ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಭಾರತದ ಫುಟ್ಬಾಲ್ ನಾಯಕ ಸುನಿಲ್ ಛೆಟ್ರಿಗೆ ಫೀಫಾದಿಂದ ಗೌರವ: 3 ಎಪಿಸೋಡ್‌ಗಳ ಡಾಕ್ಯುಮೆಂಟರಿ ಬಿಡುಗಡೆ

FIFA released 3-episode series about Indian Football star Sunil Chhetri named Captain Fantastic

ಭಾರತದ ಫುಟ್ಬಾಲ್ ದಿಗ್ಗಜ ಸುನಿಲ್ ಛೆಟ್ರಿ ಫುಟ್ಬಾಲ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ಆಟಗಾರ. ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಭಾರತ ಫುಟ್ಬಾಲ್ ತಮಡ ಅತ್ಯುನ್ನಮ ಸಾಧನೆ ಮಾಡಲು ಸಾಧ್ಯವಾಗದಿದ್ದರೂ ಸುನಿಲ್ ಛೆಟ್ರಿ ಮಾತ್ರ ಅದ್ಭುತ ಸಾಧನೆಯನ್ನು ಮಾಡಿಕೊಂಡು ಬಂದಿದ್ದಾರೆ. ಕಳೆದ ಒಂದು ದಶಕದಲ್ಲಿ ಭಾರತೀಯ ಫುಟ್ಬಾಲ್‌ಗೆ ಛೆಟ್ರಿ ತನ್ನದೇ ಆಟ ಕೊಡುಗೆ ನೀಡಿದ್ದಾರೆ.

ಇಂಥಾ ಸುನಿಲ್ ಛೇಟ್ರಿಗೆ ಫೀಫಾ ವಿಶೇಷ ಗೌರವ ನೀಡಿದೆ. ಭಾರತೀಯ ಫುಟ್ಬಾಲ್ ತಂಡದ ನಾಯಕನ ಫುಟ್ಬಾಲ್ ಬದುಕಿನ ಬಗ್ಗೆ ವಿಶೇಷ ಸಾಕ್ಷ್ಯಚಿತ್ರವೊಂದನ್ನು ಫೀಫಾ ಬಿಡುಗಡೆಗೊಳಿಸಿದೆ. ಮೂರು ಎಪಿಸೋಡ್‌ಗಳ ಸರಣಿ ಇದಾಗಿದ್ದು 'ಕ್ಯಾಪ್ಟನ್ ಫೆಂಟಾಸ್ಟಿಕ್' ಎಂದು ಹೆಸರಿಸಲಾಗಿದೆ.

ವಿರಾಟ್ ಕೊಹ್ಲಿಗೆ ರನ್ ಹಸಿವಿದೆ, ಲಯಕ್ಕೆ ಮರಳಿದ್ದಾರೆ: ಸಂಜಯ್ ಬಂಗಾರ್ವಿರಾಟ್ ಕೊಹ್ಲಿಗೆ ರನ್ ಹಸಿವಿದೆ, ಲಯಕ್ಕೆ ಮರಳಿದ್ದಾರೆ: ಸಂಜಯ್ ಬಂಗಾರ್

ಫುಟ್ಬಾಲ್‌ನ ಜಾಗತಿಕ ಆಡಳಿತ ಸಂಸ್ಥೆಯಾಗಿರುವ ಫಿಫಾ ಗುರುವಾರ ಈ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದ್ದು ಸುನಿಲ್ ಛೆಟ್ರಿ ಅವರ ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದ ಕುರಿತಾದ ವಿಶೇಷ ಸರಣಿಯ್ನು ಬಿಡುಗಡೆಗೊಳಿಸಿರುವುದಾಗಿ ತಿಳಿಸಿದೆ. ಫೀಫಾದ ಸ್ಟ್ರೀಮಿಂಗ್ ವೇದಿಕೆಯಾಗಿರುವ 'FIFA+'ನಲ್ಲಿ ಈ ಡಾಕ್ಯುಮೆಂಟರಿ ಲಭ್ಯವಿದೆ.

ಟ್ವೀಟ್ ಮೂಲಕ ಮಾಹಿತಿ

'ಫಿಫಾ ವರ್ಲ್ಡ್ ಕಪ್' ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು ಇದರಲ್ಲಿ "ನಿಮಗೆಲ್ಲಾ ರೊನಾಲ್ಡೋ ಮತ್ತು ಮೆಸ್ಸಿ ಬಗ್ಗೆ ಗೊತ್ತೇ ಇದೆ. ಆದರೆ ಈಗ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಸಕ್ರಿಯವಾಗಿರುವ ಆಟಗಾರರ ಪೈಕಿ ಮೂರನೇ ಅತಿ ಹೆಚ್ಚು ಹೆಚ್ಚು ಗೋಲುಗಳಿಸಿದ ಆಟಗಾರನ ಬಗ್ಗೆ ತಿಳಿದಿಕೊಳ್ಳುವ ಸಮಯ. 'ಸುನಿಲ್ ಛೆಟ್ರಿ| ಕ್ಯಾಪ್ಟನ್ ಫೆಂಟಾಸ್ಟಿಕ್" ಫೀಫಾ +ನಲ್ಲಿ ಈಗ ಲಭ್ಯವಿದೆ" ಎಂದು ಟ್ವೀಟ್ ಮಾಡಿದೆ.

ಭಾರತೀಯ ಫುಟ್ಬಾಲ್ ಆಟಗಾರನ ಜೀವನ ಕಥನ

ಭಾರತೀಯ ಫುಟ್ಬಾಲ್ ಆಟಗಾರನ ಜೀವನ ಕಥನ

ಭಾರತ ಫುಟ್ಬಾಲ್ ಕಂಡ ಪ್ರತಿಭಾನ್ವಿತ ಆಟಗಾರನ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳನ್ನು ಈ ಡಾಕ್ಯುಮೆಂಟರಿ ಹೊಂದಿದೆ. ಭಾರತೀಯ ಫುಟ್ಬಾಲ್ ಪ್ರೇಮಿಗಳಿಗೂ ತಿಳಿಯದ ಸಾಕಷ್ಟು ಅಂಶಗಳನ್ನು ಈ ಡಾಕ್ಯುಮೆಂಟರಿ ಹೊಂದಿದೆ. ಯೌವನದ ಕಷ್ಟದ ದಿನಗಳ ಸಂದರ್ಭ, 20ನೇ ಹರೆಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ, ವೈಯಕ್ತಿಕ ಜೀವನ, ಪ್ರಶಸ್ತಿ ಪುರಸ್ಕಾರಗಳ ಜೊತೆಗೆ ಫುಟ್ಬಾಲ್ ಆಟಗಾರನಾಗಿ ಸಾಧಿಸಿದ ಅತ್ಯುನ್ನತ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ದಿಗ್ಗಜರ ಸಾಲಿನಲ್ಲಿ ಛೆಟ್ರಿ

ದಿಗ್ಗಜರ ಸಾಲಿನಲ್ಲಿ ಛೆಟ್ರಿ

ಸುನಿಲ್ ಛೆಟ್ರಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 84 ಗೋಲ್‌ಗಳನ್ನು ಬಾರಿಸಿದ್ದು ಸಕ್ರಿಯ ಫುಟ್ಬಾಲ್ ಆಟಗಾರರ ಪೈಕಿ ಮೂರನೇ ಅತಿ ಹೆಚ್ಚು ಗೋಲುಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಫುಟ್ಬಾಲ್‌ನ ದಿಗ್ಗಜ ಆಟಗಾರರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ (90) ಮತ್ತು ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117) ಮಾತ್ರ ಛೆಟ್ರಿಗಿಂತ ಮುಂದಿದ್ದಾರೆ. ಅಲ್ಲದೆ ಫುಟ್ಬಾಲ್ ಇತಿಹಾಸದಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ಗೋಲುಗಳಿಸಿದ ಆಟಗಾರ ಕೂಡ ಸುನಿಲ್ ಛೆಟ್ರಿ.

ಭಾರತೀಯ ಫುಟ್ಬಾಲ್‌ನ ದಂತಕತೆ

ಭಾರತೀಯ ಫುಟ್ಬಾಲ್‌ನ ದಂತಕತೆ

ಸುನಿಲ್ ಛೆಟ್ರಿ 2007, 2009, ಮತ್ತು 2012ರಲ್ಲಿ ಭಾರತ ನೆಹರು ಕಪ್ ಟ್ರೋಫಿ ಗೆಲ್ಲಲು ಮತ್ತು 2011, 2015, ಮತ್ತು 2021 ರ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (SAFF) ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಸಾಧನೆ ಮಾಡಲು ಪ್ರಮುಖ ಕಾರಣವಾಗಿದ್ದರು. ಭಾರತದ ಈ ಸ್ಟಾರ್ ಫುಟ್ಬಾಲ್ ಆಟಗಾರನಿಗೆ ಏಳು ಬಾರಿ ಎಐಎಫ್‌ಎಫ್ ವರ್ಷದ ಆಟಗಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಫುಟ್ಬಾಲ್‌ನಲ್ಲಿ ನೀಡಿದ ಸಾಧನೆಯನ್ನು ಪರಿಗಣಿಸಿ ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ಕ್ರೀಡಾ ರತ್ನ ಪಶಸ್ತಿಯನ್ನು 2021ರಲ್ಲಿ ಭಾರತ ಸರ್ಕಾರ ನೀಡಿ ಗೌರವಿಸಿದೆ.

Story first published: Wednesday, September 28, 2022, 16:40 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X