ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ಶ್ರೇಯಾಂಕ: ಬ್ರೆಜಿಲ್ -ಭಾರತ ಅಂತರ ಕಡಿಮೆ

By Mahesh

ಜೂರಿಚ್, ಜು.18: ವಿಶ್ವ ಚಾಂಪಿಯನ್ ಜರ್ಮನಿ ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ. ಬ್ರೆಜಿಲ್ಲಿನಲ್ಲಿ ನಡೆದ ಫೀಫಾ ವಿಶ್ವಕಪ್ ಟೂರ್ನಿ ನಂತರ ಫೀಫಾ ಹೊಸ ಶ್ರೇಯಾಂಕ ಪಟ್ಟಿ ಪ್ರಕಟಿಸಿದೆ. ಅಚ್ಚರಿಯೆಂದರೆ ಬ್ರೆಜಿಲ್ ಹಾಗೂ ಭಾರತದ ನಡುವಿನ ಅಂತರ ಕಡಿಮೆಗೊಂಡಿದೆ.

ಸುಮಾರು 1724 ಅಂಕ ಗಳಿಸಿರುವ ಜರ್ಮನ್ನರು ಅಗ್ರಸ್ಥಾನಕ್ಕೇರಿದ್ದಾರೆ. ವಿಶ್ವಕಪ್ ಟೂರ್ನಿಗೂ ಮುನ್ನ ಎರಡನೇ ಸ್ಥಾನದಲ್ಲಿದ್ದರು. ಅರ್ಜೆಂಟಿನಾ 1,606 ಅಂಕಗಳೊಂದಿಗೆ ಮೂರು ಸ್ಥಾನ ಮೇಲಕ್ಕೇರಿ ಎರಡನೇ ಸ್ಥಾನ ಗಳಿಸಿದೆ.

ಈ ಬಾರಿಯ ಟೂರ್ನಿಯಲ್ಲಿ ಮೂರನೆ ಸ್ಥಾನ ಪಡೆದುಕೊಂಡ ಹಾಲೆಂಡಿನ ಡಚ್ಚರು 1,496 ಅಂಕ ಪಡೆದು ಪಟ್ಟಿಯಲ್ಲೂ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶ್ವಕಪ್ ಟೂರ್ನಿಗೂ ಮುನ್ನ 15ನೇ ಸ್ಥಾನದಲ್ಲಿದ್ದರು.

Fifa football ranking: Gap between Brazil and India narrows!

ಐದು ಬಾರಿ ವಿಶ್ವ ಚಾಂಪಿಯನ್ ಬ್ರ್ರೆಜಿಲ್ ತಂಡ ಫೀಫಾ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದಾರೆ. 1241 ಅಂಕ ಗಳಿಸಿದ್ದಾರೆ. ಈ ಹಿಂದೆ 2013ರಲ್ಲಿ 22ನೇ ಸ್ಥಾನಕ್ಕೆ ಬ್ರೆಜಿಲ್ ಕುಸಿದಿತ್ತು.[ಕ್ಯಾನ್ಸರ್ ಪೀಡಿತರಿಗೆ ಹಣ ಹಂಚಿದ ಫುಟ್ಬಾಲ್ ತಾರೆ]

ಸದ್ಯಕ್ಕೆ ಯಾವುದೇ ಪ್ರಮುಖ ಪಂದ್ಯಾವಳಿಗಳು ಇಲ್ಲದ ಕಾರಣ ಸುನಿಲ್ ಛೇಟ್ರಿ ನೇತೃತ್ವದ ಭಾರತ ತಂಡ 144 ಅಂಕಗಳೊಂದಿಗೆ 3 ಸ್ಥಾನ ಜಿಗಿದು 151ಕ್ಕೆ ಸ್ಥಾನಕ್ಕೇರುವುದೇ ದೊಡ್ಡ ಸಾಧನೆ ಎನ್ನಬಹುದು. 1993ರಲ್ಲಿ 100ನೇ ಶ್ರೇಯಾಂಕಕ್ಕೇರಿದ್ದು, 1996ರಲ್ಲಿ 96ಸ್ಥಾನ ಪಡೆದಿದ್ದು ಈವರೆಗಿನ ದೊಡ್ಡ ಸಾಧನೆಯಾಗಿದೆ.[ನೆಟ್ಟಿಗರ ಕಣ್ಣು ಮಾರಿಯೋ ಗೆಳತಿ ಮ್ಯಾಲ!]


ಫೀಫಾ ಶ್ರೇಯಾಂಕ ಪಟ್ಟಿ(ಜು.17,2014ರ ಅನ್ವಯ)(ಕಳೆದ ಬಾರಿಯ ಸ್ಥಾನಕ್ಕಿಂತ ಈ ಬಾರಿ ವ್ಯತ್ಯಾಸ)
1. ಜರ್ಮನಿ (+1)
2 ಅರ್ಜೆಂಟಿನಾ (+3)
3 ನೆದರ್ಲೆಂಡ್ (+12)
4 ಕೊಲಂಬಿಯಾ (+4)
5 ಬೆಲ್ಜಿಯಂ (+6)
6 ಉರುಗ್ವೆ
7 ಬ್ರೆಜಿಲ್
8 ಸ್ಪೇನ್
9 ಸ್ವಿಟ್ಜರ್ಲೆಂಡ್
10 ಫ್ರಾನ್ಸ್
11 ಪೋರ್ಚುಗಲ್
12 ಚಿಲಿ
13 ಗ್ರೀಸ್
14 ಇಟಲಿ
15 ಯುಎಸ್ ಎ
16 ಕೋಸ್ಟರಿಕಾ
17 ಕ್ರೋವೇಷಿಯಾ
18 ಮೆಕ್ಸಿಕೋ
19 ಬೊಸ್ನಿಯಾ ಹಾಗೂ ಹರ್ಜೆಗೋವಿನಿಯಾ
20 ಇಂಗ್ಲೆಂಡ್

Story first published: Wednesday, January 3, 2018, 10:13 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X