ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫಿಫಾ ಪ್ರಶಸ್ತಿ 2020: ಮಸ್ಸಿ, ರೊನಾಲ್ಡೋರನ್ನೇ ಹಿಂದಿಕ್ಕಿದ ರಾಬರ್ಟ್ ಲೆವಾಂಡೋವ್ಸ್ಕಿ

FIFA Awards 2020: Robert Lewandowski won Best Men’s Player Award

ಬೇಯ್‌ರ್ನ್ ಮ್ಯೂನಿಚ್ ತಂಡದ ಸ್ಟ್ರೈಕರ್ ರಾಬರ್ಟ್ ಲೆವಾಂಡೋವ್ಸ್ಕಿ ತನ್ನ ವೃತ್ತಿ ಜೀವನದಲ್ಲಿ ಅತಿ ದೊಡ್ಡ ವೈಯಕ್ತಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಫುಟ್ಬಾಲ್ ಜಗತ್ತಿನ ಶ್ರೇಷ್ಠ ಆಟಗಾರರೆನಿಸಿಕೊಂಡಿರುವ ಲಿಯೋನೆಲ್ ಮೆಸ್ಸಿ ಹಾಗೂ ಕ್ರಿಸ್ಚಿಯಾನೋ ರಿನಾಲ್ಡೋ ಅವರನ್ನು ಹಿಂದಿಕ್ಕಿ ರಾಬರ್ಟ್ ಲೆವಾಂಡೋವ್ಸ್ಕಿ ವರ್ಷದ "ಬೆಸ್ಟ್ ಮೆನ್ಸ್ ಪ್ಲೇಯರ್" ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಪೋಲಾಂಡ್ ತಂಡದ ನಾಯಕಗಿರುವ ರಾಬರ್ಟ್ ಲೆವಾಂಡೋವ್ಸ್ಕಿ ಈ ವರ್ಷ 55 ಗೋಲ್‌ಗಳನ್ನು ಬಾರಿಸಿದ್ದು ಬೇಯ್‌ರ್ನ್ ಮ್ಯೂನಿಚ್ ತಂಡ ಅಂತಾರಾಷ್ಟ್ರೀಯ ಹಾಗೂ ದೇಶೀಯ ಟ್ರೋಫಿಗಳನ್ನು ಗೆಲ್ಲುವಲ್ಲಿ ಪ್ರಮುಖ ಕಾರಣರಾಗಿದ್ದಾರೆ. ಈ ಸಾಧನೆಗೆ ಶ್ರೇಷ್ಠ ಆಟಗಾರ ಪ್ರಶಸ್ತಿ ಲಭಿಸಿದೆ.

ಐಎಸ್‌ಎಲ್: ಜಯದೊಂದಿಗೆ ಮುಂದುವರಿದ ಬಿಎಫ್‌ಸಿ ಅಜೇಯ ಓಟಐಎಸ್‌ಎಲ್: ಜಯದೊಂದಿಗೆ ಮುಂದುವರಿದ ಬಿಎಫ್‌ಸಿ ಅಜೇಯ ಓಟ

ಮ್ಯಾಂಚೆಸ್ಟರ್ ಸಿಟಿ ಹಾಗೂ ಇಂಗ್ಲೆಂಡ್ ತಂಡದ ಡಿಫೆಂಡರ್ ಲೂಸಿ ಬ್ರೋನ್ಸ್ ಮಹಿಳಾ ವಿಭಾಗದ ಶ್ರೇಷ್ಠ ಆಟಗಾರ್ತಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಪ್ರಶಸ್ತಿ ಸಮಾರಂಬ ವರ್ಚುವಲ್ ವೇದಿಕೆಯಲ್ಲಿ ನಡೆದಿದೆ. ಈ ಇಬ್ಬರು ಆಟಗಾರರು ಕೂಡ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಪಡದುಕೊಂಡಿದ್ದಾರೆ.

ಅಂತಿಮ ಮೂವರು ಆಟಗಾರರ ಪಟ್ಟಿಯಲ್ಲಿ ರೊನಾಲ್ಡೋ ಹಾಗೂ ಮೆಸ್ಸಿ ಜೊತೆಗೆ ಲೆವಾಂಡೋವ್ಸ್ಕಿ ಅಗ್ರ ಸ್ಥಾನದಲ್ಲಿದ್ದರು. ಈ ಪ್ರಶಸ್ತಿಯ ಆಯ್ಕೆಯನ್ನು ಜಾಗತಿಕ ಜ್ಯೂರಿಗಳು ಮಾಡಿದ್ದು ಇದಕ್ಕಾಗಿ ರಾಷ್ಟ್ರೀಯ ತಂಡಗಳ ನಾಯಕರು, ಕೋಚ್‌ಗಳು ಹಾಗೂ ಆಯ್ದ ಪತ್ರಕರ್ತರು ಹಾಗೂ ಅಭಿಮಾನಿಗಳು ಮತ ಚಲಾಯಿಸಿದ್ದರು. ಲೆವಾಂಡೋವ್ಸ್ಕಿ 52 ಮತಗಳನ್ನು ಪಡೆದರೆ ರೊನಾಲ್ಡೋ 38 ಹಾಗೂ ಮೆಸ್ಸಿ 35ಮತಗಳನ್ನು ಪಡೆದುಕೊಂಡರು. ಪ್ರಶಸ್ತಿ ಪಡೆದ ಬಳಿಕ ಪ್ರತಿಕ್ರಿಯಿಸಿದ ರಾಬರ್ಟ್ ಲೆವಾಂಡೋವ್ಸ್ಕಿ ಇದೊಂದು ಶ್ರೇಷ್ಠವಾದ ಅನುಭವ ಎಂದಿದ್ದಾರೆ.

Story first published: Friday, December 18, 2020, 17:29 [IST]
Other articles published on Dec 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X