreal Beat Manchester United in EPIC Penalty Shootout

ಗ್ಡಾನ್ಸ್ಕ್: ಪೋಲ್ಯಾಂಡ್‌ನ ಗ್ಡಾನ್ಸ್ಕ್ ನಲ್ಲಿ ನಡೆದ ಯುರೋಪಾ ಲೀಗ್ 2021 ಫೈನಲ್ ಪಂದ್ಯದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್ ಸೋಲಿಸಿರುವ ವಿಲ್ಲಾರ್ರಿಯಲ್ ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಡ್ರಾಗೊಂಡು ರೋಚಕ ಹಂತಕ್ಕೆ ಹೋಗಿದ್ದ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ ಕೊನೆಗೊಂಡಿತು.

ವಿಶ್ವಕಪ್‌ನಲ್ಲಿ ಗಂಗೂಲಿ-ದ್ರಾವಿಡ್ ಸ್ಫೋಟಕ ಶತಕ ಬಾರಿಸಿದ್ದು ಇದೇ ದಿನ!ವಿಶ್ವಕಪ್‌ನಲ್ಲಿ ಗಂಗೂಲಿ-ದ್ರಾವಿಡ್ ಸ್ಫೋಟಕ ಶತಕ ಬಾರಿಸಿದ್ದು ಇದೇ ದಿನ!

ಪಂದ್ಯ ಆರಂಭವಾಗಿ ಮೊದಲಾರ್ಧದಲ್ಲಿ ಅಂದರೆ 29ನೇ ನಿಮಿಷದಲ್ಲಿ ವಿಲ್ಲಾರ್ರಿಯಲ್‌ ಪರ ಆಡುವ ಸ್ಪೇನ್‌ ಆಟಗಾರ ಜೆರಾರ್ಡ್ ಮೊರೆನೊ ಗೋಲ್ ಬಾರಿಸಿ ತಂಡಕ್ಕೆ 1-0ಯ ಮುನ್ನಡೆ ಕೊಟ್ಟರು. ಅದಾಗಿ ಮೊದಲಾರ್ಧದಲ್ಲಿ ಮತ್ತೆ ಗೋಲ್ ದಾಖಲಾಗಲಿಲ್ಲ.

ಪಂದ್ಯದ ದ್ವಿತೀಯಾರ್ಧದಲ್ಲಿ ಅಂದರೆ 55ನೇ ನಿಮಿಷದಲ್ಲಿ ಮ್ಯಾನ್ಚೆಸ್ಟರ್ ಯುನೈಟೆಡ್‌ ಪರ ಆಡುವ ಉರುಗ್ವೆ ಫಾರ್ವರ್ಡ್ ಆಟಗಾರ ಎಡಿನ್ಸನ್ ಕವಾನಿ ಗೋಲ್ ಬಾರಿಸಿ ಅಂಕವನ್ನು 1-1ರಿಂದ ಸರಿದೂಗಿಸಿದರು. ಆ ಬಳಿಕ ಇತ್ತಂಡಗಳ ಮಧ್ಯೆ ಜಿದ್ದಾಜಿದ್ದಿ ಹೋರಾಟ ನಡೆಯಿತಾದರೂ ಗೋಲ್ ದಾಖಲಾಗಲಿಲ್ಲ.

ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ಪಂದ್ಯ 1-1ರಿಂದ ಡ್ರಾಗೊಂಡಾಗ ಎರಡೂ ತಂಡಗಳಿಗೆ ಪೆನಾಲ್ಟಿ ಶೂಟೌಟ್ ಅವಕಾಶ ನೀಡಲಾಗಿತ್ತು. ತಂಡದ ಎಲ್ಲಾ ಆಟಗಾರರಿಗೆ ಒಂದೊಂದು ಶೂಟೌಟ್ ಅವಕಾಶ ನೀಡಲಾಗಿತ್ತು. ಆಗ ಮ್ಯಾನ್ಚೆಸ್ಟರ್ ಯುನೈಟೆಡ್ 10 ಪೆನಾಲ್ಟಿ ಶೂಟೌಟ್ ಅಂಕ ಗಳಿಸಿದರೆ ವಿಲ್ಲಾರ್ರಿಯಲ್ 11 ಅಂಕಗಳೊಂದಿಗೆ ಗೆಲುವನ್ನಾಚರಿಸಿತು.

Story first published: Thursday, May 27, 2021, 16:34 [IST]
Other articles published on May 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X