ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತದ ಫುಟ್ಬಾಲ್ ಫೆಡರೇಶನ್ ಬ್ಯಾನ್ ಮಾಡಿದ ಫಿಫಾ: ಬೈಚುಂಗ್ ಭುಟಿಯಾ ಪ್ರತಿಕ್ರಿಯೆ

AIFF Baichung bhutia

ತಕ್ಷಣವೇ ಜಾರಿಗೆ ಬರುವಂತೆ ಭಾರತ ಫುಟ್ಬಾಲ್ ಫೆಡರೇಷನ್‌(ಎಐಎಫ್ಎಫ್) ಸಂಸ್ಥೆಯನ್ನು ಅಮಾನತು ಮಾಡಿರುವ ಫಿಫಾ ಕೌನ್ಸಿಲ್ ನಿರ್ಧಾರದ ಕುರಿತು ಭಾರತದ ಲೆಜೆಂಡರಿ ಫುಟ್ಬಾಲ್ ಆಟಗಾರ ಬೈಚುಂಗ್ ಭುಟಿಯಾ ಪ್ರತಿಕ್ರಿಯೆ ನೀಡಿದ್ದು, ಫಿಫಾ ನಿರ್ಧಾರವನ್ನ ಸ್ವಾಗತಿಸಿದ್ದಾರೆ.

ಭಾರತ ಫುಟ್ಬಾಲ್ ಫೆಡರೇಷನ್‌ನಲ್ಲಿ ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ ಮತ್ತು ಪ್ರಭಾವವನ್ನ ಉಲ್ಲೇಖಿಸಿ ಈಗಾಗಲೇ ಫಿಫಾ, ಭಾರತದ ಫುಟ್ಬಾಲ್ ಫೆಡರೇಷನ್ ಅನ್ನು ಅಮಾನತುಗೊಳಿಸಿದೆ. ಇದರ ಜೊತೆಗೆ ಅಕ್ಟೋಬರ್‌ನಲ್ಲಿ ಭಾರತದಲ್ಲೇ ನಡೆಯಬೇಕಿದ್ದ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ 2022ರ ಆತಿಥ್ಯವನ್ನು ಫಿಫಾ ವಾಪಸ್ ಪಡೆದಿದೆ.

ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಆತಿಥ್ಯ ಕಳೆದುಕೊಂಡ ಭಾರತ

ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಆತಿಥ್ಯ ಕಳೆದುಕೊಂಡ ಭಾರತ

ಫಿಫಾ ನಿಷೇಧ ಹೇರಿದ ಬೆನ್ನಲ್ಲೇ ಎಐಎಫ್ಎಫ್‌ ಅಂಡರ್-17 ಮಹಿಳಾ ಫುಟ್ಬಾಲ್ ವಿಶ್ವಕಪ್‌ ಆತಿಥ್ಯವನ್ನು ಸಹ ಕಳೆದುಕೊಂಡಿರುವ ನಿಜಕ್ಕೂ ಭಾರೀ ಮುಖಭಂಗವಾಗಿದೆ. ಅಕ್ಟೋಬರ್ 11 ರಿಂದ 30 ರವರೆಗೆ ಭಾರತದಲ್ಲೇ ನಡೆಯಬೇಕಿದ್ದ ಈ ಮಹಿಳಾ ಫುಟ್ಬಾಲ್ ವಿಶ್ವಕಪ್ ಆತಿಥ್ಯ ಕಳೆದುಕೊಂಡಿರುವುದು ದೇಶಕ್ಕೆ ಅವಮಾನವಾಗಿದೆ. ಜೊತೆಗೆ ಈ ವಿಶ್ವಕಪ್‌ ಅನ್ನು ಬೇರೆ ಯಾವ ದೇಶದಲ್ಲಿ ನಡೆಸಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಫಿಫಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ 2020ರಲ್ಲಿ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್ ಭಾರತದಲ್ಲಿ ನಡೆಯಲು ದಿನಾಂಕ ನಿಗದಿಯಾಗಿತ್ತು. ಆದ್ರೆ ಕೋವಿಡ್‌-19 ಸಾಂಕ್ರಾಮಿಕ ಕಾರಣಗಳಿಂದಾಗಿ ಟೂರ್ನಿಯನ್ನ 2022ಕ್ಕೆ ಮುಂದೂಡಲಾಗಿತ್ತು.

ವಿರಾಟ್ ಕೊಹ್ಲಿ ಫಾರ್ಮ್ ಕುರಿತು ಭವಿಷ್ಯ ನುಡಿದ ಸೌರವ್ ಗಂಗೂಲಿ! ಆತ ಬಿಗ್ ಮ್ಯಾಚ್ ಪ್ಲೇಯರ್ ಎಂದ ದಾದಾ

ಫಿಫಾ ನಿರ್ಧಾರದ ಕುರಿತು ಬೈಚುಂಗ್ ಭುಟಿಯಾ ಪ್ರತಿಕ್ರಿಯೆ

ಫಿಫಾ ನಿರ್ಧಾರದ ಕುರಿತು ಬೈಚುಂಗ್ ಭುಟಿಯಾ ಪ್ರತಿಕ್ರಿಯೆ

ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಬೈಚುಂಗ್ ಭುಟಿಯಾ ಮಂಗಳವಾರ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಅನ್ನು ನಿಷೇಧಿಸುವ ಫಿಫಾ ನಿರ್ಧಾರವನ್ನು ಕಠಿಣವೆಂದು ಹೈಲೈಟ್ ಮಾಡಿದ್ದು, ಆದ್ರೆ ದೇಶದ ವ್ಯವಸ್ಥೆ ಬದಲಾಗಲು ಇದು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು. ಈ ಮೂಲಕ ಮೂರನೇ ವ್ಯಕ್ತಿಯ ಪ್ರಭಾವ ತಗ್ಗಲಿ ಎಂಬುದು ಭುಟಿಯಾ ಅಭಿಪ್ರಾಯವಾಗಿದೆ.

Breaking News: ಬಿಸಿಸಿಐ ಮಾಜಿ ಕಾರ್ಯದರ್ಶಿ ಅಮಿತಾಭ್ ಚೌಧರಿ ನಿಧನ

ಫಿಫಾ ಬ್ಯಾನ್‌: ಭಾರತದ ಫುಟ್ಬಾಲ್‌ ಆಟಗಾರರು ಪ್ರಮುಖ ಟೂರ್ನಿಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ!

ಫಿಫಾ ಬ್ಯಾನ್‌: ಭಾರತದ ಫುಟ್ಬಾಲ್‌ ಆಟಗಾರರು ಪ್ರಮುಖ ಟೂರ್ನಿಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ!

ಫಿಫಾ ಕಠಿಣ ನಿರ್ಧಾರದಿಂದಾಗಿ ಭಾರತದ ಫುಟ್ಬಾಲ್ ಆಟಗಾರರು ಯಾವುದೇ ಪ್ರಮುಖ ಟೂರ್ನಿಗಳಲ್ಲಿ ಭಾಗಿಯಾಗಲು ಸಾಧ್ಯವಾಗುವುದಿಲ್ಲ. ಎಐಎಫ್‌ಎಫ್‌ ಮೇಲೆ ಫಿಫಾ ನಿಷೇಧ ಹಿಂತೆಗೆದುಕೊಳ್ಳುವವರೆಗೂ ಭಾರತದ ರಾಷ್ಟ್ರೀಯ ತಂಡಗಳು ಯಾವುದೇ ಫಿಫಾ ಅಥವಾ ಎಎಫ್‌ಸಿ ಮಾನ್ಯ ಪಡೆದ ಪಂದ್ಯಾವಳಿಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಜೊತೆಗೆ ಭಾರತದ ಫುಟ್ಬಾಲ್ ಕ್ಲಬ್‌ಗಳು ಕಾಂಟಿನೆಂಟಲ್ ಪಂದ್ಯಾವಳಿಗಳಲ್ಲಿ ದೇಶವನ್ನ ಪ್ರತಿನಿಧಿಸುವ ಅವಕಾಶವಿಲ್ಲ.

ಜೊತೆಗೆ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಮೆಂಟ್‌ನಲ್ಲಿ ಭಾಗಿಯಾಗಲಿರುವ ವಿದೇಶಿ ಆಟಗಾರರು ಮುಂದಿನ ಸೀಸನ್‌ನಲ್ಲಿ ಆಟವಾಡಲು ಹಿಂದೇಟು ಹಾಕುವ ಸಾಧ್ಯತೆಯಿದೆ.

Story first published: Tuesday, August 16, 2022, 13:51 [IST]
Other articles published on Aug 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X