ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019; ಚೆನ್ನೈಯಲ್ಲಿ ಗೆದ್ದು ಅಗ್ರಸ್ಥಾನಕ್ಕೇರಿದ ಗೋವಾ

By Isl Media
Fc Goa Survives Chennaiyin Resurgence During Goalfest

ಚೆನ್ನೈ, ಡಿಸೆಂಬರ್ 26: ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಚೆನ್ನೈಯಿನ್ ಎಫ್ ಸಿ ತಂಡವನ್ನು 4-3 ಗೋಲುಗಳ ಅಂತರದಲ್ಲಿ ಮಣಿಸಿದ ಎಫ್ ಸಿ ಗೋವಾ ತಂಡ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿತು. ಮೊದಲಾರ್ಧದಲ್ಲಿ 3-0 ಅಂತರದಲ್ಲಿ ಮೇಲುಗೈ ಸಾಧಿಸಿದ್ದ ಗೋವಾಕ್ಕೆ ದ್ವಿತಿಯಾರ್ಧದಲ್ಲಿ ಚೆನ್ನೈಯಿನ್ ತಂಡ ದಿಟ್ಟ ತಿರುಗೇಟು ನೀಡಿ ಮೂರು ಗೋಲುಗಳನ್ನು ಗಳಿಸಿತು. ಆದರೆ ಕೊರೊಮಿನಾಸ್ ಗಳಿಸಿದ ಗೋಲು ಗೋವಾ ತಂಡಕ್ಕೆ ಜಯ ತಂದುಕೊಟ್ಟಿತು.

ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ: ಪ್ರಥಮಾರ್ಧದಲ್ಲಿ ಹಿನ್ನಡೆ ಕಂಡಿದ್ದ ಆತಿಥೇಯ ಚೆನ್ನೈಯಿನ್ ದ್ವಿತಿಯಾರ್ಧದಲ್ಲಿ ದಿಟ್ಟ ಹೋರಾಟ ನೀಡಿತು. ಪರಿಣಾಮ 57ನೇ ನಿಮಿಷದಲ್ಲಿ ಆಂಡ್ರೆ ಷೆಂಬ್ರಿ ತಂಡದ ಪರ ಮೊದಲ ಗೋಲು ಗಳಿಸಿದರು. ನಂತರ ರಫಾಯೆಲ್ ಕ್ರಿವೆಲ್ಲರೋ 59ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿದರು. ಆದರೆ ಚೆನ್ನೈ ತಂಡದ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ ಕಾರಣ ಅಲ್ಲಿ ಗೋಲಿನ ಪಟ್ಟಿಯಲ್ಲಿ ಫೆರಾನ್ ಕೊರೊಮಿನಾಸ್ ಅವರ ಹೆಸರು ದಾಖಲಾಗಿರಲಿಲ್ಲ. 63ನೇ ನಿಮಿಷದಲ್ಲಿ ಕೊರೋಮಿನಾಸ್ ಗಳಿಸಿದ ಗೋಲಿನಿಂದ ಪಂದ್ಯ 4-2ರಲ್ಲಿ ಸಾಗಿತು. 90ನೇ ನಿಮಿಷದಲ್ಲಿ ಚೆನ್ನೈಯಿನ್ ಗೆ ಮತ್ತೊಂದು ಯಶಸ್ಸು ಈ ಬಾರಿಯೂ ಕ್ರಿವೆಲ್ಲರೋ ಗಳಿಸಿದ ಗೋಲು ಪಂದ್ಯವನ್ನು 4-3ರ ಕುತೂಹಲದ ಹಂತವನ್ನು ತಲಪುವಂತೆ ಮಾಡಿತು.

ಐಎಸ್‌ಎಲ್ 2019: ಚೇತರಿಸಿದ ಚೆನ್ನೈಗೆ ಬಲಿಷ್ಠ ಗೋವಾ ಸವಾಲು

ಗೋವಾ ಮೇಲುಗೈ: ಗೋವಾ ತಂಡ ಎಂದಿನಂತೆ ಮೊದಲಾರ್ಧದಲ್ಲಿ ತನ್ನ ಮೇಲುಗೈ ಸಾಧಿಸಿತು. ಅಹಮ್ಮದ್ ಜಹೊವ್, ಬ್ರೆಂಡಾನ್ ಫೆರ್ನಾಂಡೀಸ್ ಹಾಗೂ ಹ್ಯುಗೊ ಬೌಮಾಸ್ ಅವರು ಗಳಿಸಿದ ಗೋಲುಗಳ ನೆರವಿನಿಂದ ಪ್ರವಾಸಿ ತಂಡ ಪ್ರಥಮಾರ್ಧದಲ್ಲಿ 3-0 ಗೋಲುಗಳ ಅಂತರದಲ್ಲಿ ಮೇಲುಗೈ ಸಾಧಿಸಿತು. ಮಿಡ್ ಫೀಲ್ದ್ ವಿಭಾಗದಲ್ಲಿ ತಂಡದ ಪ್ರಮುಖ ಅಸ್ತ್ರ ಎನಿಸಿರುವ ಅಹಮ್ಮದ್ ಜಹೊವ್ 26ನೇ ನಿಮಿಷದಲ್ಲಿ ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿತು. ಚೆನ್ನೈಯಿನ್ ತಂಡ ಪ್ರತಿಯೊಂದು ವಿಭಾಗದಲ್ಲೂ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಪರಿಣಾಮ 41ನೇ ನಿಮಿಷದಲ್ಲಿ ಬ್ರೆಂಡಾನ್ ಫೆರ್ನಾಂಡೀಸ್ ತಂಡದ ಪರ ಎರರಡನೇ ಗೋಲು ಗಳಿಸಿದರು, ಚೆನ್ನೈನ ಡಿಫೆನ್ಸ್ ವಿಭಾಗ ಸೊರಗುತ್ತಿದ್ದಂತೆ ಹ್ಯುಗೊ ಬೌಮಾಸ್ 45ನೇ ನಿಮಿಷದಲ್ಲಿ ಗಳಿಸಿದ ಗೋಲು ಪ್ರವಾಸಿ ತಂಡಕ್ಕೆ 3-0 ಮುನ್ನಡೆ ನೀಡಿತು.

ಗೋವಾ ಫೇವರಿಟ್: ಕಳೆದ ನಾಲ್ಕು ಪಂದ್ಯಗಳಲ್ಲಿ ಅಜೇಯವಾಗಿ ಮುನ್ನುಗ್ಗುತ್ತಿರುವ ಚೆನ್ನೈಯಿನ್ ಹಾಗೂ ಎಫ್ ಸಿ ಗೋವಾ ತಂಡಗಳು ಇಂಡಿಯನ್ ಸೂಪರ ಲೀಗ್ ನಲ್ಲಿ ಮತ್ತೊಮ್ಮೆ ಮುಖಾಮುಖಿಯಾದವು. ಸಾಧ್ಯವಿರುವ 12 ಅಂಕಗಳಲ್ಲಿ 8 ಅಂಕಗಳನ್ನು ಗಳಿಸಿರುವ ಚೆನ್ನೈಯಿನ್ ತಂಡ ಈಗ ಆತ್ಯಂತ ಕಠಿಣ ತಂಡವೆನಿಸಿರುವ ಗೋವಾ ವಿರುದ್ಧ ಹೋರಾಟಕ್ಕೆ ಇಳಿಯಿತು. ನಿನ್ನೆ ವರೆಗೂ ಅಗ್ರ ಸ್ಥಾನದಲ್ಲಿದ್ದ ಗೋವಾ ಈಗ ಎಟಿಕೆ ತಂಡಕ್ಕೆ ಆ ಸ್ಥಾನವನ್ನು ಬಿಟ್ಟುಕೊಟ್ಟಿತ್ತು. ಇಂದು ಚೆನ್ನೈ ವಿರುದ್ಧ ಜಯ ಗಳಿಸಿ ಮತ್ತೆ ಅಗ್ರ ಸ್ಥಾನಕ್ಕೇರಲು ಸಜ್ಜಾಯಿತು. ಇದುವರೆಗೂ ಕೇವಲ ಒಂದು ಪಂದ್ಯ ಮಾತ್ರ ಸೋತಿರುವ ಗೋವಾ ಈ ಋತುವಿನ ಫೇವರಿಟ್ ತಂಡವಾಗಿ ಮೈದಳೆದು ನಿಂತಿದೆ. ಕಳೆದ ಮೂರೂ ಪಂದ್ಯಗಳಲ್ಲಿ ಗೆದ್ದ ಆತ್ಮವಿಶ್ವಾಸದೊಂದಿಗೆ ಅಂಗಣಕ್ಕಿಳಿಯಿತು. ಫೆರಾನ್ ಕೊರೋಮಿನಾಸ್ ಕಳೆದ ಎರಡು ಪಂದ್ಯಗಳಲ್ಲಿ 3 ಗೋಲುಗಳನ್ನು ಗಳಿಸಿರುವ ಕೊರೊಮಿನಾಸ್ ಮರಳಿ ಬಂದಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಚೆನ್ನೈಯಿನ್ ಪರ ಲಿಥುವೇನಿಯಾದ ಸ್ತ್ರೈಕರ್ ನೆರಿಜುಸ್ ವಾಸ್ಕಿಸ್ ಕಳೆದ ನಾಲ್ಕು ಪಂದ್ಯಗಳಲ್ಲಿ 5 ಗೋಲು ಗಳಿಸಿ ತಂಡದ ಯಶಸ್ಸಿಗೆ ನೆರವಾಗಿದ್ದಾರೆ. ಆಂಡ್ರೆ ಷೆಂಬ್ರಿ ಹಾಗೂ ಲಾಲ್ರಿಯಾನ್ಜುವಾಲ ಚಾಂಗ್ಟೆ ತಂಡದ ಪದರಮುಖ ಶಕ್ತಿ ಎನಿಸಿದ್ದಾರೆ. ಹೊಸ ಕೋಚ್ ಓವೆನ್ ಕಾಯ್ಲ್ ಆಗಮನದ ನಂತರ ಮರಿನಾ ಮಚಾನ್ಸ್ ಪಡೆಯ ಅದೃಷ್ಟ ಬದಲಾಗಿದೆ ಎಂದರೆ ತಪ್ಪಾಗಲಾರದು.

Story first published: Friday, December 27, 2019, 10:14 [IST]
Other articles published on Dec 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X